ಚಾಹಲ್ ಅಲ್ಲಾ, ಕುಲದೀಪ್ ಅಲ್ಲಾ, ಈತನೇ ಭಾರತದ ಭವಿಷ್ಯದ ಸ್ಪಿನ್ನರ್ ಎಂದು ಯುವ ಆಟಗಾರನನ್ನು ಕೊಂಡಾಡಿದ ರಾಹುಲ್, ಯಾರಂತೆ ಗೊತ್ತೇ??

ಚಾಹಲ್ ಅಲ್ಲಾ, ಕುಲದೀಪ್ ಅಲ್ಲಾ, ಈತನೇ ಭಾರತದ ಭವಿಷ್ಯದ ಸ್ಪಿನ್ನರ್ ಎಂದು ಯುವ ಆಟಗಾರನನ್ನು ಕೊಂಡಾಡಿದ ರಾಹುಲ್, ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ಹೊಸ ಫ್ರಾಂಚೈಸಿ ಲಕ್ನೋ ತಂಡದ ನಾಯಕನಾಗಿರುವ ಕನ್ನಡಿಗ ಕೆ.ಎಲ್.ರಾಹುಲ್ ಬಹುದಿನಗಳ ನಂತರ ಮಾತಿಗೆ ಸಿಕ್ಕಿದ್ದಾರೆ. ಲಕ್ನೋ ತಂಡಕ್ಕೆ ನಾಯಕರಾದ ನಂತರ ಖಾಸಗಿ ಚಾನೆಲ್ ಗೆ ಮಾತನಾಡಿದ ರಾಹುಲ್, ತಮ್ಮ ಲಕ್ನೋ ತಂಡವನ್ನು ಹೇಗೆ ಮುನ್ನಡೆಸುತ್ತೇನೆ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.ಲಕ್ನೋ ತಂಡದ ಮೂಲಕ ಮತ್ತಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ, ಅವರನ್ನ ಭಾರತ ತಂಡಕ್ಕೆ ಕೊಡುಗೆಯಾಗಿ ನೀಡುವ ಆಶಾವಾದವನ್ನು ವ್ಯಕ್ತಪಡಿಸಿದರು.

ಇದೇ ವೇಳೆ ರಾಹುಲ್ ಜೊತೆಗೆ ಲಕ್ನೋ ತಂಡಕ್ಕೆ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಹಾಗೂ ಆಸ್ಟ್ರೇಲಿಯಾದ ಮಾರ್ಕಸ್ ಸ್ಟೋಯಿನಿಸ್ ರವರನ್ನು ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದೆ, ಹರಾಜಿನಲ್ಲಿ ಕೂಡ ಬಲಾಢ್ಯ ಆಟಗಾರರನ್ನು ಕೊಂಡು ಕೊಂಡಿದೆ. ಈ ಬಗ್ಗೆ ಮಾತನಾಡಿದ ರಾಹುಲ್, ರವಿ ಬಿಷ್ಣೋಯಿ ಒಬ್ಬ ಬುದ್ದಿವಂತ ಹಾಗೂ ಧೈರ್ಯವಂತ ಸ್ಪಿನ್ನರ್ ಆಗಿದ್ದು, ಮುಂಬರುವ ದಿನಗಳಲ್ಲಿ ಭಾರತ ಕ್ರಿಕೇಟ್ ನ ಸೂಪರ್ ಸ್ಟಾರ್ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.

ರವಿ ಬಿಷ್ಣೋಯಿ ಪಂಜಾಬ್ ತಂಡದ ಪರ ಆಡುತ್ತಿರುವಾಗ ನಾನು ಅವರನ್ನು ಗಮನಿಸಿದ್ದೇನೆ, ಐಸಿಸಿ ಕಿರಿಯರ ವಿಶ್ವ ಕಪ್ ಆಡಿ ಬಂದು, ಪಂಜಾಬ್ ತಂಡದ ಪರ ಆಡಿದ ಮೊದಲ ಪಂದ್ಯದಲ್ಲೇ ತಮ್ಮ ಸಾಮರ್ಥ್ಯವೇನು ಎಂಬುದನ್ನು ತೋರಿಸಿದರು. ಸ್ಪಿನ್ ಚೆನ್ನಾಗಿ ಆಡುವ ಬ್ಯಾಟ್ಸಮನ್ ಗಳೆದುರು, ಸಹ ಧೈರ್ಯವಾಗಿ ತಾವು ಅಂದುಕೊಂಡ ರೀತಿಯಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಅವರಿಗಿದೆ. ಆತ ಅತೀವ ಆತ್ಮವಿಶ್ವಾಸವಿರುವ ಆಟಗಾರ. ಆತನ ದೇಹ ಚಿಕ್ಕದಾದರೂ, ಗುಂಡಿಗೆ ದೊಡ್ಡದಿದೆ. ಅವರ ಆತ್ಮವಿಶ್ವಾಸವೇ ಅವರನ್ನ ದೊಡ್ಡ ಕ್ರಿಕೇಟಿಗನನ್ನಾಗಿ ಮಾಡುತ್ತದೆ ಎಂದರು‌. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.