ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಎಲಾನ್ ಮಸ್ಕ್ ರವರಿಗೆ ಮತ್ತೊಂದು ಸ್ಪಷ್ಟ ಸಂದೇಶ ರವಾನೆ ಮಾಡಿ ಶಾಕ್ ನೀಡಿದ ಕೇಂದ್ರ, ಭಾರತೀಯ ಕಾರು ಉತ್ಪಾದಕರಿಗೆ ಸಿಹಿ ಸುದ್ದಿ. ಏನು ಗೊತ್ತೇ??

36

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಭಾರತದಲ್ಲಿ ಇಂಧನದ ಹೆಚ್ಚಳ ಹಾಗೂ ಮಾಲಿನ್ಯ ಹೆಚ್ಚಳದ ಹಾರಣದಿಂದಾಗಿ ಕೇಂದ್ರ ಸರ್ಕಾರ ಇಲೆಕ್ಟ್ರಿಕ್ ವಾಹನಗಳ ಬಗ್ಗೆ ಹೆಚ್ಚು ಒಲವನ್ನು ತೋರಿಸುತ್ತಿದೆ. ಭಾರತದಲ್ಲಿ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ವೇದಿಕೆಯನ್ನು ಒದಗಿಸಿಕೊಟ್ಟಿದೆ. ಹಾಗಾಗಿ ಈಗಾಗಲೇ ಭಾರತ ಕೆಲವು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಿದ್ದು ಅವುಗಳಲ್ಲಿ ಕೆಲವು ಸಕ್ಸೆಸ್ ನ್ನು ಕೂಡ ಕಂಡಿವೆ. ಇನ್ನು ವಿದೇಶಿ ಮೋಟಾರ್ಸ್ ಕಂಪನಿಗಳೂ ಕೂಡ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಗೆ ಪ್ರಯತ್ನಿಸುತ್ತಿವೆ. ಅವುಗಳಲ್ಲಿ ಅಮೇರಿಕಾದ ಟೆಸ್ಲಾ ಇಲೆಕ್ಟ್ರಿಕ್ ಕಾರು ಕೂಡ ಒಂದು.

ಅಮೆರಿಕದ ಅತೀ ದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಿಕಾ ಘಟಕ ಟೆಸ್ಲಾ, ಭಾರತದಲ್ಲಿ ಕಾರು ಬಿಡುಗಡೆಗೆ ಕಳೆದ ಹಲವು ವರ್ಷಗಳಿಂದ ಪ್ರಯತ್ನಪಡುತ್ತಿದೆ. ಇತ್ತೀಚೆಗೆ ಟ್ವಿಟರ್ ಮೂಲಕ ನಡೆದ ಚರ್ಚೆಗಳನ್ನೂ ನೀವು ನೋಡಿರಬಹುದು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯವನ್ನು ತಿಳಿಸಿದೆ. ಸದ್ಯ ಟೆಸ್ಲಾ ಮಾಡಿದ ತೆರಿಗೆ ವಿನಾಯಿತಿ ತೀರ್ಮಾನವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಟೆಸ್ಲಾ ಈ ಮೊದಲು ಕೂಡ ಕೇಂದ್ರ ಸರ್ಕಾರದೊಂದಿಗೆ ತೆರಿಗೆ ಸಂಬಂಧಿಸಿದಂತೆ ನಿನಾಯತಿಯನ್ನು ಕೇಳಿತ್ತು. ಆದರೆ ಕೇಂದ್ರ ಇದಕ್ಕೆ ಒಪ್ಪಿಗೆಯನ್ನು ನೀಡಿರಲಿಲ್ಲ. ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಆಮದಿಗೆ ಸುಂಕ ಹಾಗೂ ಇತರ ತೆರಿಗೆ ಕಡಿತಗೊಳಿಸಬೇಕು ಇಲ್ಲವಾದರೆ ಭಾರತದಲ್ಲಿ ಟೆಸ್ಲಾ ಕಾರು ತುಂಬಾ ದುಬಾರಿಯಾಗುತ್ತದೆ ಎಂದು ಎಂದು ಟೆಸ್ಲಾ ಮನವಿ ಮಾಡಿದೆ. ಇದೀಗ ಟೆಸ್ಲಾ ಮನವಿಯನ್ನು ಕೇಂದ್ರ ಸರ್ಕಾರ ತರಿಸ್ಕರಿಸಿರುವುದಾಗಿ ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸ್ ಹಾಗೂ ಕಸ್ಟಮ್ ಮುಖ್ಯಸ್ಥ ವಿವೇಕ್ ಜೋಹ್ರಿ ಆಹಿತಿ ನೀಡಿದ್ದಾರೆ.

ಈಗಾಗಲೇ ಹಲವು ವಿದೇಶಿ ಕಂಪನಿಗಳು ಭಾರತದ ತೆರಿಗೆ ನೀತಿ ಮೂಲಕ ವ್ಯವಹಾರ ನಡೆಸುತ್ತಿದೆ. ಬಿಡಿ ಭಾಗಗಳ ಆಮದು ಮಾಡಿಕೊಳ್ಳಲು ಸದ್ಯ ಚಾಲ್ತಿಯಲ್ಲಿರುವ ನೀತಿಯನ್ನು ಒಪ್ಪಿಕೊಂಡಿದೆ. ಹೀಗಾಗಿ ಇತರ ಕಂಪನಿಗಳಿಗಿಲ್ಲದ, ವಿನಾಯಿತಿಯನ್ನು ಟೆಸ್ಲಾಗೆ ಮಾತ್ರ ಕೊಡಲಾಗುವುದಿಲ್ಲ ಎಂದು ವಿವೇಕ್ ಜೋಹ್ರಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಎಲಾನ್ ಮಸ್ಕ್, ಭಾರತದಲ್ಲಿ ಅತೀ ಹೆಚ್ಚು ತೆರಿಗೆ ಇದೆ. ವಿಶ್ವದಲ್ಲಿ ಬೇರೆ ಯಾಅ ದೇಶದಲ್ಲೂ ಇಲ್ಲದ ತೆರಿಗೆ ನೀತಿ ಭಾರತದಲ್ಲಿರುವುದರಿಂದ ಇಲ್ಲಿ ಕಾರು ಮಾರಾತ ದುಬಾರಿಯಾಗುತ್ತಿದೆ. ಟೆಸ್ಲಾ ಮಡೆಲ್ 3ರ ಬೆಲೆ 30ಲಕ್ಷ ರೂ. ಆದರೆ ಭಾರತದಲ್ಲಿ ಅದು 60 ಲಕ್ಷವಾಗುತ್ತದೆ ಎಂದಿದ್ದಾರೆ ಮಸ್ಕ್. ಈ ಸಂಬಂಧ ನಾವು ಹಲವು ಸವಾಲುಗಳನ್ನು ಎದುರಿಸುತ್ತಿದ್ದೇವೆ. ತೆರಿಗೆ ವಿನಾಯಿತಿಗೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಮಸ್ಕ್ ಸಾಮಾಜಿಕ ಜಾಲತಾಣಗಳಲ್ಲಿಯೂ ಹೇಳಿದ್ದರು. ಟೆಸ್ಲಾ ಘಟಕವನ್ನು ತಮ್ಮ ರಾಜ್ಯಗಳಲ್ಲಿ ಸ್ಥಾಪಿಸುವಂತೆ ಕರ್ನಾಟಕ, ತಮಿಳುನಾಡು, ಪಂಜಾಬ್ ಸೇರಿದಂತೆ 5 ಕ್ಕೂ ಹೆಚ್ಚು ರಾಜ್ಯಗಳು ಎಲಾನ್ ಮಸ್ಕ್ ಗೆ ಮನವಿ ಕಳುಹಿಸಿದ್ದರು. ಆದರೆ ಕೇಂದ್ರ ಸರ್ಕಾರದ ಆಮದು ಸುಂಕ ವಿನಾಯಿತಿ ಇಲ್ಲದೆ ಇದು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ಅರಿವಿಗೆ ಬರಬೇಕಾದ ವಿಚಾರ

Get real time updates directly on you device, subscribe now.