ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಧೋನಿ ತೆಗೆದುಕೊಂಡ ಆ ಒಂದು ನಿರ್ಧಾರ ಲತಾಮಂಗೇಶ್ಕರ್ ಅಸಮಾಧಾನ ತಂದಿತ್ತು, ಅಂದು ಏನು ಹೇಳಿದ್ದರು ಗೊತ್ತೇ??

19

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಭಾರತದ ಕೋಗಿಲೆ ಆಗಿರುವ ಲತಾ ಮಂಗೇಶ್ಕರ್ ಅವರ ನಿಧನದ ಹಿನ್ನೆಲೆಯಲ್ಲಿ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದೆ ಎಂದು ಹೇಳಬಹುದಾಗಿದೆ. ಬರೋಬ್ಬರಿ 36 ಭಾಷೆಗಳಲ್ಲಿ 50ಸಾವಿರಕ್ಕೂ ಅಧಿಕ ಹಾಡನ್ನು ಹಾಡಿರುವ ಸಾಧನೆಯನ್ನು ಮಾಡಿರುವ ಲತಾಮಂಗೇಶ್ಕರ್ ರವರ ಜೀವನ ಎನ್ನುವುದು ಖಂಡಿತವಾಗಿಯೂ ಅದೆಷ್ಟೋ ಜೀವಗಳಿಗೆ ಸ್ಫೂರ್ತಿ ಎಂದರೆ ಖಂಡಿತವಾಗಿಯು ತಪ್ಪಾಗಲಾರದು. ಲತಾ ಮಂಗೇಶ್ಕರ್ ಅವರು ಮಹಾಮಾರಿಯ ಕಾರಣದಿಂದಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇವರ ಸಾಧನೆಗೆ ಭಾರತ ರತ್ನ ಹಾಗೂ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಕೂಡ ದೊರಕಿದೆ. ಇವರು ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲದೆ ಕ್ರಿಕೆಟ್ ಕ್ಷೇತ್ರದಲ್ಲಿಯೂ ಕೂಡ ಇವರು ಸಾಕಷ್ಟು ಆಸಕ್ತಿಯನ್ನು ಹೊಂದಿದ್ದರು. ಇವರಿಗೆ ಸಚಿನ್ ತೆಂಡೂಲ್ಕರ್ ಅವರು ಎಂದರೆ ಎಲ್ಲಿಲ್ಲದ ಪ್ರೀತಿ. ಆದರೆ ಒಮ್ಮೆ ಇವರಿಗೆ ಮಹೇಂದ್ರ ಸಿಂಗ್ ದೋನಿ ರವರು ಮಾಡಿರುವಂತಹ ನಿರ್ಧಾರದಿಂದಾಗಿ ಸಾಕಷ್ಟು ಬೇಸರವಾಗಿತ್ತು. ಅಷ್ಟಕ್ಕೂ ಲತಾ ಮಂಗೇಶ್ಕರ್ ಅವರು ಬೇಸರ ಮಾಡಿಕೊಳ್ಳುವಷ್ಟರಮಟ್ಟಿಗೆ ಮಹೇಂದ್ರ ಸಿಂಗ್ ಧೋನಿ ರವರು ಏನನ್ನು ನಿರ್ಧಾರ ಮಾಡಿದ್ದರು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ಅವರು ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ( ಐಪಿಎಲ್ ಹೊರತುಪಡಿಸಿ ) ನಿವೃತ್ತಿಯನ್ನು ಪಡೆದುಕೊಂಡಿದ್ದರು. ಇದರಿಂದಾಗಿ ಇಡೀ ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳಿಗೆ ದುಃಖವಾಗಿತ್ತು. ಇದರಲ್ಲಿ ಲತಾಮಂಗೇಶ್ಕರ್ ಅವರು ಕೂಡ ಸೇರಿದ್ದರು. ಹೀಗಾಗಿ ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ಮಹೇಂದ್ರ ಸಿಂಗ್ ಧೋನಿ ರವರಿಗೆ ನಿವೃತ್ತಿಯ ವಿಚಾರವನ್ನು ಹಿಂತೆಗೆದುಕೊಳ್ಳುವುದಕ್ಕೆ ಸಲಹೆಯನ್ನು ನೀಡಿದ್ದರು. ಆ ವಿಚಾರವನ್ನು ಇಂದು ನೆನೆಸಿಕೊಂಡಾಗಲೆಲ್ಲ ಕಣ್ಣು ತೇವವಾಗುವುದಂತೂ ಸತ್ಯ.

Get real time updates directly on you device, subscribe now.