ಈ ವಾರ ಅತ್ಯಂತ ಹೆಚ್ಚು ಟಿ ಆರ್ ಪಿ ರೇಟಿಂಗ್ ಪಡೆದಿರುವ ಕನ್ನಡದ ಧಾರವಾಹಿ ಯಾವುದು ಗೊತ್ತಾ?? ಯಾವ್ಯಾವ ಸೀರಿಯಲ್ ಟಾಪ್ ಗೊತ್ತೇ??

ಈ ವಾರ ಅತ್ಯಂತ ಹೆಚ್ಚು ಟಿ ಆರ್ ಪಿ ರೇಟಿಂಗ್ ಪಡೆದಿರುವ ಕನ್ನಡದ ಧಾರವಾಹಿ ಯಾವುದು ಗೊತ್ತಾ?? ಯಾವ್ಯಾವ ಸೀರಿಯಲ್ ಟಾಪ್ ಗೊತ್ತೇ??

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ಹೇಗೆ ಚಿತ್ರಗಳು ಎಷ್ಟು ಬಾಕ್ಸಾಫೀಸ್ ಕಲೆಕ್ಷನ್ ಮಾಡುತ್ತಾರೆ ಎನ್ನುವುದರ ಮೇಲೆ ಅವುಗಳ ಸೋಲು-ಗೆಲುವನ್ನು ನಿರ್ಧರಿಸುತ್ತಾರೋ ಹಾಗೇನೆ ಕಿರುತೆರೆಯಲ್ಲಿ ಧಾರವಾಹಿಗಳನ್ನು ಅವುಗಳ ಟಿಆರ್ ಪಿ ಆಧಾರದ ಮೇಲೆ ಸೋಲು-ಗೆಲುವುಗಳನ್ನು ಹಾಗೂ ಜನಪ್ರಿಯತೆಯನ್ನು ನಿರ್ಧರಿಸಲಾಗುತ್ತದೆ. ಇದಕ್ಕಾಗಿ ಕಿರುತೆರೆಗಳು ಕ್ವಾಲಿಟಿ ಹಾಗೂ ಕಂಟೆಂಟ್ ಹೊಂದಿರುವಂತಹ ಧಾರವಾಹಿಗಳನ್ನು ಪ್ರಸಾರಮಾಡಲು ಪೈಪೋಟಿಯಲ್ಲಿ ಬಿದ್ದಿರುತ್ತಾರೆ. ಹೀಗಾಗಿ ಈ ಬಾರಿಯ ಟಿಆರ್ ಪಿ ಲಿಸ್ಟ್ನಲ್ಲಿ ಯಾರು ಯಾವ ಸ್ಥಾನವನ್ನು ಪಡೆದಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

Follow us on Google News

ಮೊದಲನೇದಾಗಿ ನೋಡುವುದಾದರೆ ನಟಿ ಉಮಾಶ್ರೀ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜೀ ಕನ್ನಡ ವಾಹಿನಿಯ ಸೂಪರ್ ಹಿಟ್ ಧಾರವಾಹಿ ಆಗಿರುವ ಪುಟ್ಟಕ್ಕನ ಮಕ್ಕಳು ಕಾಣಿಸುತ್ತದೆ. ಪ್ರಾರಂಭದಿಂದಲೂ ಕೂಡ ಪುಟ್ಟಕ್ಕನ ಮಕ್ಕಳು ಧಾರವಾಹಿ ರೇಟಿಂಗ್ ವಿಚಾರದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಲೀಡ್ ಅನ್ನು ಕಾಯ್ದುಕೊಂಡು ಬಂದಿದೆ. ಪ್ರತಿಬಾರಿ 13 ಪ್ಲಸ್ ರೇಟಿಂಗ್ ಅನ್ನು ಪಡೆದುಕೊಂಡು ಬರುತ್ತಿದೆ. ಈ ಬಾರಿಯೂ ಕೂಡ 13.2 ರೇಟಿಂಗ್ ಅನ್ನು ಪಡೆದುಕೊಂಡಿದೆ. ಧಾರವಾಹಿಯಲ್ಲಿ ಕೂಡ ಪದೇ ಪದೇ ಕಂಡುಬರುತ್ತಿರುವ ಟ್ವಿಸ್ಟ್ ಹಾಗೂ ಭಾವನಾತ್ಮಕ ಸನ್ನಿವೇಶಗಳು ಪ್ರೇಕ್ಷಕರಲ್ಲಿ ಧಾರವಾಹಿ ಕುರಿತಂತೆ ಇನ್ನಷ್ಟು ಕುತೂಹಲವನ್ನು ಮೂಡಿಸಿದೆ. ಮಕ್ಕಳಿಗೆ ಗೊತ್ತಾಗದಹಾಗೆ ಪುಟ್ಟಕ್ಕ ಬಂಗಾರಮ್ಮನ ಬಳಿ 10 ಲಕ್ಷ ರೂಪಾಯಿ ಸಾಲವನ್ನು ಪಡೆಯಲು ಹೋಗಿದ್ದಾಳೆ ಇದೆ ಈಗ ಧರವಾಹಿ ಪ್ರಮುಖ ಅಂಶವಾಗಿದೆ.

ಜೀ ಕನ್ನಡ ವಾಹಿನಿಯ ಮತ್ತೊಂದು ಧಾರವಾಹಿ ಆಗಿರುವ ಗಟ್ಟಿಮೇಳ ಧಾರವಾಹಿ ಕೂಡ ಈ ಬಾರಿ 11.5 ರೇಟಿಂಗ್ ಪಡೆದುಕೊಂಡಿದೆ. ರೌಡಿ ಬೇಬಿ ಅಮೂಲ್ಯ ಹಾಗೂ ವೇದಾಂತ್ ರವರ ನಡುವಿನ ಕ್ಯೂಟ್ ಜಗಳವನ್ನು ಪ್ರೇಕ್ಷಕರು ಇಷ್ಟಪಡುತ್ತಿದ್ದಾರೆ. ವೇದಾಂತ ತನಗೆ ಗೊತ್ತಿಲ್ಲದೆ ತನ್ನ ತಾಯಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಕುಟುಂಬಕ್ಕೆ ಮತ್ತೆ ವೈದೇಹಿ ಬಂದಿದ್ದು ಸುಹಾಸಿನಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಹೆಜ್ಜೆಯನ್ನು ಇಡುತ್ತಾಳೆ ಎಂಬುದೇ ಪ್ರೇಕ್ಷಕರಿಗೆ ಕುತೂಹಲವನ್ನೂ ಹುಟ್ಟಿಸಿದೆ.

ಮೂರನೇ ಸ್ಥಾನದಲ್ಲಿ ಹಿಟ್ಲರ್ ಕಲ್ಯಾಣ ಧಾರವಾಹಿ ಇದೆ. ಇದರ ಈ ವಾರದ ರೇಟಿಂಗ್ 10.2 ಇದೆ. ಲೀಲಾ ಹಾಗೂ ಎಜೆ ನಡುವಣ ಶೀತಲ ಸಮರ ಎನ್ನುವುದು ಪ್ರೇಕ್ಷಕರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಮನೋರಂಜನೆಯನ್ನು ನೀಡುತ್ತಿದೆ ಎನ್ನುವುದಕ್ಕೆ ಇದರ ರೇಟಿಂಗ್ ನಿಮಗೆ ಉದಾಹರಣೆ ಎಂದು ಹೇಳಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಹಿಟ್ಲರ್ ಕಲ್ಯಾಣ ಧಾರಾವಾಹಿ ಕ್ರಮೇಣವಾಗಿ ಪ್ರೇಕ್ಷಕರಿಗೆ ನೆಚ್ಚಿನ ಧಾರವಾಹಿಯಾಗಿ ಮಾರ್ಪಡುತ್ತಿದೆ.

ನಾಲ್ಕನೇ ಸ್ಥಾನಕ್ಕೆ ಬರುವುದಾದರೆ ಇಲ್ಲಿ ಜೀ ಕನ್ನಡ ವಾಹಿನಿಯ ಎರಡು ಧಾರವಾಹಿಗಳು ಈ ಸ್ಥಾನವನ್ನು ಹಂಚಿಕೊಂಡಿವೆ ಎಂದು ಹೇಳಬಹುದಾಗಿದೆ. ಹೌದು ಈ ನಾಲ್ಕನೇ ಸ್ಥಾನದಲ್ಲಿ ಜೊತೆಜೊತೆಯಲ್ಲಿ ಹಾಗೂ ಸತ್ಯ ದಾರವಾಹಿಗಳು ಕಂಡುಬರುತ್ತದೆ. ಅನಿರುದ್ಧ್ ನಿರ್ವಹಿಸುತ್ತಿರುವ ಆರ್ಯವರ್ಧನ ಪಾತ್ರ ಒಂದೊಂದು ನಿಜರೂಪವನ್ನು ಬಹಿರಂಗಗೊಳಿಸುವುದೇ ಪ್ರೇಕ್ಷಕರಿಗೆ ಕುತೂಹಲದ ವಿಷಯವಾಗಿದೆ. ಈ ಕಡೆ ಸತ್ಯ ಧಾರವಾಹಿ ಬಗ್ಗೆ ಬರುವುದಾದರೆ ಅಮೂಲ್ ಬೇಬಿ ಜೀವನದಲ್ಲಿ ಸತ್ಯ ಹೇಗೆ ಕಾಲಿಡುತ್ತಾಳೆ ಎಂಬುದೇ ಈಗ ಕುತೂಹಲಕರವಾದ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಈ ವಿಚಾರವೂ ಕೂಡ ಅಭಿಮಾನಿಗಳಿಗೆ ಕಾತರರಾಗಿರುವಂತೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪಾರು ಧಾರವಾಹಿ 5ನೇ ಸ್ಥಾನದಲ್ಲಿ ಕಂಡುಬರುತ್ತದೆ. ಕಳೆದ ವಾರ ಈ ಧಾರವಾಹಿ ಆರನೇ ಸ್ಥಾನದಲ್ಲಿದ್ದು ಈ ವಾರ ಒಂದು ಸ್ಥಾನದ ಭಡ್ತಿ ಪಡೆದುಕೊಂಡಿದೆ ಎಂದು ಹೇಳಬಹುದಾಗಿದೆ. ಸದ್ಯಕ್ಕೆ ಆದಿ ಹಾಗೂ ಯಾಮಿನಿಯ ಮದುವೆ ತಯಾರಿಗಳು ಆರಂಭವಾಗಿದ್ದು ಪಾರು ಒಂದು ವೇಳೆ ಮನಸ್ಸನ್ನು ಬದಲಾಯಿಸಿ ಈ ಮದುವೆಯನ್ನು ತಡೆಯುತ್ತಾಳೆ ಎಂಬುದನ್ನು ಕಾದುನೋಡಬೇಕಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಕನ್ನಡ ಕಿರುತೆರೆ ವಾಹಿನಿಗಳ ಧಾರವಾಹಿಗಳು ಒಂದನ್ನು ಮೀರಿಸುವಂತೆ ಇನ್ನೊಂದು ಚೆನ್ನಾಗಿ ಮೂಡಿಬರುತ್ತಿವೆ.