ಕೊನೆಗೂ ಬಹು ನಿರೀಕ್ಷಿತ ಹೊಸ ಸೇವೆ ಆರಂಭಿಸಿದ ಎಸ್ ಬಿ ಐ, ಎಲ್ಲಾ ಗ್ರಾಹಕರಿಗೂ ಸಿಗಲಿದೆ ಭರ್ಜರಿ ಲಾಭ. ಏನು ಗೊತ್ತೇ??

ಕೊನೆಗೂ ಬಹು ನಿರೀಕ್ಷಿತ ಹೊಸ ಸೇವೆ ಆರಂಭಿಸಿದ ಎಸ್ ಬಿ ಐ, ಎಲ್ಲಾ ಗ್ರಾಹಕರಿಗೂ ಸಿಗಲಿದೆ ಭರ್ಜರಿ ಲಾಭ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಅನುಕೂಲವಾಗುವಂಥ ಹತ್ತು ಹಲವಾರು ಯೋಜನೆಗಳನ್ನು ಪರಿಚಯಿಸುತ್ತದೆ. ಸಾರ್ವಜನಿಕ ವಲಯದಲ್ಲಿ ಅತ್ಯುತ್ತಮ ಬ್ಯಾಂಕಿಂಗ್ ಸೇವೆಯನ್ನು ಎಸ್ ಬಿ ಐ. ಇದೀಗ ಗ್ರಾಹಕರ ಅನುಕೂಲಕ್ಕಾಗಿ ಇನ್ನೊಂದು ಹೊಸ ಸೇವೆಯೊಂದಿಗೆ ನಿಂತಿದ್ದು, ಇದರಿಂದ ಗ್ರಾಹಕರು ಬ್ಯಾಂಕ್ ಕ್ಯೂನಲ್ಲಿ ನಿಂತು ಕೆಲಸ ಮಾಡಿಸಿಕೊಳ್ಳುವ ಶೇ 50 ಮನೆಯಲ್ಲಿಯೇ ಮಾಡಬಹುದು. ಹೇಗೆ ಅಂತಿರಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ಹೌದು ಸ್ನೇಹಿತರೆ, ಇದೀಗ ಎಸ್ ಬಿ ಐ ಟೋಲ್ ಫ್ರೀ ಸಂಖ್ಯೆಯನ್ನು ಪರಿಚಯಿಸಿದೆ. ಇದರಿಂದ ಗ್ರಾಹಕರು ಕುಳಿತಲ್ಲಿಯೇ, ಬ್ಯಾಂಕಿನ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಎಸ್ ಬಿ ಐ ನವರ ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ, ನಿಮ್ಮ ಖಾತೆಯ ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಹಿಂದಿನ ವಹಿವಾಟಿನ ಸಂಪೂರ್ಣ ವಿವರಗಳನ್ನು ಪಡೆಯಬಹುದು. ಅಂದರೆ, ನಿಮ್ಮ ಒಂದು ಕರೆ ನಿಮ್ಮ ಬ್ಯಾಂಕ್ ವಹಿವಾಟಿನ ಮಾಹಿತಿಯನ್ನು ಸೂಕ್ತವಾಗಿ ನೀಡುತ್ತದೆ.

ಟೋಲ್ ಫ್ರೀ ನಂಬರ್ ಗೆ ಕಾಲ್ ಮಾಡಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ತಿಳಿಯಬಹುದು. ನಿಮ್ಮ ಕೊನೆಯ ಐದು ವಹಿವಾಟುಗಳ ಮಾಹಿತಿಯನ್ನು ಪಡೆಯಬಹುದು. ಟೋಲ್ ಫ್ರೀ ಸಂಖ್ಯೆ ಗೆ ಸಂದೇಶ ಕಳುಹಿಸಿದರೆ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಕೊನೆಯ ಐದು ವಹಿವಾಟುಗಳ ಬಗ್ಗೆ ಮಾಹಿತಿ ಬರುತ್ತದೆ. ಸಮಸ್ಯೆಯಾಗಿದ್ದಲ್ಲಿ ನಿಮ್ಮ ಎಟಿಎಂ ಕಾರ್ಡ್ ಅನ್ನು ಬ್ಲಾಕ್ ಮಾಡಬಹುದು. ಎಟಿಎಂ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಇನ್ನು ನಿಮ್ಮ ಎಟಿಎಂ ಕಾರ್ಡ್‌ನ ಪಿನ್ ಅನ್ನು ಜನರೇಟ್ ಮಾಡಬಹುದು. ಕರೆ ಮಾಡಲು ಹಾಗೂ ಸಂದೇಶ ಕಳುಹಿಸಲು ಎಸ್ ಬಿ ಐ ನ ಟೋಲ್ ಫ್ರೀ ಸಂಖ್ಯೆ 1800 1234.