ಕಳೆದ ಬಾರಿ ಒಂದು ವಿಕೆಟ್ ಪಡೆಯದೇ ಹೋದರೂ ಹಸರಂಗ ರವರಿಗೆ ಕೋಟಿ ಕೋಟಿ ಸುರಿದಿದ್ದು ಯಾಕೆ ಗೊತ್ತೇ?? ಆರ್ಸಿಬಿ ಮ್ಯಾನೇಜ್ಮೆಂಟ್ ಹೇಳಿದ್ದೇನು ಗೊತ್ತೇ??

ಕಳೆದ ಬಾರಿ ಒಂದು ವಿಕೆಟ್ ಪಡೆಯದೇ ಹೋದರೂ ಹಸರಂಗ ರವರಿಗೆ ಕೋಟಿ ಕೋಟಿ ಸುರಿದಿದ್ದು ಯಾಕೆ ಗೊತ್ತೇ?? ಆರ್ಸಿಬಿ ಮ್ಯಾನೇಜ್ಮೆಂಟ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಯಾಗುವುದೆಂದರೇ, ಅದು ತಲೆಗೆ ಹುಳ ಬಿಟ್ಟುಕೊಂಡಂತೆ.ಅಭಿಮಾನಿಗಳ ನೀರಿಕ್ಷೆಗೆ ತಂಡದ ಮ್ಯಾನೇಜ್ ಮೆಂಟ್ ಎಂದಿಗೂ ಸ್ಪಂದಿಸಿಲ್ಲ. ಈ ಭಾರಿಯಾದರೂ, ಅಭಿಮಾನಿಗಳ ನೀರಿಕ್ಷೆಗೆ ಸ್ಪಂದಿಸುವ ಸಾಧ್ಯತೆಗಳು ಇದ್ದವು. ಆದರೇ ಆರ್ಸಿಬಿ ತಂಡದ ಮ್ಯಾನೇಜ್ ಮೆಂಟ್ ಈ ಭಾರಿ ಸಹ ಆರ್ಸಿಬಿ ಅಭಿಮಾನಿಗಳ ನೀರಿಕ್ಷೆಗಳನ್ನ ಸಂಪೂರ್ಣವಾಗಿ ಹುಸಿಗೊಳಿಸಿದೆ.

ಹೌದು ಹರಾಜಿನಲ್ಲಿ ಈ ಭಾರಿ ಸಹ ಕನ್ನಡಿಗ ಆಟಗಾರರನ್ನು ಆರ್ಸಿಬಿ ಖರೀದಿಸಲು ಮನಸ್ಸೇ ಮಾಡಲಿಲ್ಲ. ಇನ್ನು ಕಳೆದ ಭಾರಿಯ ಪರ್ಪಲ್ ಕ್ಯಾಪ್ ಹೋಲ್ಡರ್ ಹರ್ಷಲ್ ಪಟೇಲ್ ರನ್ನು ಖರೀದಿಸಲು ಬರೋಬ್ಬರಿ 10.75.ಕೋಟಿ ಖರ್ಚು ಮಾಡಿತು. ಇನ್ನು ಆಶ್ಚರ್ಯ ಮತ್ತು ಆಘಾತ ಎಂದರೇ ಅದು ಶ್ರೀಲಂಕಾದ ಆಲ್ ರೌಂಡರ್ ವನಿಂದು ಹಸರಂಗರವರನ್ನ ಖರೀದಿಸಲು ಬರೋಬ್ಬರಿ 10.75 ಕೋಟಿ ಖರ್ಚು ಮಾಡಿದ್ದು. ಕಳೆದ ಭಾರಿ ಬದಲಿ ಆಟಗಾರನಾಗಿ , ಆರ್ಸಿಬಿ ಪರ ಆಡಿದ್ದ ಹಸರಂಗ ಎರಡು ಪಂದ್ಯ ಆಡಿದ್ದರು.

ಎರಡು ಪಂದ್ಯದಲ್ಲಿ ಎಂಟು ಓವರ್ ಬೌಲ್ ಮಾಡಿ ಒಂದು ವಿಕೇಟ್ ಪಡೆಯದೇ 60 ರನ್ ಬಿಟ್ಟುಕೊಟ್ಟಿದ್ದರು. ಹಾಗೂ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿ ಶೂನ್ಯ ಸಂಪಾದಿಸಿದ್ದರು. ಇಂತಹ ಆಟಗಾರನಿಗೆ ಆರ್ಸಿಬಿ ತಂಡ 10.75 ಕೋಟಿ ಸುರಿದಿದ್ದು ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಆದರೇ ಆರ್ಸಿಬಿ ಮ್ಯಾನೇಜ್ ಮೆಂಟ್ ವಾದವೇ ಬೇರೆ. ಹಸರಂಗ ಸದ್ಯ ಟಿ 20 ಕ್ರಿಕೇಟ್ ನಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಇವರು ಥೇಟ್ ರಶೀದ್ ಖಾನ್ ಶೈಲಿಯಲ್ಲಿಯೇ ಬೌಲಿಂಗ್ ಮಾಡುತ್ತಾರೆ. ಜೊತೆಗೆ ಬ್ಯಾಟಿಂಗ್ ನಲ್ಲಿ ಸಹ ಬಿಗ್ ಹಿಟ್ ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ, ಹಾಗೂ 7 ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಲ್ಲ ಆಟಗಾರ ಎಂದು ಕೂಡ ಹೇಳಿದ್ದಾರೆ. ಟಿ 20 ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು ಎಂದು ಸಬೂಬು ಹೇಳಿದೆ ಹಾಗೂ ಐಸಿಸಿ ಶ್ರೇಯಾಂಕದಲ್ಲಿ ಉತ್ತಮ ಸ್ಥಾನದಲ್ಲಿ ಇದ್ದಾರೆ ಎಂದು ಹೇಳಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.