ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಇಡೀ ವಿಶ್ವದಲ್ಲಿ ಬೇಡಿಕೆ ಇರುವ ರಕ್ತ ಚಂದನ ಮರವನ್ನು ಕೃಷಿಯಾಗಿ ಮಾಡಿ, ಕೋಟಿ ಕೋಟಿ ಗಳಿಸುವುದು ಹೇಗೆ ಗೊತ್ತೇ??

133

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ನೀವು ಇತ್ತೀಚಿಗೆ ಬಿಡುಗಡೆಯಾದ ’ಪುಷ್ಪಾ’ ಚಿತ್ರವನ್ನು ನೋಡಿದ್ದೀರಾ? ಅದರಲ್ಲಿ ರಕ್ತ ಚಂದನದ್ದೇ ವಹಿವಾಟು ನಡೆಸಲಾಗುತ್ತದೆ. ರಕ್ತ ಚಂದನ ಭಾರತದಲ್ಲಿ ಮಾತ್ರವಲ್ಲ, ವಿದೇಶದ ಮಾರುಕಟ್ಟೆಯಲ್ಲಿಯೂ ಸಾಕಷ್ಟು ಬೇಡಿಕೆಯನ್ನು ಹೊಂದಿದೆ. ದೇಶದ ಹಲವು ಕಡೆ ಕಾಡುಗಳಲ್ಲಿದ್ದ ರಕ್ತ ಚಂದನದ ಮರಗಳನ್ನು ಈಗಾಗಲೇ ಕಡಿದು ಕಳ್ಳಸಾಕಣಿಕೆ ಮಾಡಿ, ಕಾಡುಗಳೇ ಬರಿದಾಗಿವೆ. ಉತ್ತಮ ಬೇಡಿಕೆಯನ್ನು ಹೊಂದಿರುವ ರಕ್ತ ಚಂದನವನ್ನು ಕಾನೂನಾತ್ಮಕವಾಗಿ ನೀವೂ ಬೆಳೆಸಿ ಈ ವ್ಯವಹಾರ ಶುರು ಮಾಡಬಹುದು ಹೇಗೆ ಅಂತಿರಾ? ಬನ್ನಿ, ತಿಳಿಸಿಕೊಡ್ತೀವಿ.

ಕೆಂಪು ಚಂದನ ಅಥವಾ ರಕ್ತ ಚಂದನ ಹಲವು ಸೌಂದರ್ಯವರ್ಧಕ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದು ಅತ್ಯಂತ ಬೆಲೆ ಬಾಳುವ ಚಿನ್ನವಿದ್ದಂತೆ, ಅಥವಾ ಚಿನ್ನಕ್ಕೂ ಅಧಿಕ ಬೆಲೆ ಇದಕ್ಕೆ. ರಕ್ತ ಚಂದನವನ್ನು ಅಲ್ಮುಗ, ಸೌಂಡರ್ವುಡ್, ರೆಡ್ ಸ್ಯಾಂಡಲ್, ರೆಡ್ ಸ್ಯಾಂಡಲ್ವುಡ್, ರೆಡ್ ಚಂದನ ಹೀಗೆ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ. ಭಾರತದ ಪೂರ್ವ ಘಟ್ಟಗಳ ತಪ್ಪಲಿನಲ್ಲಿ ಈ ಮರವನ್ನು ಕಾಣಬಹುದು.

ರಕ್ತ ಚಂದನ ಶ್ರೀಗಂಧ ಜಾತಿಗೆ ಸೇರಿದ ಮರ ಎಂಬುದು ನಿಮಗೆ ಈಗಾಗಲೇ ತಿಳಿದಿರಬಹುದು. ಈ ಮರವು 5-8 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಈ ಮರ ಎಲ್ಲ ಮರಗಳಿಗಿಂಥ ವಿಭಿನ್ನ. ಈ ಮರ ಕಡುಗೆಂಪು ಬಣ್ಣದಲ್ಲಿರುತ್ತದೆ. ಲೆಕ್ಸಿಕಲ್ ಅಂಶಗಳಿರುವ ಮರಗಳನ್ನು ಸಂಗೀತ ಪೀಠೋಪಕರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ, ಹಾಗಾಗಿ ರಕ್ತ ಚಂದನ ಸಂಗೀತ ಇನ್ಟ್ರುಮೆಂಟ್ ತಯಾರಿಕೆಗೂ ಬಳಸಲಾಗುತ್ತದೆ. ಅಲ್ಲದೇ ಸುಗಂಧ ದ್ರವ್ಯ, ಔಷಧ, ಸೌಂದರ್ಯ ವರ್ಧಕಗಳಲ್ಲಿಯೂ ಕೆಂಪು ಚಂದನವನ್ನು ಬಳಸಲಾಗುತ್ತದೆ.

ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಮಾತ್ರ ಕಂಡು ಬರುವ ಕೆಂಪು ಚಂದನ ಒಂದು ವಾಣಿಜ್ಯ ಬೆಳೆ. ಆದರೆ ಇದರ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲದ ಕಾರಣ, ಇಷ್ಟು ದಿನ ಕೇವಲ ಕಳ್ಳಕಾಕರ ಪಾಲಾಗುತ್ತಿತ್ತು. ಇದನ್ನ ಈಗ ಹೆಚ್ಚಿನವರು ವಾಣಿಜ್ಯ ಬೆಳೆಯಾಗಿ ಬೆಳೆಯಲು ಮುಂದಾಗಿದ್ದಾರೆ. ಇದನ್ನು ಹೇಗೆ ಬೆಳೆಯಬಹುದು ನೋಡೋಣ.

ಕೆಂಪು ಚಂದನ ಬೆಳೆಯಲು ಬೆಣಚುಕಲ್ಲು ಮಣ್ಣು ಬೇಕು. ಇದು ಶುಷ್ಕ ಬಿಸಿಲಿನ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇನ್ನು ಭಾರತದ ಬಹುತೇಕ ಎಲ್ಲಾ ಭಾಗಗಳಲ್ಲಿಯೂ ಕೆಂಪು ಚಂದನವನ್ನು ಬೆಳೆಸಬಹುದು. ಈ ಗಿಡವನ್ನು ನೆಡುವಾಗ ಗಮನಿಸಬೇಕಾದ ಅಂಶವೆಂದರೆ, ಪ್ರತಿ ಗಿಡವನ್ನೂ 10 x 10 ಅಡಿ ಅಂತರದಲ್ಲಿ ನೆಡಬೇಕು. ಒಂದು ಮರ 10 ವರ್ಷಗಳವರೆಗೆ 500 ಕೆಜಿ ಕೆಂಪು ಚಂದನವನ್ನು ನೀಡುತ್ತದೆ. ಆರಂಭದ ವರ್ಷಗಳಲ್ಲಿ ಕೆಂಪು ಚಂದನ ಮರದ ಬುಡವನ್ನು ಕಳೆ ಮುಕ್ತವಾಗಿಸಬೇಕು.

ಮೇ ನಿಂದ ಜೂನ್ ವರೆಗೆ ಕೆಂಪು ಚಂದನ ಗಿಡ ನೆಡಲು ಸೂಕ್ತ ಸಮಯ. ಗಿಡ ನೆಟ್ಟು ನೀರುಣಿಸಬೇಕು. ನಂತರ ವಾತಾವರಣಕ್ಕೆ ತಕ್ಕಂತೆ 10-15 ದಿನಗಳ ಅಂತರದಲ್ಲಿ ನೀರು ಹಾಕಬೇಕಾಗುತ್ತದೆ. ಇನ್ನು ಗಿಡಗಳ ಎಲೆಗಳನ್ನು ಹುಳುಗಳು ತಿನ್ನದಂತೆ ಮಾನೋಕ್ರೋಟೋಫಾಸ್ ಸಿಂಪಡಿಸಬೇಕು. ಈ ಕೆಂಪು ಶ್ರೀಗಂಧದ ಸರಿಯಾದ ದಪ್ಪ ಮರವಾಗಲು ಬಹಳ ವರ್ಷ ಹಿಡಿಯುತ್ತದೆ. 3 ವರ್ಷಗಳಲ್ಲಿ ಇದು 6 ಮೀಟರ್ ಉದ್ದವಾಗಲ್ಲದು. ಆದರೆ ಈ ಮರವು ಹಿಮ ವಾತಾವರಣದಲ್ಲಿ ಬೆಳೆಯುವುದಿಲ್ಲ. ಹೀಗೆ ಹತ್ತು ಹಲವು ಪ್ರಯೋಜನಗಳನ್ನು ಹೊಂದಿರುವ ಕೆಂಪು ಚಂದನವನ್ನು ಬೆಳೆಯುವುದು ಎಷ್ಟು ಮುಖ್ಯವೋ ಅದನ್ನು ಕಲ್ಲತನವಾಗದಂತೆ ಕಾಯ್ದುಕೊಳ್ಳುವುದು ಕೂಡ ಅಷ್ಟೇ ಮುಖ್ಯ.rakta

Get real time updates directly on you device, subscribe now.