ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಆರ್ಸಿಬಿ ತಂಡ ಕೋಟಿ ಕೋಟಿ ಖರ್ಚು ಮಾಡಿ ದಿನೇಶ್ ರವರನ್ನು ಖರೀದಿ ಮಾಡಿದ್ದು ಯಾಕೆ ಗೊತ್ತಾ?? ಮಧ್ಯಮ ಕ್ರಮಾಂಕ ಕ್ಕಾಗಿ ಅಲ್ಲವೇ ಅಲ್ಲ

22

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ ತಂಡದ ಆಲೋಚನೆಗಳು ಬಹು ಬದಲಾದಂತೆ ಕಾಣುತ್ತೇವೆ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಂತೂ ಆರ್ಸಿಬಿ ತಂಡದ ಆಯ್ಕೆಗಳ ಕುರಿತು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಬಹುತೇಕ ಆಟಗಾರರ ಆಯ್ಕೆಯ ಕುರಿತು ಪ್ರಶ್ನೆಗಳನ್ನು ಕೇಳುತ್ತಿರುವ ಅಭಿಮಾನಿಗಳಿಗೆ ಆರ್ಸಿಬಿ ತಂಡದ ಮ್ಯಾನೇಜ್ಮೆಂಟ್ ಯಾವ ರೀತಿಯ ಆಲೋಚನೆ ಮಾಡುತ್ತಿದೆ ಎಂಬುದೇ ತಿಳಿದು ಬರುತ್ತಿಲ್ಲ.

ಇನ್ನು ಈ ಸಮಯದಲ್ಲಿ ಹಲವಾರು ಆಟಗಾರರ ಆಯ್ಕೆಯ ಕುರಿತು ಪ್ರಶ್ನೆಗಳು ಬಂದಿರುವ ಸಮಯದಲ್ಲಿ ಕೋಟಿ ಕೋಟಿ ಖರ್ಚು ಮಾಡಿ ದಿನೇಶ್ ಕಾರ್ತಿಕ್ ಅವರನ್ನು ಯಾಕೆ ತಂಡಕ್ಕೆ ಆಯ್ಕೆ ಮಾಡಲಾಯಿತು, ಬದಲಾಗಿ ಸುರೇಶ್ ರೈನಾ, ಡೇವಿಡ್ ವಾರ್ನರ್ ಅಥವಾ ಇನ್ನಿತರ ಹಲವಾರು ಬ್ಯಾಟ್ಸ್ಮನ್ಗಳು ಆಯ್ಕೆಯಲ್ಲಿ ಇದ್ದಾಗ ಅವರನ್ನು ಖರೀದಿ ಮಾಡಬೇಕಾಗಿತ್ತು ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ

ಈ ಕುರಿತು ಆರ್ಸಿಬಿ ತಂಡದ ಪ್ರಮುಖ ಕೋಚ್ ಆಗಿರುವ ಸಂಜಯ್ ಬಂಗಾರ್ ಅವರಿಗೂ ಕೂಡ ಪ್ರಶ್ನೆ ಕೇಳಲಾಗಿತ್ತು, ಯಾವ ಕಾರಣಕ್ಕೆ ನೀವು ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಿದ್ದೀರಿ ದಿನೇಶ್ ಕಾರ್ತಿಕ್ ಅವರ ಆಯ್ಕೆಯ ಹಿಂದಿರುವ ಕಾರಣ ಏನು ಎಂಬುದರ ಕುರಿತು ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ಅವರ ಲೆಕ್ಕಚಾರದ ಪ್ರಕಾರ ಉತ್ತರ ನೀಡಿರುವ ಸಂಜಯ್ ಬಂಗಾರ್ ಅವರು ಸಾಮಾನ್ಯವಾಗಿ ದಿನೇಶ್ ಕಾರ್ತಿಕ್ ಅವರನ್ನು ಮಧ್ಯಮ ಕ್ರಮಾಂಕ ಬಲಪಡಿಸಿಕೊಳ್ಳಲು ಆಯ್ಕೆ ಮಾಡಿದ್ದೇವೆ ಎಂದು ಹೇಳುತ್ತಾರೆ ಅಂದುಕೊಂಡರೆ ಅದು ನಿಮ್ಮ ತಪ್ಪು

ಹೌದು ಸ್ನೇಹಿತರೇ ದಿನೇಶ್ ಕಾರ್ತಿಕ್ ರವರನ್ನು ಆರ್ಸಿಬಿ ತಂಡದ ಮ್ಯಾನೇಜ್ಮೆಂಟ್ ಮಧ್ಯಮ ಕ್ರಮಾಂಕ ಬಲಪಡಿಸಲು ಆಯ್ಕೆ ಮಾಡಿಲ್ಲ ಎಂಬುದು ತಿಳಿದು ಬಂದಿದೆ ಬದಲಾಗಿ ದಿನೇಶ್ ಕಾರ್ತಿಕ್ ರವರನ್ನು ಮ್ಯಾಕ್ಸ್ವೆಲ್ ನಂತರ ಒಬ್ಬ ಯುವ ಆಟಗಾರರನ್ನು ಕಳುಹಿಸಿ ತದ ನಂತರ ಆರನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಕಣಕ್ಕಿಳಿಸುವ ಆಲೋಚನೆ ಮಾಡಿದೆ ಎಂಬುದು ತಿಳಿದು ಬಂದಿದೆ. ನಾವು ಕೆಲವೊಂದು ಕ್ರಮಗಳಿಗೆ ಹೊಸ ಆಟಗಾರರನ್ನು ಪ್ರಯೋಗ ಮಾಡಬಹುದು, ಆದರೆ 6 ನೇ ಕ್ರಮಾಂಕ ಬಹಳ ಮುಖ್ಯ, ಇನ್ನಿಂಗ್ಸ್ ಕೊನೆಯಲ್ಲಿ ನಂಬಿಕಸ್ತ ಬ್ಯಾಟ್ಸಮನ್ ಬೇಕು, ಅದೇ ಕಾರಣಕ್ಕೆ ದಿನೇಶ್ ಕಾರ್ತಿಕ್ ರವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

Get real time updates directly on you device, subscribe now.