ಆಸ್ತಿ ಪಡೆದುಕೊಂಡ ಮೇಲೆ ತಂದೆ ಎಂದು ಕೂಡ ನೋಡದೆ ಮನೆಯಿಂದ ಹೊರಹಾಕಿದ ಮಗ, ಆದರೆ ನಂತರ ನಡೆದ್ದದೇನು ಗೊತ್ತೇ?? ಹೀಗೆ ಆದರೆ ವೃದ್ದಾಶ್ರಮವೇ ಇರಲ್ಲ

ಆಸ್ತಿ ಪಡೆದುಕೊಂಡ ಮೇಲೆ ತಂದೆ ಎಂದು ಕೂಡ ನೋಡದೆ ಮನೆಯಿಂದ ಹೊರಹಾಕಿದ ಮಗ, ಆದರೆ ನಂತರ ನಡೆದ್ದದೇನು ಗೊತ್ತೇ?? ಹೀಗೆ ಆದರೆ ವೃದ್ದಾಶ್ರಮವೇ ಇರಲ್ಲ

ನಮಸ್ಕಾರ ಸ್ನೇಹಿತರೇ ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿಯರು ಮಕ್ಕಳನ್ನು ಚೆನ್ನಾಗಿ ಓದಿಸಿ ಕೆಲಸ ಸಿಗುವಂತೆ ಮಾಡಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವಂತೆ ಮಾಡಿರುತ್ತಾರೆ. ಆದರೆ ಮಕ್ಕಳು ತಮ್ಮ ಪೋಷಕರು ವೃದ್ಧರಾದ ನಂತರ ಅವರನ್ನು ಚೆನ್ನಾಗಿ ನೋಡಿಕೊಳ್ಳಲು ಅವರನ್ನು ಕೀಳಾಗಿ ನೋಡುತ್ತಾರೆ. ಇದೇ ತರಹದ ಘಟನೆಯ ಸಂಬಂಧಿತ ವಿಚಾರವೊಂದು ನಮ್ಮ ಕರ್ನಾಟಕ ರಾಜ್ಯದಲ್ಲಿ ನಡೆದಿದೆ. ಮುನಿಸ್ವಾಮಿ ಎನ್ನುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಿವೃತ್ತ ಪ್ರಾಂಶುಪಾಲರಾಗಿದ್ದಾರೆ. ಅವರಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದಾರೆ. ಇಬ್ಬರಿಗೂ ಕೂಡ ಚಿಕ್ಕವಯಸ್ಸಿನಿಂದಲೂ ಉತ್ತಮ ಮಟ್ಟದ ಶಿಕ್ಷಣ ಹಾಗೂ ಜೀವನವನ್ನು ನೀಡಿದ್ದಾರೆ.

ಇಷ್ಟು ಮಾತ್ರವಲ್ಲದೆ ಇಬ್ಬರಿಗೂ ಮದುವೆ ಮಾಡಿಸಿ ಆಸ್ತಿಯನ್ನು ಕೂಡ ಹಂಚಿ ಬಿಟ್ಟಿದ್ದಾರೆ. ಆದರೆ ಮಗನಾಗಿರುವ ಸುಭಾಷ್ ಹಾಗೂ ಸೊಸೆ ಮಂಜುಳಾ ರವರು ಮುನಿಸ್ವಾಮಿ ರವರಿಂದ ಆಸ್ತಿಯನ್ನು ಪಡೆದುಕೊಂಡ ಬೆನ್ನಲ್ಲೇ ಅವರನ್ನು ಮನೆಯಿಂದ ಹೊರ ಹಾಕಿದ್ದಾರೆ. ಮುನಿಸ್ವಾಮಿಯವರು ಈಗಾಗಲೇ ವಯೋಸಹಜ ಕಾಯಿಲೆ ಗಳಿಂದಾಗಿ ಬಳಲುತ್ತಿದ್ದಾರೆ. ಮೊಮ್ಮಕ್ಕಳ ಜೊತೆಗೆ ಆಟವಾಡಿಕೊಂಡಿರುತ್ತೇನೆ ಎಂಬುದಾಗಿ ಗೋಗರೆದರೂ ಕೂಡ ಮಗ ಹಾಗೂ ಸೊಸೆ ಇಬ್ಬರೂ ಅವರ ಮಾತನ್ನು ಕೇಳದೆ ಮನೆಯಿಂದ ಹೊರದಬ್ಬಿದ್ದಾರೆ. ಮುನಿಸ್ವಾಮಿ ರವರು ಇದರಿಂದಾಗಿ ಕಾನೂನು ಮೊರೆ ಹೋಗಿದ್ದು ಪಾಲಕರ ಪೋಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾನೂನು 2007ರ ಅಡಿಯಲ್ಲಿ ದೂರನ್ನು ದಾಖಲಿಸಿದ್ದಾರೆ.

ತಾನು ಕಷ್ಟಪಟ್ಟು ಕಟ್ಟಿಸಿರುವ ಮನೆಯನ್ನು ನನ್ನ ಸ್ವಾಧೀನಕ್ಕೆ ನೀಡಬೇಕು ಎಂಬುದಾಗಿ ಕೋರಿಕೊಂಡಿದ್ದಾರೆ. ನ್ಯಾಯಾಲಯ ಮುನಿಸ್ವಾಮಿ ಅವರ ಪರವಾಗಿ ತೀರ್ಪು ನೀಡಿದ್ದು ಮಗ ಹಾಗೂ ಸೊಸೆಯನ್ನು ಮನೆ ಬಿಟ್ಟು ಹೋಗುವಂತೆ ಆದೇಶ ನೀಡಿತ್ತು. ಆದರೆ ಲಾಕ್ಡೌನ್ ಇದ್ದ ಕಾರಣದಿಂದಾಗಿ ನಾನಾ ಸಬೂಬುಗಳನ್ನು ನೀಡಿ ಮನೆ ಖಾಲಿ ಮಾಡಿರಲಿಲ್ಲ. ಇದಾದ ನಂತರ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಇದರ ಕುರಿತಂತೆ ಕೂಡ ದೂರನ್ನು ನೀಡುತ್ತಾರೆ. ಈಗ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಆದೇಶದ ಮೇರೆಗೆ ಮನೆಯನ್ನು ಖಾಲಿ ಮಾಡಿಸಿ ಮುನಿಸ್ವಾಮಿ ಅವರಿಗೆ ಪೊಲೀಸರು ನೀಡಿದ್ದಾರೆ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ಈಗ ಬಹುಪರಾಕ್ ಎನ್ನುತ್ತಿದ್ದಾರೆ. ಉಪಯೋಗಿಸಿಕೊಂಡ ಮೇಲೆ ವಸ್ತುವಿನಂತೆ ತಮ್ಮ ಸ್ವಂತ ತಂದೆಯನ್ನು ಮನೆಯಿಂದ ಹೊರಗೆ ದಬ್ಬಿದ್ದಕ್ಕೆ ಆ ಮಗನಿಗೆ ಸರಿಯಾದ ಶಿಕ್ಷೆಯಾಗಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.