ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪುಷ್ಪ ಚಿತ್ರದಲ್ಲಿ ನಟಿಸುವ ಅವಕಾಶವನ್ನು ನಿರಾಕರಿಸಿದ ಟಾಪ್ 5 ನಟ ನಟಿಯರು ಯಾರು ಗೊತ್ತೇ?? ಯಾರ್ಯಾಗಿಗೆ ಯಾವ ಪಾತ್ರ ಸಿಗುತಿತ್ತು ಗೊತ್ತೇ??

19

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ 2021 ರ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಅಲ್ಲುಅರ್ಜುನ್ ನಟನೆಯ ಪುಷ್ಪಾ ಚಿತ್ರದ ಮೊದಲ ಭಾಗ ಪಾತ್ರವಾಗಿದೆ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರಗಳು ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿರುತ್ತಿದ್ದವು. ಆದರೆ ಈಗ ಭಾಷೆಗಳ ಎಲ್ಲೆಯನ್ನು ಮೀರಿ ಉತ್ತರ ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಕೂಡ ದೊಡ್ಡಮಟ್ಟದ ಹೆಸರು ಹಾಗೂ ಹಣವನ್ನು ಗಳಿಸುತ್ತಿವೆ. ಇನ್ನು ನಿಮಗೆ ಪುಷ್ಪ ಚಿತ್ರದ ಬಗ್ಗೆ ಗೊತ್ತಿರದಂತಹ ಒಂದು ವಿಚಾರವನ್ನು ಹೇಳಲು ಹೊರಟಿದ್ದೇವೆ. ಅದೇನೆಂದರೆ ಈ ಹಿಂದೆ ಪುಷ್ಪ ಚಿತ್ರಕ್ಕಾಗಿ ಐದು ದೊಡ್ಡ ಕಲಾವಿದರ ಬಳಿ ಬೇಡಿಕೆ ಇಡಲಾಗಿತ್ತು ಆದರೆ ಅವರು ಚಿತ್ರವನ್ನು ತಿರಸ್ಕರಿಸಿದ್ದರು. ಅದಾದ ನಂತರವೇ ಈಗ ನಟಿಸಿರುವ ಕಲಾವಿದರು ನಟಿಸಿರುವುದು. ಹಾಗಿದ್ದರೆ ಪುಷ್ಪ ಚಿತ್ರವನ್ನು ತಿರಸ್ಕರಿಸಿದ 5 ನಟ ಹಾಗೂ ನಟಿಯರು ಯಾರು ಎಂಬುದನ್ನು ತಿಳಿಯೋಣ ಬನ್ನಿ.

ಮಹೇಶ್ ಬಾಬು; ಪುಷ್ಪ ಚಿತ್ರದಲ್ಲಿ ನಾಯಕನಟನಾಗಿ ನಟಿಸಿರುವುದು ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ರವರು. ಆದರೆ ಈ ಚಿತ್ರವನ್ನು ಮೊದಲಿಗೆ ಮಹೇಶ್ ಬಾಬುರವರ ಬಳಿಗೆ ತೆಗೆದುಕೊಂಡು ಹೋಗಲಾಗಿತ್ತು. ಅವರು ಹಲವಾರು ಕಾರಣಗಳಿಂದಾಗಿ ಪುಷ್ಪ ಚಿತ್ರದ ಕಥೆಯನ್ನು ಒಪ್ಪದಿದ್ದ ಕಾರಣ ಅಲ್ಲು ಅರ್ಜುನ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಈಗ ನಿಮಗೆಲ್ಲ ತಿಳಿದಿರುವಂತೆ ಕೇವಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಉತ್ತರ ಭಾರತದಲ್ಲಿಯೂ ಕೂಡ ಪುಷ್ಪನ ಖದರ್ ಜೋರಾಗಿದೆ.

ಸಮಂತಾ; ಅರೆ ಇದೇನಪ್ಪಾ ಇವರು ಈಗಾಗಲೇ ಪುಷ್ಪ ಚಿತ್ರದಲ್ಲಿ ಐಟಂ ಸಾಂಗ್ನಲ್ಲಿ ಡ್ಯಾನ್ಸ್ ಮಾಡಿದ್ದಾರಲ್ಲ ಇನ್ನೇನು ಎಂಬುದಾಗಿ ನೀವು ಕೇಳಬಹುದು. ನಿಜವಾಗಿ ಹೇಳಬೇಕೆಂದರೆ ರಶ್ಮಿಕಾ ಮಂದಣ್ಣನ ಅವರಿಗಿಂತ ಮುಂಚೆ ಪುಷ್ಪಾ ಚಿತ್ರದಲ್ಲಿ ಶ್ರೀವಲ್ಲಿ ಅಂದರೆ ನಾಯಕ ನಟಿಯ ಪಾತ್ರಕ್ಕಾಗಿ ಸಮಂತ ರವರನ್ನು ಅಪ್ರೋಚ್ ಮಾಡಲಾಗಿತ್ತು. ಆದರೆ ಅವರು ನಾಯಕ ನಟಿಯ ಪಾತ್ರಕ್ಕೆ ಒಪ್ಪದ ಕಾರಣದಿಂದಾಗಿಯೇ ರಶ್ಮಿಕ ಮಂದಣ್ಣ ನವರಿಗೆ ಅವಕಾಶ ಒಲಿದುಬಂತು ಎಂದು ಹೇಳಲಾಗುತ್ತಿದೆ.

ದಿಶಾ ಪಟಾನಿ; ನಟಿ ಸಮಂತಾ ರವರು ಊ ಅಂಟವಾ ಸಾಂಗ್ ಗೆ ಮೈಚಳಿಬಿಟ್ಟು ಕುಣಿದಿರುವುದು ಹಾಗೂ ಆ ಹಾಡು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡು ಸೂಪರ್ ಹಿಟ್ ಆಗಿರುವುದು ಗೊತ್ತಿದೆ. ಆದರೆ ಈ ಐಟಂ ಡ್ಯಾನ್ಸ್ ನಲ್ಲಿ ಕುಣಿಯಲು ಮೊದಲು ಅವಕಾಶ ಹೋಗಿದ್ದು ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯಾಗಿರುವ ದಿಶಾ ಪಟಾನಿ ರವರಿಗೆ. ಅವರು ನಿರಾಕರಿಸಿದ ನಂತರ ಸಮಂತಾ ರವರು ಒಪ್ಪಿಕೊಂಡಿದ್ದು.

ನೋರಾ ಫತೇಹಿ; ಬಾಲಿವುಡ್ ಚಿತ್ರರಂಗದ ಬೆಸ್ಟ್ ಐಟಂ ಡ್ಯಾನ್ಸರ್ ಮಾಡುವುದು ಯಾರು ಎಂದು ಕೇಳಿದರೆ ಅಲ್ಲಿ ಕೇಳಿ ಬರುವ ಮೊದಲ ಹೆಸರು ನೋರಾ ಫತೇಹಿ. ದಿಶಾ ಪಟಾನಿ ರವರ ನಂತರ ಐಟಂ ಡ್ಯಾನ್ಸ್ ನಲ್ಲಿ ಕುಣಿಯಲು ನೋರಾ ರವರಿಗೂ ಕೂಡ ಆಫರ್ ಹೋಗಿತ್ತು. ಆದರೆ ಅವರು ಒಂದೊಳ್ಳೆ ಅವಕಾಶವನ್ನು ಮಿಸ್ ಮಾಡಿಕೊಂಡರು ಎಂದು ಹೇಳಬಹುದಾಗಿದೆ.

ವಿಜಯ್ ಸೇತುಪತಿ; ಪುಷ್ಪ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಲಯಾಳಂ ಚಿತ್ರರಂಗದ ಖ್ಯಾತ ನಟ ಆಗಿರುವ ಫಹಾದ್ ಫಾಸಿಲ್ ರವರು ನಿರ್ವಹಿಸಿರುವುದು ನೀವು ಸಿನಿಮಾ ನೋಡಿದವರಿಗೆ ತಿಳಿದಿರುತ್ತದೆ. ಆದರೆ ಈ ಅವಕಾಶ ಮೊದಲಿಗೆ ಹೋಗಿದ್ದು ತಮಿಳು ಚಿತ್ರರಂಗದ ಅತ್ಯದ್ಭುತ ನಟ ಆಗಿರುವ ವಿಜಯ್ ಸೇತುಪತಿ ರವರಿಗೆ. ಎಲ್ಲವೂ ಫೈನಲ್ ಆಗಿತ್ತು ಆದರೆ ಕೊನೆಯ ಕ್ಷಣದಲ್ಲಿ ಡೇಟ್ ಹೊಂದಾಣಿಕೆ ಮಾಡುವಲ್ಲಿ ವಿಫಲರಾಗಿ ವಿಜಯ್ ಸೇತುಪತಿ ರವರು ಚಿತ್ರದಿಂದ ಹೊರ ಬರುತ್ತಾರೆ. ಇವರೇ ಪುಷ್ಪ ಚಿತ್ರವನ್ನು ನಿರಾಕರಿಸಿದ ಅಥವಾ ಚಿತ್ರದಿಂದ ಹೊರ ಬಂದಂತಹ ಆ 5 ಕಲಾವಿದರು.

Get real time updates directly on you device, subscribe now.