ಕುಲದೀಪ್ ಯಾದವ್ ಹಾಗೂ ಚಾಹಲ್ ಜೋಡಿಯ ಬಗ್ಗೆ ಷಾಕಿಂಗ್ ಹೇಳಿಕೆ ನೀಡಿದ ದಿನೇಶ್ ಕಾರ್ತಿಕ್, ತರಾಟೆಗೆ ತೆಗೆದುಕೊಂಡ ನೆಟ್ಟಿಗರು. ಯಾಕೆ ಗೊತ್ತೇ??

ಕುಲದೀಪ್ ಯಾದವ್ ಹಾಗೂ ಚಾಹಲ್ ಜೋಡಿಯ ಬಗ್ಗೆ ಷಾಕಿಂಗ್ ಹೇಳಿಕೆ ನೀಡಿದ ದಿನೇಶ್ ಕಾರ್ತಿಕ್, ತರಾಟೆಗೆ ತೆಗೆದುಕೊಂಡ ನೆಟ್ಟಿಗರು. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೇಟ್ ಇತ್ತೀಚಿಗೆ ಕಂಡ ಶ್ರೇಷ್ಠ ಸ್ಪಿನ್ನರ್ ಜೋಡಿಗಳೆಂದರೇ ಅದು ಕುಲ್-ಚಾ ಜೋಡಿ. ಚೈನಾಮನ್ ಸ್ಪಿನ್ನರ್ ಆದ ಕುಲದೀಪ್ ಯಾದವ್ ಹಾಗೂ ಲೆಗ್ ಸ್ಪಿನ್ನರ್ ಯುಜವೇಂದ್ರ ಚಾಹಲ್. ಭಾರತೀಯ ಕ್ರಿಕೇಟ್ ನಲ್ಲಿ 2019 ರ ತನಕ ಏಕದಿನ ಕ್ರಿಕೇಟ್ ಹಾಗೂ ಟಿ 20 ಹೆಚ್ಚು ಗೆಲುವಿಗೆ ಕಾರಣರಾದವರು. ಆದರೇ 2019 ರ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ದದ ಪಂದ್ಯದ ನಂತರ ಈ ಜೋಡಿ ಬದಲಾಯಿತು. ಈ ಜೋಡಿ ಬಂದ ನಂತರ ವೈಟ್ ಬಾಲ್ ಕ್ರಿಕೇಟ್ ನಲ್ಲಿ ರವೀಂದ್ರ ಜಡೇಜಾ ಹಾಗೂ ಆರ್.ಅಶ್ವಿನ್ ಗೆ ಅವಕಾಶ ಸಿಕ್ಕಿರಲಿಲ್ಲ.

ಈಗ ಈ ಕುಲ್-ಚಾ ಜೋಡಿ ಬಗ್ಗೆ ಭಾರತದ ವಿಕೇಟ್ ಕೀಪರ್ ಬ್ಯಾಟ್ಸಮನ್ ದಿನೇಶ್ ಕಾರ್ತೀಕ್ ಶಾಕಿಂಗ್ ವಿಷಯವೊಂದನ್ನು ಹೇಳಿದ್ದಾರೆ. 2017 ರಲ್ಲಿ ಭಾರತ ತಂಡದ ವಿಕೇಟ್ ಕೀಪರ್ ಎಂ.ಎಸ್.ಧೋನಿ ಎಲ್ಲಾ ಮಾದರಿ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ವಿರಾಟ್ ಕೊಹ್ಲಿ ಭಾರತ ತಂಡದ ನಾಯಕರಾದರೂ , ಕುಲದೀಪ್ ಯಾದವ್ ಮತ್ತು ಚಾಹಲ್ ಧೋನಿಯವರ ಮಾತನ್ನೇ ಕೇಳುತ್ತಿದ್ದರಂತೆ. ವಿಕೇಟ್ ಹಿಂದುಗಡೆ ನಿಂತು ಧೋನಿ ನೀಡುತ್ತಿದ್ದ ಸಲಹೆ ಮೇರೆಗೆ ಬೌಲಿಂಗ್ ಮಾಡುತ್ತಿದ್ದ ಕುಲ್-ಚಾ ಜೋಡಿ ಯಶಸ್ಸು ಕಾಣುತ್ತಿತ್ತು.

ಕೊಹ್ಲಿ ಕೇವಲ ನಾಮಕಾವಸ್ಥೆಗೆ ನಾಯಕರಾಗಿದ್ದರೂ, ಸ್ವತಃ ಧೋನಿಯವರೇ, ಇವರಿಬ್ಬರ ಬೌಲಿಂಗ್ ನಲ್ಲಿ ಫೀಲ್ಡಿಂಗ್ ಪ್ಲೇಸ್ ಮೆಂಟ್ ಮಾಡಿಸುತ್ತಿದ್ದರು. ಡ್ರೆಸ್ಸಿಂಗ್ ರೂಮ್ ನಲ್ಲಿಯೂ ಸಹ ಇವರಿಬ್ಬರೂ ಧೋನಿಯವರ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದರು ಎಂದು ಹೇಳಿದರು. ಅದಲ್ಲದೇ ಧೋನಿ ನಿವೃತ್ತಿಯಾದ ಬಳಿಕ ಇವರಿಬ್ಬರಿಗೆ ಸೂಕ್ತ ಬೆಂಬಲ ವಿಕೇಟ್ ಹಿಂದಕ್ಕೆ ಸಿಗಲಿಲ್ಲ. ಹಾಗಾಗಿ ಇವರಿಬ್ಬರ ಬೌಲಿಂಗ್ ಸಪ್ಪೆಯಾಗತೊಡಗಿತು, ಎಂದು ಹೇಳಿದ್ದಾರೆ, ಇದಕ್ಕೆ ನೆಟ್ಟಿಗರು ಇದರಲ್ಲಿ ಯಾರದ್ದು ತಪ್ಪಿಲ್ಲ, ಜಡೇಜಾ ಅಶ್ವಿನಿ ಗೆ ಹೇಗೆ ಸಪೋರ್ಟ್ ಸಿಗುತ್ತದೆಯೋ ಇವರಿಗೂ ಸಿಗುತ್ತದೆ, ವಿಕೆಟ್ ಪಡೆಯದೇ ಇರುವುದು ಇವರ ತಪ್ಪು ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಯುಜವೇಂದ್ರ ಚಾಹಲ್ ತಂಡದಲ್ಲಿ ಆಗಾಗ ಸ್ಥಾನ ಪಡೆಯುತ್ತಿದ್ದರೇ, ಕುಲದೀಪ್ ಯಾದವ್ ತಂಡದಲ್ಲಿ ಸ್ಥಾನ ಪಡೆಯುವುದೇ ಕನಸಿನ ಮಾತಾಗಿದೆ. ಈಗ ಭಾರತ ಏಕದಿನ ಮತ್ತು ಟಿ 20 ಪಂದ್ಯಗಳಲ್ಲಿ ಸೋಲುತ್ತಿರುವ ಕಾರಣ ಮತ್ತೆ ಸ್ಪಿನ್ ಜೋಡಿಯಾದ ಕುಲ್ ದೀಪ್ ಮತ್ತು ಯುಜವೆಂದ್ರರನ್ನ ವಾಪಸ್ ಕರೆ ತನ್ನಿ ಎಂಬ ಅಭಿಪ್ರಾಯವ್ಯಕ್ತವಾಗುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.