ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೆ.ಎಲ್.ರಾಹುಲ್ ರವರಿಗೆ ನಾಯಕತ್ವ ನೀಡಬೇಡಿ ಎಂದು ಷಾಕಿಂಗ್ ಹೇಳಿಕೆ ನೀಡಿದ ಗೌತಮ್ ಗಂಭೀರ್. ಕಾರಣಗಳ ಸಮೇತ ಹೇಳಿದ್ದೇನು ಗೊತ್ತೇ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೇಟ್ ತಂಡದಲ್ಲಿ ಈಗ ನಾಯಕತ್ವ ಬದಲಾವಣೆಯದ್ದೇ ಒಂದು ದೊಡ್ಡ ಚರ್ಚೆ ನಡೆದಿದೆ. ಹೌದು ಟೆಸ್ಟ್ ಕ್ರಿಕೇಟ್ ತಂಡದ ನಾಯಕನಾಗಿ ಕೊಹ್ಲಿ ರಾಜೀನಾಮೆ ಘೋಷಿಸಿದ ನಂತರ ಆ ಸ್ಥಾನಕ್ಕೆ ಯಾರು ಸೂಕ್ತ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಸದ್ಯ ಏಕದಿನ ಹಾಗೂ ಟಿ 20 ಕ್ರಿಕೇಟ್ ತಂಡಕ್ಕೆ ನಾಯಕರಾಗಿರುವ ರೋಹಿತ್ ಶರ್ಮಾರವರನ್ನೇ ಟೆಸ್ಟ್ ತಂಡಕ್ಕೂ ನಾಯಕರನ್ನಾಗಿಸಬಹುದಾ ಎಂಬ ಪ್ರಶ್ನೆಗಳ ನಡುವೆ ಎಲ್ಲರ ಒಲವು ಕೆ.ಎಲ್.ರಾಹುಲ್ ಮೇಲೆ ಇದೆ.

ಸದ್ಯ ರೋಹಿತ್ ಅನುಪಸ್ಥಿತಿಯ ನಡುವೆ ರಾಹುಲ್ ದಕ್ಷಿಣ ಆಫ್ರಿಕಾದ ವಿರುದ್ದ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೇ ಭಾರತ ತಂಡದ ಮಾಜಿ ಕ್ರಿಕೇಟಿಗ ಗೌತಮ್ ಗಂಭೀರ್ ಮಾತ್ರ ಯಾವುದೇ ಕಾರಣಕ್ಕೂ ಟೆಸ್ಟ್ ಕ್ರಿಕೇಟ್ ನಾಯಕತ್ವವನ್ನು ಕೆ.ಎಲ್.ರಾಹುಲ್ ಗೆ ನೀಡಬೇಡಿ ಎಂದು ಹೇಳಿ ಅದಕ್ಕೆ ಸೂಕ್ತ ಕಾರಣ ಸಹ ನೀಡಿದ್ದಾರೆ. ಕ್ರಿಕೇಟ್ ನ ಎಲ್ಲಾ ಮಾದರಿಗಳಿಗೂ ರೋಹಿತ್ ಶರ್ಮಾರನ್ನೇ ನಾಯಕನನ್ನಾಗಿ ಮಾಡಿ, ಕೆ.ಎಲ್.ರಾಹುಲ್ ರನ್ನ ಉಪನಾಯಕನನ್ನಾಗಿ ಮಾಡಿ. ಏಕೆಂದರೇ ಭಾರತ ಈ ವರ್ಷಾಂತ್ಯ ಹಾಗೂ ಮುಂದಿನ ವರ್ಷದಲ್ಲಿ ಮಹತ್ವದ ಐಸಿಸಿ ಟೂರ್ನಿಗಳನ್ನು ಆಡಲಿದೆ.

ಈ ಸಮಯದಲ್ಲಿ ನಾಯಕತ್ವ ವಿಭಜನೆಯಾದರೇ ತಂಡದಲ್ಲಿ ಸಮನ್ವಯತೆ ಕಡಿಮೆಯಾಗುತ್ತದೆ. ಇದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಅದಲ್ಲದೇ ಭಾರತದ ಕ್ರಿಕೇಟ್ ನಲ್ಲಿ ನಾಯಕತ್ವ ಹಂಚಿಕೆ ಎಂದಿಗೂ ವರ್ಕೌಟ್ ಆಗಿಲ್ಲ. ಹಾಗಾಗಿ ನನ್ನ ಪ್ರಕಾರ ತೆರವಾದ ಟೆಸ್ಟ್ ತಂಡದ ನಾಯಕತ್ವವನ್ನು ಯಾವುದೇ ಕಾರಣಕ್ಕೂ ಕೆ.ಎಲ್.ರಾಹುಲ್ ಗೆ ನೀಡಬಾರದು. ಬದಲಾಗಿ ರೋಹಿತ್ ನಾಯಕನನ್ನಾಗಿ ನೇಮಿಸಿ, ಕೆ.ಎಲ್ ಗೆ ಉಪನಾಯಕನ ಪಟ್ಟ ನೀಡಬೇಕು ಎಂದು ಹೇಳಿದ್ದಾರೆ. ಆದರೇ ಬಿಸಿಸಿಐ ಮೂಲಗಳ ಪ್ರಕಾರ ದಕ್ಷಿಣ ಆಫ್ರಿಕಾ ವಿರುದ್ದ ಏಕದಿನ ಸರಣಿ ಮುಗಿದ ನಂತರ ಟೆಸ್ಟ್ ಕ್ರಿಕೇಟ್ ನಾಯಕನನ್ನಾಗಿ ಕೆ.ಎಲ್.ರಾಹುಲ್ ರನ್ನ ಘೋಷಿಸುವ ಸಾಧ್ಯತೆ ದಟ್ಟವಾಗಿದೆ. ಮುಂಬರುವ ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ರಾಹುಲ್ ಮುನ್ನಡೆಸುವುದು ಬಹುತೇಖ ಖಚಿತವಾಗಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.