ಗೃಹಿಣಿಯರಿಗೆ ಮತ್ತೊಂದು ಸಿಹಿ ಸುದ್ದಿ, ಅಡುಗೆ ಎಣ್ಣೆಯಲ್ಲಿ ಬಾರಿ ಇಳಿಕೆ. ಒಂದು ಲೀಟರ್ ಗೆ ಎಷ್ಟು ಕಡಿಮೆ ಗೊತ್ತೇ??

ಗೃಹಿಣಿಯರಿಗೆ ಮತ್ತೊಂದು ಸಿಹಿ ಸುದ್ದಿ, ಅಡುಗೆ ಎಣ್ಣೆಯಲ್ಲಿ ಬಾರಿ ಇಳಿಕೆ. ಒಂದು ಲೀಟರ್ ಗೆ ಎಷ್ಟು ಕಡಿಮೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಮಹಾಮಾರಿಯಿಂದಾಗಿ ಇತ್ತೀಚಿಗೆ ಜನಜೀವನ ಎನ್ನುವುದು ಸಾಕಷ್ಟು ಕಷ್ಟಕರವಾಗಿ ಬಿಟ್ಟಿದೆಯೆಂದರೆ ಖಂಡಿತವಾಗಿ ತಪ್ಪಾಗಲಾರದು. ಒಂದಾದಮೇಲೊಂದರಂತೆ ಬೆಲೆ ಏರಿಕೆ ಇತ್ತಕಡೆ ಜನರಿಗೆ ಲಾಕ್ ಡೌನ್ ಕಾರಣದಿಂದಾಗಿ ಸರಿಯಾಗಿ ಕೆಲಸ ಕೂಡ ಇಲ್ಲ. ಈ ಬೆಲೆ ಏರಿಕೆ ಎಂದು ಕಷ್ಟಪಡುತ್ತಿದ್ದ ಅವರಿಗೆ ಈಗ ಒಂದು ನಿರಾಳದ ನಿಟ್ಟುಸಿರನ್ನು ಬಿಡುವಂತಹ ಸಮಯ ಬಂದಿದೆ. ಹೌದು ಗೆಳೆಯರೇ ಎಲ್ಲರಿಗೂ ತಿಳಿದಿರುವಂತೆ ಅಡುಗೆ ಮಾಡಲು ಪ್ರಮುಖವಾಗಿ ಎಣ್ಣೆಯನ್ನು ನಾವು ಬಳಸುತ್ತೇವೆ.

ಅಡುಗೆ ಎಣ್ಣೆ ಬೆಲೆ ಇತ್ತೀಚಿಗೆ ದುಬಾರಿಯಾಗಿರುವುದು ಕೂಡ ನಿಮಗೆಲ್ಲ ತಿಳಿದಿರುವ ವಿಚಾರವಾಗಿದೆ. ಆದರೆ ಈಗ ಜನರಿಗೆ ಸರ್ಕಾರ ಖುಷಿಯ ವಿಚಾರವೊಂದನ್ನು ನೀಡಿದೆ. ಅದೇನೆಂದರೆ ಅಡುಗೆ ಎಣ್ಣೆ ಬೆಲೆಯನ್ನು ಸರ್ಕಾರ ಗಣನೀಯವಾಗಿ ಕಡಿಮೆ ಮಾಡಿದೆ. ಹೀಗಾಗಿ ವರ್ಷದ ಮೊದಲ ತಿಂಗಳಲ್ಲೇ ನಾಗರಿಕರಿಗೆ ಸಂತೋಷದ ಸುದ್ದಿಯನ್ನು ನೀಡಿದೆ. ಈ ಕುರಿತಂತೆ ಸ್ವತಃ ತೈಲ ಉತ್ಪಾದನೆ ಹಾಗೂ ಸರಬರಾಜು ಸಂಸ್ಥೆಯೇ ಅಧಿಕೃತವಾಗಿ ಹೇಳಿಕೊಂಡಿದೆ. ಅಡುಗೆ ಎಣ್ಣೆಯನ್ನು ಉತ್ಪಾದಿಸುವ ಹಾಗೂ ಸರಬರಾಜು ಮಾಡುವ ನಮ್ಮ ಪ್ರಮುಖ ಸದಸ್ಯರು ಎಂ ಆರ್ ಪಿ ಯನ್ನು ಕಡಿಮೆ ಮಾಡಿದ್ದಾರೆ.

ಅಡುಗೆ ಎಣ್ಣೆಗಳ ಮೇಲಿನ ಆಮದು ಟ್ಯಾಕ್ಸ್ ಅನ್ನು ಕೇಂದ್ರ ಸರ್ಕಾರ 17.5 ರಿಂದ 12.5ಕ್ಕೆ ತಿಳಿಸಿರುವುದರಿಂದ ಆಗಿ ಅಡುಗೆ ಎಣ್ಣೆಯ ಬೆಲೆ ಕಡಿಮೆಯಾಗಿದೆ ಎಂದು ಹೇಳಬಹುದಾಗಿದೆ. ಹಾಗಿದ್ದರೆ ಎಷ್ಟು ಕಡಿಮೆ ಮಾಡಿದ್ದಾರೆ ಎಂಬುದನ್ನು ಕೂಡ ತಿಳಿಯೋಣ ಬನ್ನಿ. ಅಡುಗೆ ತೈಲಗಳ ಉತ್ಪಾದನೆ ಹಾಗೂ ಸರಬರಾಜು ಆಯೋಗದ ಅನ್ವಯ ಪ್ರಮುಖ ಕಂಪನಿಗಳಾದ ಅದಾನಿ ವಿಲ್ಮರ್ ಪ್ಲೇವರ್ಡ್ ಸೋಯಾ ಹಿಮಾಮಿ ಜಮಿನಿ ಕೋಪ್ಕೋ ಗೋಕುಲ್ ಅಗ್ರೋ ಗಳಂತಹ ಪ್ರಮುಖ ಕಂಪನಿಗಳು ಅಡುಗೆ ತೈಲದ ಬೆಲೆಯಲ್ಲಿ ಶೇಕಡ ಹತ್ತರಿಂದ ಹದಿನೈದು ಪ್ರತಿಶತದಷ್ಟು ಬೆಲೆಯನ್ನು ಕಡಿಮೆ ಮಾಡಿದ್ದಾರೆ. ಅಂದರೆ ಪ್ರತಿ ಲೀಟರ್ ಎಣ್ಣೆಗೆ ಕಡಿಮೆಯೆಂದರೂ 15 ರಿಂದ 20 ರೂಪಾಯಿ ಕಡಿಮೆಯಾಗಿದೆ. ಹೀಗಾಗಿ ಗ್ರಾಹಕರಿಗೆ ಹಿಂದಿಗಿಂತ ಕಡಿಮೆ ಬೆಲೆಯಲ್ಲಿ ಅಡುಗೆ ಎಣ್ಣೆ ದೊರೆಯಲಿದೆ.