ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪವರ್ ಸ್ಟಾರ್, ಕನ್ನಡಿಗರ ಮನೆ ಮಗ ಅಪ್ಪು ರವರ ಜೇಮ್ಸ್ ಟೀಸರ್ ನೋಡಿ ಬಾಹುಬಲಿ ಪ್ರಭಾಸ್ ಹೇಳಿದ್ದೇನು ಗೊತ್ತೇ??

42

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಅಂತು-ಇಂತು ಕೋಟ್ಯಾಂತರ ಅಭಿಮಾನಿಗಳು ಕಾಯುತ್ತಿದ್ದಂತಹ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಚಿತ್ರವಾಗಿರುವ ಜೇಮ್ಸ್ ಚಿತ್ರದ ಟೀಸರ್ ಬಿಡುಗಡೆ ಆಗಿಯೇ ಬಿಟ್ಟಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕೊನೆಯ ಬಾರಿಗೆ ದೊಡ್ಡ ಪರದೆಯಲ್ಲಿ ನೋಡುವಂತಹ ಸಿನಿಮಾ ಜೇಮ್ಸ್ ಆಗಿದೆ. ಜೇಮ್ಸ್ ಚಿತ್ರದ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆಗಳನ್ನು ಪಡೆದು ಇಡೀ ಭಾರತ ದೇಶದಲ್ಲಿ ಟ್ರೆಂಡ್ ಆಗುತ್ತಿದೆ.

ಟೀಸರ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ವಾಯ್ಸ್ ಗೆ ಶಿವಣ್ಣ ತಮ್ಮ ಧ್ವನಿಯನ್ನು ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದ್ದಾಗಲೂ ಹೋದಾಗಲೇ 2 ಸಮಯದಲ್ಲೂ ಕೂಡ ರಾಜನಂತೆ ಮಿಂಚುತ್ತಿದ್ದಾರೆ ನಮ್ಮ ರಾಜರತ್ನ. ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರದ ಟೀಸರ್ ಅನ್ನು ಹಲವಾರು ಸೆಲೆಬ್ರಿಟಿಗಳು ಶೇರ್ ಮಾಡಿಕೊಂಡು ಪುನೀತ್ ರಾಜಕುಮಾರ್ ರವರನ್ನು ಸ್ಮರಿಸಿದ್ದಾರೆ. ಅವರಲ್ಲಿ ತೆಲುಗು ಚಿತ್ರರಂಗದ ಬಿಗ್ ಸ್ಟಾರ್ ಆಗಿರುವ ರೆಬೆಲ್ ಸ್ಟಾರ್ ಪ್ರಬಾಸ್ ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಬಾಹುಬಲಿ ಸ್ಟಾರ್ ಪ್ರಭಾಸ್ ರವರು ಮೊದಲಿನಿಂದಲೂ ಕೂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಅವರ ಕುಟುಂಬದೊಂದಿಗೆ ಒಳ್ಳೆಯ ಸ್ನೇಹ ಬಾಂಧವ್ಯ ವನ್ನು ಹೊಂದಿದ್ದರು. ನಿನ್ನ ಜೇಮ್ಸ್ ಚಿತ್ರದ ಟೀಸರ್ ಬಿಡುಗಡೆ ಆದ ತಕ್ಷಣವೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡು ಇದೊಂದು ಮಾಸ್ಟರ್ ಪೀಸ್ ಚಿತ್ರವಾಗಲಿದ್ದು ನಮ್ಮಂತಹ ಎಷ್ಟೋ ಪುನೀತ್ ರಾಜ್ ಕುಮಾರ್ ರವರನ್ನು ಇಷ್ಟಪಡುವಂತವರಿಗೆ ಈ ಚಿತ್ರ ಚಿರಕಾಲ ವಿಶೇಷವಾಗಿರಲಿದೆ ಎಂಬುದಾಗಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಜೇಮ್ಸ್ ಚಿತ್ರ ಇದೇ ಮಾರ್ಚ್ 17 ರಂದು ಪಂಚಭಾಷೆಗಳಲ್ಲಿ ಬಿಡುಗಡೆಯಾಗಲಿದ್ದುಎಲ್ಲರೂ ಕಾತರರಾಗಿದ್ದಾರೆ.

Get real time updates directly on you device, subscribe now.