ವಿಶ್ವ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ತಂಡ ಘೋಷಣೆ ಮಾಡಿದ ಮೋರ್ನೆ ಮೋರ್ಕೆಲ್, ಸ್ಥಾನ ಪಡೆದ ಭಾರತೀಯರು ಯಾರ್ಯಾರು ಗೊತ್ತೇ??

ವಿಶ್ವ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ತಂಡ ಘೋಷಣೆ ಮಾಡಿದ ಮೋರ್ನೆ ಮೋರ್ಕೆಲ್, ಸ್ಥಾನ ಪಡೆದ ಭಾರತೀಯರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ದಕ್ಷಿಣ ಆಫ್ರಿಕಾ ವಿಶ್ವ ಕಂಡ ಶ್ರೇಷ್ಠ ವೇಗಿಗಳ ತವರೂರು. ಅಲ್ಲಿನ ವೇಗದ ಬೌಲರ್ ಗಳೆಂದರೇ ಸಾಕು ಬ್ಯಾಟ್ಸಮನ್ ಗಳು ನಡುಗುತ್ತಾರೆ. ಅಂತಹ ವಿಶ್ವ ಕಂಡ ಶ್ರೇಷ್ಠ ಬೌಲರ್ ಎಂದರೇ ಅದು ಮೊರ್ನೆ ಮೋರ್ಕೆಲ್. ಸದ್ಯ ಎಲ್ಲಾ ವೃತ್ತಿಪರ ಕ್ರಿಕೇಟ್ ಗೆ ನಿವೃತ್ತಿ ಘೋಷಿಸಿರುವ ಮೊರ್ನೆ ಮೋರ್ಕೆಲ್ ಈಗ ವಿಶ್ವದ ಶ್ರೇಷ್ಠ ಇಲೆವೆನ್ ತಂಡವನ್ನು ಪ್ರಕಟಿಸಿದ್ದಾರೆ. ಆದರೇ ಅವರು ಪ್ರಕಟಿಸಿರುವ ತಂಡದಲ್ಲಿ ಕೇವಲ ಒಬ್ಬನೇ ಒಬ್ಬ ಭಾರತೀಯನಿಗೆ ಸ್ಥಾನ ನೀಡಿದ್ದಾರೆ. ಬನ್ನಿ ಅವರು ಪ್ರಕಟಿಸಿರುವ ಇಲೆವೆನ್ ತಂಡದಲ್ಲಿ ಸ್ಥಾನ ಪಡೆದ ಆಟಗಾರರು ಯಾರು ಎಂದು ತಿಳಿಯೋಣ.

ಆರಂಭಿಕರಾಗಿ ದಕ್ಷಿಣ ಆಫ್ರಿಕಾದ ಯಶಸ್ವಿ ನಾಯಕರಾದ ಗ್ರೇಮ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಸ್ಥಾನ ಪಡೆದಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಸೌತ್ ಆಫ್ರಿಕಾದ ಮತ್ತೊಬ್ಬ ಪ್ರತಿಭಾನ್ವಿತ ಬ್ಯಾಟ್ಸ್ಮನ್ ಹಶೀಂ ಆಮ್ಲಾಗೆ ಸ್ಥಾನ ನೀಡಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ವಿಶ್ವ ಕಂಡ ಶ್ರೇಷ್ಠ ಆಲ್ ರೌಂಡರ್ ಜಾಕ್ ಕಾಲೀಸ್ ಸ್ಥಾನ ಪಡೆದಿದ್ದಾರೆ. ಐದನೇ ಕ್ರಮಾಂಕದಲ್ಲಿ ಭಾರತದ ಕಿಂಗ್ ಕೊಹ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಈ ತಂಡದಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರು ಇವರಾಗಿದ್ದಾರೆ.

ಇನ್ನು ಆರನೇ ಕ್ರಮಾಂಕದಲ್ಲಿ ವಿಕೇಟ್ ಕೀಪರ್ ಬ್ಯಾಟ್ಸಮನ್ ಎಬಿ ಡಿ ವಿಲಿಯರ್ಸ್ ಸ್ಥಾನ ಪಡೆದಿದ್ದಾರೆ.ಏಳನೇ ಕ್ರಮಾಂಕದಲ್ಲಿ ಇಂಗ್ಲೆಂಡ್ ನ ಕೆವಿನ್ ಪೀಟರ್ಸನ್ ಸ್ಥಾನ ಪಡೆದಿದ್ದಾರೆ. ಎಂಟನೇ ಕ್ರಮಾಂಕದಲ್ಲಿ ಎಡಗೈ ಸ್ಪಿನ್ನರ್ ಡೇನಿಯಲ್ ವೆಟ್ಟೋರಿ ಸ್ಥಾನ ಪಡೆದಿದ್ದಾರೆ. ಒಂಬತ್ತನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಸ್ಥಾನ ಪಡೆದಿದ್ದಾರೆ. ಹತ್ತನೇ ಕ್ರಮಾಂಕದಲ್ಲಿ ಸೌತ್ ಆಫ್ರಿಕಾದ ವೇಗಿ ಕಗಿಸೋ ರಬಾಡ ಸ್ಥಾನ ಪಡೆದಿದ್ದಾರೆ. ಹನ್ನೊಂದನೇ ಆಟಗಾರರಾಗಿ ಸೌತ್ ಆಫ್ರಿಕಾದ ಮತ್ತೊಬ್ಬ ಸ್ಪೀಡ್ ಸ್ಟಾರ್ ಡೇಲ್ ಸ್ಟೈನ್ ಸ್ಥಾನ ಪಡೆದಿದ್ದಾರೆ. ಈ ತಂಡದ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ. ತಂಡ ಇಂತಿದೆ : ಗ್ರೇಮ್ ಸ್ಮಿತ್, ಡೇವಿಡ್ ವಾರ್ನರ್, ಹಶೀಂ ಆಮ್ಲಾ, ಜಾಕ್ ಕಾಲಿಸ್, ವಿರಾಟ್ ಕೊಹ್ಲಿ, ಕೆವಿನ್ ಪೀಟರ್ಸನ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ವೆಟ್ಟೋರಿ, ಪ್ಯಾಟ್ ಕಮಿನ್ಸ್, ಕಗಿಸೋ ರಬಾಡ, ಡೇಲ್ ಸ್ಟೈನ್.