ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಹರಾಜಿಗಿಂತ ಮುಂಚೆಯೇ ತಮ್ಮ ಬೆಲೆ ಕಳೆದುಕೊಂಡ ಟಾಪ್ 5 ಭಾರತದ ಆಟಗಾರರು ಯಾರು ಗೊತ್ತಾ?? ಈ ಬಾರಿ ಕಹಿ ಸುದ್ದಿ ಖಚಿತವೇ??

23

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ ಆಟಗಾರರ ಮೆಗಾ ಹರಾಜು ಫೆಬ್ರವರಿ 12 ಹಾಗೂ 13 ರಂದು ನಡೆಯಲಿದೆ. ಈಗಾಗಲೇ ಆಟಗಾರರ ಮೂಲ ಬೆಲೆಯ ಪಟ್ಟಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ. 2 ಕೋಟಿ, 1.5 ಕೋಟಿ, 1 ಕೋಟಿ, 50 ಲಕ್ಷ, ಹಾಗೂ 20 ಲಕ್ಷ ಮೂಲ ಬೆಲೆ ಎಂಬ ಐದು ವಿಭಾಗಗಳನ್ನು ವಿಭಾಗಿಸಿದೆ. ಆದರೇ ಆಟಗಾರರ ಮೂಲ ಬೆಲೆ ಹೆಚ್ಚಿದ್ದು, ಕೆಲವೊಮ್ಮೆ ಅವರ ಪ್ರದರ್ಶನ ನೀರಿಕ್ಷಿತ ಮಟ್ಟದಲ್ಲಿ ಇರದಿದ್ದಾಗ, ಅವರು ಉತ್ತಮ ಬೆಲೆಗೆ ಹರಾಜಾಗುವುದಿಲ್ಲ. ಸದ್ಯದ ಪ್ರದರ್ಶನ ನೋಡಿದರೇ ಕೆಲವು ಆಟಗಾರರು ಹರಾಜಿನಲ್ಲಿ ಕಡಿಮೆ ಮೊತ್ತಗಳಿಸಬಹುದು. ಅಂತಹ ಭಾರತದ ಟಾಪ್ -5 ಆಟಗಾರರು ಯಾರು ಎಂಬುದನ್ನ ತಿಳಿಯೋಣ ಬನ್ನಿ.

ಟಾಪ್ 1 : ಶ್ರೇಯಸ್ ಅಯ್ಯರ್ – ಲಕ್ನೋ ತಂಡದ ನಾಯಕರಾಗುತ್ತಾರೆಂದು ಹೇಳಿದ ಶ್ರೇಯಸ್ ಅಯ್ಯರ್ ಕೊನೆ ಹಂತದಲ್ಲಿ ದೂರ ಸರಿದರು. ಬಿಸಿಸಿಐ ಅವರಿಗೆ 2 ಕೋಟಿ ರೂಪಾಯಿ ಮೂಲಬೆಲೆ ನಿಗದಿ ಪಡಿಸಿದೆ. ಆದರೇ ಶ್ರೇಯಸ್ ಸೌತ್ ಆಫ್ರಿಕಾ ವಿರುದ್ದ ಆಡಿದ ಎರಡು ಪಂದ್ಯಗಳಲ್ಲಿ ವಿಫಲರಾಗಿ ಫಾರ್ಮ್ ಕಳೆದುಕೊಂಡಿದ್ದಾರೆ. ಹಾಗಾಗಿ ಶ್ರೇಯಸ್ ಹೆಚ್ಚಿನ ಬೆಲೆಗೆ ಹರಾಜಾಗುವುದು ಅನುಮಾನವಾಗಿದೆ.

ಟಾಪ್ 2 : ಆರ್‌.ಅಶ್ವಿನ್ : ಆಫ್ ಸ್ಪಿನ್ನರ್ ಆರ್.ಅಶ್ವಿನ್ ಗೂ ಸಹ 2 ಕೋಟಿ ಮೂಲ ಬೆಲೆ ನಿಗದಿ ಪಡಿಸಿದೆ. ಆದರೇ ಅಶ್ವಿನ್ ಟಿ 20 ಕ್ರಿಕೇಟ್ ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹಾಗಾಗಿ ಅಶ್ವಿನ್ ಗೆ ಫ್ರಾಂಚೈಸಿಗಳು ಹಣ ಹಾಕುವುದು ಕಡಿಮೆಯಾಡಬಹುದು.

ಟಾಪ್ 3 : ಭುವನೇಶ್ವರ್ ಕುಮಾರ್ – ಭುವಿ ಸಹ 2 ಕೋಟಿ ಮೂಲಬೆಲೆ ಹೊಂದಿದ್ದಾರೆ. ಆದರೇ ಮೊದಲು ಸ್ವಿಂಗ್ ಕಿಂಗ್ ಆಗಿದ್ದ ಭುವಿ ಈಗ ಸಂಪೂರ್ಣ ಲಯ ಕಳೆದುಕೊಂಡಿದ್ದಾರೆ. ಹಾಗಾಗಿ ಇವರು ಮೂಲಬೆಲೆಗೆ ಹರಾಜಾಗಬಹುದು.

ಟಾಪ್ 4 : ಇಶಾಂತ್ ಶರ್ಮಾ – ಭಾರತದ ಮತ್ತೊಬ್ಬ ವೇಗಿ ಇಶಾಂತ್ 1.5 ಕೋಟಿ ಮೂಲಬೆಲೆ ಹೊಂದಿದ್ದಾರೆ. ಸದ್ಯ ಇವರು ಫಿಟ್ ನೆಸ್ ಕೊರತೆಯಿಂದ ಬಳಲುತ್ತಿರುವ ಇವರನ್ನು ಫ್ರಾಂಚೈಸಿಗಳು ಖರೀದಿಸಲು ಹಿಂದೆ ಬೀಳಬಹುದು.

ಟಾಪ್ 5 : ಅಜಿಂಕ್ಯಾ ರಹಾನೆ – ಭಾರತದ ಉಪನಾಯಕರಾಗಿದ್ದ ರಹಾನೆ 1 ಕೋಟಿ ರೂ ಮೂಲಬೆಲೆ ಹೊಂದಿದ್ದಾರೆ. ಆದರೇ ಸದ್ಯ ಸಂಪೂರ್ಣ ಫಾರ್ಮ್ ಕಳೆದುಕೊಂಡಿರುವ ಇವರು ಈ ಭಾರಿಯ ಹರಾಜಿನಲ್ಲಿ ಸೇಲಾಗುವುದು ಅನುಮಾನ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿಷ

Get real time updates directly on you device, subscribe now.