ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಐಪಿಲ್ 2022 ಹರಾಜ್ ನಲ್ಲಿ ಯಾವುದೇ ತಂಡ ಶಕಿಬ್ ಅಲ್ ಹಸನ್ ರನ್ನು ಖರೀದಿಸದೇ ಇದ್ದಿದ್ದಕ್ಕೆ ಅವರ ಪತ್ನಿ ಹೇಳಿದ್ದೇನು ಗೊತ್ತಾ?

44

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಮೆಗಾ ಹರಾಜಿನಲ್ಲಿ ಬಾಂಗ್ಲಾದೇಶದ ಹಿರಿಯ ಕ್ರಿಕೆಟ್ ಆಟಗಾರ ಶಕಿಬ್ ರನ್ನು ಯಾರೂ ಖರೀದಿಸದೇ ಇರುವುದರ ಹಿಂದಿನ ನಿಜವಾದ ಕಾರಣವನ್ನು ಶಕಿಬ್ ಅಲ್ ಹಸನ್ ಅವರ ಪತ್ನಿ ಉಮ್ಮೆ ಅಹ್ಮದ್ ಶಿಶಿರ್ ವಿವರಿಸಿದ್ದಾರೆ. ಐಪಿಎಲ್ ಹರಾಜಿನಲ್ಲಿ ಶಕೀಬ್ ಕೂಡ ಉಳಿದ 12 ಆಟಗಾರರಂತೆ ತಮ್ಮ ಮೂಲ ಬೆಲೆಯನ್ನು 2ಕೋಟಿಗೆ ನಿಗದಿಪಡಿಸಿದ್ದರು.

ಆದರೆ ಉಳಿದವರನ್ನು ಖರೀದಿಸಿದರೂ ಶಕೀಬ್ ಮತ್ರ ಯಾವುದೇ ತಂಡವನ್ನೂ ಸೇರಲಾಗಲಿಲ್ಲ. ಉತ್ತಮ ಬ್ಯಾಟಿಂಗ್ ಹಾಗೂ ಸ್ಮಿನ್ನರ್ ಆಗಿರುವ, ಅನುಭವಿ ಕ್ರಿಕೆಟಿಗ ಶಕೀಬ್ ಅವರನ್ನು ಯಾರೂ ಖರಿಧಿಸದೇ ಇದ್ದಿದ್ದು ಅವರ ಅಭಿಮಾನಿಗಳಿಗೂ ನಿಜಕ್ಕೂ ಶಾಕಿಂಗ್ ಅಗಿದೆ. ಇನ್ನು ಶಕೀಬ್ ಬಗ್ಗೆ ಹೇಳುವುದಾದರೆ, ಇಲ್ಲಿಯವರೆಗೆ ಅವರು ಐಪಿಎಲ್ ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಪ್ರತಿನಿಧಿಸಿದ್ದರು. ಶಕೀಬ್ 71 ಪಂದ್ಯಗಳನ್ನು ಆಡಿದ್ದು, 19.8 ಸರಾಸರಿ ಮತ್ತು 124.5 ಸ್ಟ್ರೈಕ್ ರೇಟ್‌ನಲ್ಲಿ 793 ರನ್ ಗಳಿಸಿದ್ದಾರೆ. ಅಲ್ಲದೆ, ಅವರು 7.43 ರ ಎಕಾನಮಿ ಮತ್ತು 29.2 ರ ಸರಾಸರಿಯಲ್ಲಿ 63 ಐಪಿಎಲ್ ವಿಕೆಟ್ ಗಳನ್ನು ಪಡೆದಿದ್ದಾರೆ.

ಐಪಿಲ್ 2022 ನ ಹರಾಜ್ ನಲ್ಲಿ ಶಕೀಬ್ ಅವರನ್ನು ಖರೀದಿಸದೇ ಇದ್ದಿದ್ದಕ್ಕೆ ಟೀಕಾಕಾರರ ಮಾತುಗಳಿಗೆ ಅವರ ಪತ್ನಿ ಉಮ್ಮೆ ಅಹ್ಮದ್ ಶಿಶಿರ್ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್ ಮಾಡಿ, ಸರಿಯಾದ ಉತ್ತರ ನೀಡಿದ್ದಾರೆ. ತಮಮ್ ಪೋಸ್ಟ್ ನಲ್ಲಿ ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡ ಶಿಶಿರ್, ಶಕೀಬ್ ಅವರನ್ನು ಈ ಮೊದಲೇ ಒಂದೆರಡು ಫ್ರಾಂಚೈಸಿಗಳು ಸಂಪರ್ಕಿಸಿದ್ದವು. ಆದರೆ 2022 ಐಪಿಲ್ ಸಂಪೂರ್ಣ ಸೀಸನ್ ಗೆ ತಾನು ಲಭ್ಯವಿಲ್ಲ ಎಂದು ಶಕೀಬ್ ಹೇಳಿದ್ದಾರೆ. ಈ ಕಾರಣಕ್ಕಾಗಿ ಹರಾಜ್ನಲ್ಲಿ ಶಕೀಬ್ ಅವರನ್ನು ಫ್ರಾಂಚೈಸಿಗಳು ಶಕೀಬ್ ಅವರನ್ನು ಖರೀದಿಸಲಿಲ್ಲ ಎಂದು ಶಿಶಿರ್ ಸ್ಪಷ್ಟನೆ ನೀಡಿದ್ದಾರೆ. ಶ್ರೀಲಂಕಾ ಸರಣಿಯಿಂದಾಗಿ ಶಕೀಬ್ ಪೂರ್ಣ ಐಪಿಎಲ್ ನಲ್ಲಿ ಇರಲು ಸಾಧ್ಯವಿಲ್ಲ, ಅವರೇನಾದರೂ ಐಪಿಎಲ್ ನಲ್ಲಿ ಆಡಬೇಕಾದರೆ, ಶ್ರೀಲಂಕಾ ಸರಣಿ ಬಿಡಬೇಕಿತ್ತು. ಒಂದು ವೇಳೆ ಅವರು ಐಪಿಎಲ್ ಆಡುತ್ತಿದ್ದರೆ ಅವರ ಬಗ್ಗೆ ಹೀಗೆ ಮಾತನಾಡುತ್ತಿದ್ದೀರೇ, ಇಷ್ಟಕ್ಕೆ ಅವರ ಬಗ್ಗೆ ಬೇಡದ ಮಾತುಗಳನಾಡುವುದು ಸರಿಯಲ್ಲ, ಎಂದು ಶಿಶಿರ್ ಉತ್ತರಿಸಿದ್ದಾರೆ.

Get real time updates directly on you device, subscribe now.