ಹುಂಡೈ ಕಂಪನಿಗೆ ಮರ್ಮಾಘಾತ, ಎಲ್ಲರೂ ಒಟ್ಟಾಗಿ ನಿಂತ ಪರಿಣಾಮ ಇದೀಗ ಏನಾಗಿದೆ ಗೊತ್ತೇ?? ಭಾರತೀಯರು ಫುಲ್ ಖುಷ್.

ಹುಂಡೈ ಕಂಪನಿಗೆ ಮರ್ಮಾಘಾತ, ಎಲ್ಲರೂ ಒಟ್ಟಾಗಿ ನಿಂತ ಪರಿಣಾಮ ಇದೀಗ ಏನಾಗಿದೆ ಗೊತ್ತೇ?? ಭಾರತೀಯರು ಫುಲ್ ಖುಷ್.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ 48 ಗಂಟೆಗಳಿಂದ ದಕ್ಷಿಣ ಕೊರಿಯಾದ ಕಾರಿನ ಸಂಸ್ಥೆಯಾಗಿರುವ ಹುಂಡೈ ಕಾರುಗಳನ್ನು ಭಾರತೀಯರು ಕೊಂಡು ಕೊಳ್ಳಬಾರದು ಎಂಬ ಸಂದೇಶ ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಹರಿದಾಡುತ್ತಿವೆ, ಹುಂಡೈ ಕಂಪನಿ ತನ್ನ ಪಾಡಿಗೆ ತಾನು ಸುಮ್ಮನೆ ಇರದೇ ಸಾಮಾಜಿಕ ಜಾಲತಾಣಗಳಲ್ಲಿ ಕಾಶ್ಮೀರದ ಪರ ಅನವಶ್ಯಕ ಚರ್ಚೆ ತೆಗೆದು ಪಾಕಿಸ್ತಾನದ ಪರ ನಿಂತಿತ್ತು, ಈ ಪೋಸ್ಟ್ನಲ್ಲಿ ಇಡೀ ಕಾಶ್ಮೀರಕ್ಕೆ ಮುಳ್ಳಿನ ತಂತಿ ಹಾಕಲಾಗಿದೆ ಎಂಬಂತೆ ಬಿಂಬಿಸಲಾಗಿತ್ತು.

ಇದನ್ನು ನೋಡಿದ ಭಾರತೀಯರು ಹುಂಡೈ ಕಂಪನಿ ಪಾಕ್ ಘಟಕ ಮಾಡಿದ ಪೋಸ್ಟ್ ವಿರುದ್ಧ ಮಾತನಾಡಿ ಎಲ್ಲರೂ ಕೂಡ ಹುಂಡೈ ಕಾರುಗಳನ್ನು ಖರೀದಿ ಮಾಡಬಾರದು ಎಂದು ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ ಸೃಷ್ಟಿ ಮಾಡಿದ್ದರು. ಇದರ ಬೆನ್ನಲ್ಲೇ ಭಾರತದ ಹುಂಡೈ ಈ ಕುರಿತು ಮಾತನಾಡಿ ಸ್ಪಷ್ಟನೆ ನೀಡಿದ್ದರೂ ಅಲ್ಲಿ ಯಾವುದೇ ಕ್ಷಮೆ ಕೇಳಿರಲಿಲ್ಲ, ಇನ್ನು ಇಷ್ಟೆಲ್ಲಾ ನಡೆಯುತ್ತಿರುವಾಗ ಹುಂಡೈ ಕುರಿತಾದ ಟ್ರೆಂಡಿಂಗ್ ಸೃಷ್ಟಿಯಾದ ಕೂಡಲೇ ಹುಂಡೈ ಕಂಪನಿಗೆ ಮೊದಲ ಶಾಕ್ ತಗುಲಿದೆ.

ಹೌದು ಸ್ನೇಹಿತರೇ ಭಾರತೀಯರು ಲಕ್ಷಾಂತರ ಸಂಖ್ಯೆಯಲ್ಲಿ ಹುಂಡೈ ಕಾರುಗಳನ್ನು ಖರೀದಿ ಮಾಡಬಾರದು ಎಂಬ ಮಹತ್ವದ ಮಾಹಿತಿಯ ಮೂಲಕ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ಕಾರಣ ಕಂಪನಿಯ ಶೇರ್ ಮೊಲ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ, ಹೌದು ಸ್ನೇಹಿತರೆ ಬರೋಬ್ಬರಿ ಒಂದೇ ದಿನದಲ್ಲಿ ಒಂದು ಷೇರಿನ ಮೌಲ್ಯ 4500 ರೂಪಾಯಿಗಳಷ್ಟು ಕಡಿಮೆಯಾಗಿದೆ, ಈ ಮೊದಲು 190000 ರೂಪಾಯಿ ಇದ್ದ ಶೇರ್ ವ್ಯಾಲ್ಯೂ ಇದೀಗ ಸಾವಿರದ 185500 ರೂಪಾಯಿಗೆ ಬಂದು ತಲುಪಿದೆ. ಈ ಲೇಖನ ಬರೆಯುವುದಕ್ಕೆ ಒಂದು ಶೇರಿನ ಬೆಲೆ 185500 ಇದ್ದು ಖಂಡಿತ ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆ ಮಾಡಿ ತೋರಿಸುತ್ತೇವೆ ಎಂದು ಟ್ವಿಟ್ಟರ್ನಲ್ಲಿ ಜನರು ಪೋಸ್ಟ್ ಮಾಡುವುದನ್ನು ಮುಂದುವರಿಸಿದ್ದಾರೆ.