ಮೊದಲ ಬಾರಿಗೆ ಕಿಂಗ್ ಕೊಹ್ಲಿ ಕುರಿತು ಬಹಿರಂಗವಾಗಿ ಮಾತನಾಡಿದ ರಿಕಿ ಪಾಂಟಿಂಗ್ ಹೇಳಿದ್ದೇನು ಗೊತ್ತೇ??

ಮೊದಲ ಬಾರಿಗೆ ಕಿಂಗ್ ಕೊಹ್ಲಿ ಕುರಿತು ಬಹಿರಂಗವಾಗಿ ಮಾತನಾಡಿದ ರಿಕಿ ಪಾಂಟಿಂಗ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ರಿಕಿ ಪಾಂಟಿಂಗ್ ಆಸ್ಟ್ರೇಲಿಯಾ ತಂಡದ ನಾಯಕ. ಆಸ್ಟ್ರೇಲಿಯಾ ತಂಡ ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಸಾಧಿಸಲು ಮಾತ್ರವಲ್ಲದೇ, ವಿಶ್ವದೆಲ್ಲೆಡೆ ಪ್ರಭುತ್ವ ಸಾಧಿಸಲು ಕಾರಣೀಭೂತರಾದ ನಾಯಕ. 2011ರ ವಿಶ್ವಕಪ್ ನಂತರ ರಿಕಿ ಪಾಂಟಿಂಗ್ ಕ್ರಿಕೇಟ್ ನಿಂದ ನಿವೃತ್ತರಾದರು. ಸದ್ಯ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ರಿಕಿ ಪಾಂಟಿಂಗ್, ಭಾರತ ತಂಡದ ನಿರ್ಗಮಿತ ನಾಯಕ, ವಿರಾಟ್ ಕೊಹ್ಲಿಯವರ ಬಗ್ಗೆ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.ಬನ್ನಿ ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ರಿಕಿ ಪಾಂಟಿಂಗ್ ಪ್ರಕಾರ, ವಿರಾಟ್ ಕೊಹ್ಲಿ ನನಗಿಂತಲೂ ವಿಶ್ವ ಕಂಡ ಶ್ರೇಷ್ಠ ನಾಯಕರಾಗಿದ್ದಾರೆ. ನಾನು ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸಿದಾಗ ನಮ್ಮ ತಂಡದಲ್ಲಿ ವಿಶ್ವ ಶ್ರೇಷ್ಠ ಕ್ರಿಕೇಟಿಗರಿದ್ದರು. ಅದಲ್ಲದೇ ನಮ್ಮ ತಂಡ ಅದಾಗಲೇ, ವಿಶ್ವದ ಎಲ್ಲಾ ಕಡೆ , ಟೆಸ್ಟ್ ಸರಣಿಯನ್ನು ಗೆಲ್ಲುವ ಪರಿಪಾಠ ಬೆಳೆಸಿಕೊಂಡಿತ್ತು. ನಾನು ನಾಯಕನಾದ ನಂತರ ಈ ಪರಿಪಾಠ ಮತ್ತಷ್ಟು ಮುಂದುವರೆಯಿತಷ್ಟೆ.

ಆದರೇ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡಾಗ ಭಾರತ ತಂಡ ವಿದೇಶಿ ನೆಲ ಅಂದರೇ ಸೇನಾ ದೇಶಗಳಲ್ಲಿ ಟೆಸ್ಟ್ ಸರಣಿಯಿರಲಿ, ಒಂದು ಟೆಸ್ಟ್ ಪಂದ್ಯವನ್ನು ಸಹ ಗೆಲ್ಲುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ನಾಯಕರಾಗಿ ಬಂದ ವಿರಾಟ್ ತಂಡದಲ್ಲಿ ಧೈರ್ಯ ಹಾಗೂ ಆತ್ಮವಿಶ್ವಾಸವನ್ನು ತುಂಬಿದರು. ನಂತರ ಭಾರತ ತಂಡ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಗಳಲ್ಲಿಯೂ ಸಹ ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ಆರಂಭಿಸಿತು. ಆಸ್ಟ್ರೇಲಿಯಾ ನೆಲದಲ್ಲಿ, ಆಸ್ಟ್ರೇಲಿಯಾವನ್ನು ಮಣಿಸಿ ಎರಡು ಭಾರಿ ಟೆಸ್ಟ್ ಸರಣಿ ಗೆದ್ದಿರುವುದು ನಿಜಕ್ಕೂ ಐತಿಹಾಸಿಕ ಸಾಧನೆ. ಭಾರತ ತಂಡಕ್ಕೆ ಗೆಲ್ಲುವ ಅಭ್ಯಾಸವನ್ನು ರೂಢಿಸಿದ್ದೇ ವಿರಾಟ್ ಕೊಹ್ಲಿ. ಹಾಗಾಗಿ ವಿರಾಟ್ ನನ್ನ ಪ್ರಕಾರ, ಭಾರತ ಕ್ರಿಕೇಟ್ ತಂಡದ ಶ್ರೇಷ್ಠ ನಾಯಕರಾಗುತ್ತಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.