ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಶ್ರೀಲಂಕಾ ವಿರುದ್ಧ ಸರಣಿಗೆ ಬಾರಿ ಬದಲಾದ ಭಾರತ, ನಾಲ್ವರು ಔಟ್, ಇಬ್ಬರು ಗಾಯಾಳು ಹೇಗಿದೆ ಗೊತ್ತೇ ಆಯ್ಕೆಯಾದ ಭಾರತ ತಂಡ??

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನು ಭಾರತ ತಂಡ ಗೆಲ್ಲುತ್ತಿದ್ದಂತೆ ಈಗ ಶ್ರೀಲಂಕಾ ವಿರುದ್ಧದ ಸರಣಿಗೆ ಸಿದ್ಧವಾಗಿ ನಿಂತಿದೆ. ಇನ್ನೇನು ಕೆಲವೇ ವಾರಗಳಲ್ಲಿ ಐಪಿಎಲ್ ಕೂಡಾ ಪ್ರಾರಂಭವಾಗುವ ಪರಿಸ್ಥಿತಿ ಎದ್ದು ಕಾಣುತ್ತಿದೆ. ಇನ್ನು ಭಾರತ ಹಾಗೂ ಶ್ರೀಲಂಕಾ ಸರಣಿಗೆ ಕೆಲವರು ತಂಡದ ಒಳಗೆ ಬಂದರೆ ಇನ್ನೂ ಕೆಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು ಇನ್ನು ಕೆಲವರು ಗಾ’ಯದ ಕಾರಣದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಒಂದು ಹೊಸ ಮುಖವು ಕೂಡ ಈ ಸರಣಿಗೆ ತಂಡವನ್ನು ಸೇರಿಕೊಳ್ಳಲಿದೆ.

ಹಾಗಿದ್ದರೆ ಈ ಕುರಿತಂತೆ ಈ ಬಾರಿಯ ಸರಣಿಯಲ್ಲಿ ಯಾರು ಆಡಲಿದ್ದಾರೆ ಯಾರು ಎಂಬುದರ ಕುರಿತು ತಿಳಿಯೋಣ ಬನ್ನಿ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಮೂರು ಟಿ20 ಪಂದ್ಯಗಳು ಹಾಗೂ ಎರಡು ಟೆಸ್ಟ್ ಪಂದ್ಯಗಳು ಇರಲಿವೆ. ಈ ಎಷ್ಟು ಸರಣಿಯ ಮೂಲಕ ರೋಹಿತ್ ಶರ್ಮಾ ರವರು ಮೂರು ಫಾರ್ಮ್ಯಾಟ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಕಪ್ತಾನನಾಗಿ ಅಧಿಕಾರವನ್ನು ಸ್ವೀಕರಿಸಲಿದ್ದಾರೆ. ವಿರಾಟ್ ಕೊಹ್ಲಿ ರವರ ನಂತರ ಮೂರು ಫಾರ್ಮೆಟ್ ಗಳಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಮುನ್ನಡೆಸುತ್ತಿರುವ ಕಪ್ತಾನನಾಗಿ ರೋಹಿತ್ ಶರ್ಮಾ ರವರು ಮೊದಲಬಾರಿಗೆ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಟೆಸ್ಟ್ ತಂಡದ ವಿಚಾರಕ್ಕೆ ಬರುವುದಾದರೆ ಚೇತೇಶ್ವರ ಪೂಜಾರ ಶಾಂತ ಶರ್ಮ ಅಜಿಂಕ್ಯ ರಹನೆ ಹಾಗೂ ವೃದ್ಧಿಮಾನ್ ಸಾಹ ರವರನ್ನು ತಂಡದಿಂದ ಕೈಬಿಡಲಾಗಿದೆ. ಟಿ20 ಸರಣಿಗೆ ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ಮತ್ತೊಮ್ಮೆ ಕಂಬ್ಯಾಕ್ ಮಾಡಲಿದ್ದಾರೆ. ಒಂದು ವರ್ಷಗಳ ನಂತರ ಕುಲದೀಪ್ ಯಾದವ್ ರವರು ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಟಿ20 ತಂಡಕ್ಕೆ ಸಂಜು ಸಮ್ಸನ್ ಕೂಡ ಹಲವಾರು ಸಮಯಗಳ ನಂತರ ಮರು ಪ್ರವೇಶವನ್ನು ಪಡೆಯಲಿದ್ದಾರೆ.

ಕೆ ಎಲ್ ರಾಹುಲ್ ಹಾಗೂ ವಾಷಿಂಗ್ಟನ್ ಸುಂದರ್ ಇಬ್ಬರು ಕೂಡ ಗಾ’ಯದ ಕಾರಣದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರಿಷಬ್ ಪಂತ್ ಇಬ್ಬರೂ ಕೂಡ ಟೆಸ್ಟ್ ಸರಣಿಯನ್ನು ಆಡಲಿದ್ದು ಟಿ20 ಸರಣಿಯಿಂದ ವಿಶ್ರಾಂತಿಯನ್ನು ಪಡೆಯಲಿದ್ದಾರೆ. ಆಲ್-ರೌಂಡರ್ ಶಾರ್ದುಲ್ ಠಾಕೂರ್ ಅವರಿಗೆ ಈ ಸರಣಿಯಿಂದ ವಿಶ್ರಾಂತಿಯನ್ನು ನೀಡಲಾಗಿದೆ. ಉತ್ತರಪ್ರದೇಶದ ಎಡಗೈ ಸ್ಪಿನ್ ಬೌಲರ್ ಆಗಿರುವ ಸೌರಬ್ ಕುಮಾರ್ ಎನ್ನುವ ಯುವ ಪ್ರತಿಭೆಗೆ ಈ ಸರಣಿಯಲ್ಲಿ ಅವಕಾಶವನ್ನು ನೀಡಲಾಗುತ್ತಿದೆ. ಹಲವಾರು ಬದಲಾವಣೆಗಳಿದ್ದು ಈ ಬದಲಾವಣೆಗಳಿಂದ ತಂಡ ಹೇಗೆ ಯಶಸ್ವಿಯಾಗುತ್ತದೆ ಎಂಬುದನ್ನು ನೋಡಬೇಕಾಗಿದೆ.

Get real time updates directly on you device, subscribe now.