ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸಿಗ್ನಲ್ ನಲ್ಲಿ ಅಭಿಮಾನಿಗಳು ಸಿಕ್ಕಾಗ ಶಿವಣ್ಣ ಮಾತನಾಡಿದ್ದು ಏನು ಗೊತ್ತೇ?? ಸಿಂಪಲ್ ಅಂದರೆ ಶಿವಣ್ಣ ಅನ್ನೋದು ಇದಕ್ಕೇನಾ??

19

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರು ಅಭಿಮಾನಿಗಳನ್ನೇ ತನ್ನ ದೇವರು ಎಂದು ಮೊದಲ ಬಾರಿಗೆ ಕರೆದಿದ್ದರು. ಆದರೆ ಕೆಲವು ನಟರು ತಾವು ಎಲ್ಲಿಗಾದರೂ ಹೋಗುತ್ತಿರಬೇಕಾದರೆ ಅಭಿಮಾನಿಗಳು ಕಣ್ಣಮುಂದೆ ಇದ್ದರೂ ಕೂಡ ಅವರನ್ನು ಮಾತನಾಡಿಸದೆ ಹಾಗೆ ಹೋಗುತ್ತಾರೆ. ಕೆಲವೇ ಕೆಲವರು ನಟರು ಮಾತ್ರ ಅಭಿಮಾನಿಗಳು ಎಲ್ಲಿ ಸಿಕ್ಕರು ಕೂಡ ಅವರ ಜೊತೆಗೆ ಮಾತನಾಡಿ ಅವರ ಕ್ಷೇಮವನ್ನು ವಿಚಾರಿಸುತ್ತಾರೆ. ಅಂಥವರಲ್ಲಿ ನಮ್ಮ ಕರುನಾಡ ಚಕ್ರವರ್ತಿ ಶಿವಣ್ಣ ಕೂಡ ಒಬ್ಬರು. ಎಷ್ಟಾದರೂ ಅಣ್ಣಾವ್ರ ಹಿರಿಮಗ ಅಲ್ಲವೇ.

ಇನ್ನು ಇತ್ತೀಚಿಗಷ್ಟೆ ಶಿವಣ್ಣ ನಟನೆಯ ಭಜರಂಗಿ 2 ಚಿತ್ರ ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳಲ್ಲಿ ಹಾಗೂ ಡಿಜಿಟಲ್ ಪ್ಲಾಟ್ಫಾರ್ಮ್ ದೊಡ್ಡಮಟ್ಟದಲ್ಲಿ ಹೆಸರನ್ನು ಗಳಿಸಿದೆ. ಇನ್ನು ಶಿವಣ್ಣ ಅಭಿಮಾನಿಗಳ ಜೊತೆಗೆ ಎಷ್ಟು ಸರಳವಾಗಿ ವರ್ತಿಸುತ್ತಾರೆ ಎನ್ನುವುದು ನಮಗೆಲ್ಲಾ ಗೊತ್ತಿದೆ. ಅಭಿಮಾನಿಗಳೆಂದರೆ ದೇವರು ಎಂದು ತಮ್ಮ ತಂದೆಯಂತೆ ಅದೇ ಮಾತನ್ನು ಪಾಲಿಸುತ್ತಾರೆ. ಅದಕ್ಕೆ ಸಾಕ್ಷಿಯೆಂಬಂತೆ ಇತ್ತೀಚಿನ ಒಂದು ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ಶಿವಣ್ಣ ತಮ್ಮ ಅಭಿಮಾನಿಗಳ ಜೊತೆಗೆ ವರ್ತಿಸಿರುವ ರೀತಿ ನೋಡಿ ಎಲ್ಲರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೌದು ಈ ವಿಡಿಯೋ ಕೇವಲ ವಿಡಿಯೋ ಮಾತ್ರ ಆಗಿರದೆ ಶಿವಣ್ಣನವರ ಸರಳ ಹಾಗೂ ಸಜ್ಜನಿಕೆಯ ಪ್ರತೀಕವಾಗಿದೆ ಎಂದರೆ ಕಂಡಿತವಾಗಿ ತಪ್ಪಾಗಲಾರದು.

ಹೌದು ಸಿಗ್ನಲ್ ನಲ್ಲಿ ಶಿವಣ್ಣನವರು ಕಾರಿನ ಗ್ಲಾಸ್ ಇಳಿಸಿಕೊಂಡು ತಮ್ಮ ಪತ್ನಿ ಗೀತಾ ರವರ ಜೊತೆಗೆ ಕುಳಿತುಕೊಂಡಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಒಂದು ಕಾರು ಬರುತ್ತದೆ ಅದರಲ್ಲಿ ಶಿವಣ್ಣನವರ ಅಭಿಮಾನಿಗಳು ಶಿವಣ್ಣನನ್ನು ಗುರುತಿಸಿ ಹಾಯ್ ಹೇಗಿದ್ದೀರಾ ಎಂಬುದಾಗಿ ಹೇಳುತ್ತಾರೆ. ಅದಕ್ಕೆ ಶಿವಣ್ಣನವರು ನಾನು ಚೆನ್ನಾಗಿದ್ದೇನೆ ನೀವು ಹೇಗಿದ್ದೀರಾ ಊಟ ಮಾಡಿದ್ರಾ ಇವತ್ತು ಏನು ಬಿರಿಯಾನಿನಾ ಎಂಬುದಾಗಿ ತಮಾಷೆಯಿಂದ ಕೇಳುತ್ತಾರೆ. ಅಷ್ಟೊಂದು ದೊಡ್ಡ ನಟನಾಗಿದ್ದರು ಕೂಡ ತಮ್ಮ ಅಭಿಮಾನಿಗಳೊಂದಿಗೆ ಸ್ನೇಹಪೂರ್ವಕವಾಗಿ ವರ್ತಿಸಿರುವುದು ಈಗಾಗಲೇ ವಿಡಿಯೋ ಮೂಲಕ ಎಲ್ಲರ ಮನಗೆದ್ದಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.