ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನವೇ ಹೈದ್ರಾಬಾದ್ ತಂಡಕ್ಕೆ ಬಿಗ್ ಶಾಕ್, ಮನಬಂದಂತೆ ಬಿಡ್ ಮಾಡಿದ ಹೈದ್ರಾಬಾದ್ ಕತೆ ಏನಾಗಿದೆ ಗೊತ್ತೇ??

ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನವೇ ಹೈದ್ರಾಬಾದ್ ತಂಡಕ್ಕೆ ಬಿಗ್ ಶಾಕ್, ಮನಬಂದಂತೆ ಬಿಡ್ ಮಾಡಿದ ಹೈದ್ರಾಬಾದ್ ಕತೆ ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಳೆದ ಐಪಿಎಲ್ ಆವೃತ್ತಿಯಲ್ಲಿ ಹೀನಾಯ ಸೋಲಿನ ಸುಳಿಗೆ ಸಿಲುಕಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಭಾರಿ ಹರಾಜಿನಲ್ಲಿ ಉತ್ತಮ ಆಟಗಾರರನ್ನು ಖರೀದಿಸಿತ್ತು. ಸಹಜವಾಗಿಯೇ ಕಳೆದ ವರ್ಷ ಆದ ಅನುಭವಗಳು ಈ ಭಾರಿ ಆಗಬಾರದೆಂದೆ ಎಚ್ಚರಿಕೆಯ ಹೆಜ್ಜೆ ಇಡಲಾಗಿತ್ತು. ಆದರೇ ಟೂರ್ನಿ ಆರಂಭಕ್ಕೂ ಮುನ್ನವೇ ಈಗ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ.

ಹೌದು ಈ ಭಾರಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಕೂಡಿಕೊಂಡಿದ್ದ, ಆರ್ಸಿಬಿ ತಂಡದ ಮಾಜಿ ಕೋಚ್ ಹಾಗೂ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಸೈಮನ್ ಕ್ಯಾಟಿಚ್ ಈಗ ತಮ್ಮ ಹುದ್ದೆಯಿಂದ ಹಿಂದೆ ಸರಿಯಲಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಈ ಭಾರಿಯಷ್ಟೇ ತಂಡ ಸೇರಿಕೊಂಡಿದ್ದ ಕ್ಯಾಟಿಚ್ ಇಷ್ಟು ಬೇಗ ತಂಡದಿಂದ ಹೊರ ನಡೆಯುತ್ತಿರುವುದು ಸನ್ ರೈಸರ್ಸ್ ಹೈದರಾಬಾದ್ ತಂಡದ ಅಭಿಮಾನಿಗಳ ಆಘಾತಕ್ಕೆ ಕಾರಣವಾಗಿದೆ. ಆದರೇ ತಾವು ಹೊರನಡೆಯುತ್ತಿರುವುದಕ್ಕೆ ಸೂಕ್ತ ಕಾರಣಗಳನ್ನು ಸಹ ಕ್ಯಾಟಿಚ್ ಬಹಿರಂಗಪಡಿಸಿದ್ದಾರೆ. ಆದರೇ ಅವುಗಳನ್ನು ಗಮನಿಸಿದರೇ, ಹೈದರಾಬಾದ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಬನ್ನಿ ಆ ಕಾರಣಗಳು ಯಾವುವು ಎಂದು ತಿಳಿಯೋಣ.

ಸೈಮನ್ ಕ್ಯಾಟಿಚ್ ಪ್ರಕಾರ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಹರಾಜಿನಲ್ಲಿ ಸರಿಯಾಗಿ ಕೆಲಸ ನಿರ್ವಹಿಸಿಲ್ಲವಂತೆ. ಜೊತೆಗೆ ಸೈಮನ್ ಕ್ಯಾಟಿಚ್ ರವರಿಗೆ ಕನಿಷ್ಟ ಗೌರವವನ್ನು ಸಹ ನೀಡಿಲ್ಲವಂತೆ. ಇದರ ಜೊತೆ ಹರಾಜಿನ ಸಂದರ್ಭದಲ್ಲಿ ಯಾವ ಯಾವ ಆಟಗಾರರನ್ನು ಖರೀದಿಸಬೇಕು ಎಂದು ಹೋಂ ವರ್ಕ್ ಮಾಡಿ, ಪಟ್ಟಿ ಮಾಡಲಾಗಿತ್ತಂತೆ. ಆದರೇ ಹರಾಜು ಪ್ರಕ್ರಿಯೆ ವೇಳೆ, ಅಲ್ಲಿ ನಡೆಸಿದ ಪ್ಲಾನ್ ಕೈ ಬಿಟ್ಟು ಮನಸ್ಸಿಗೆ ಬಂದಂತ ಆಟಗಾರರನ್ನು ಖರೀದಿಸಿದ್ದಾರೆ. ಇದು ತಂಡದ ಸಂಯೋಜನೆ ಮೇಲೆ ಹೊಡೆತ ಬೀಳುತ್ತದೆ ಎಂದು ಹೇಳಿದ್ದಾರೆ. ಈ ಎಲ್ಲಾ ಘಟನೆಗಳಿಂದ ಮನನೊಂದು ಸೈಮನ್ ಕ್ಯಾಟಿಚ್ ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಹೊರಗುಳಿಯಲು ನಿರ್ಧರಿಸಿದ್ದಾರಂತೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.