7000 ಕೋಟಿ ಸಾಲ ಮಾಡಿ, ಸೋತಿದ್ದೇನೆ ಎಂದು ಜೀವ ಕಳೆದುಕೊಂಡಿದ್ದ ಸಿದ್ದಾರ್ಥ್ ಸರ್ ಪತ್ನಿ ಈಗ ಕಂಪನಿ ಯನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ ಗೊತ್ತೇ??

7000 ಕೋಟಿ ಸಾಲ ಮಾಡಿ, ಸೋತಿದ್ದೇನೆ ಎಂದು ಜೀವ ಕಳೆದುಕೊಂಡಿದ್ದ ಸಿದ್ದಾರ್ಥ್ ಸರ್ ಪತ್ನಿ ಈಗ ಕಂಪನಿ ಯನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ 2019 ರಲ್ಲಿ ಒಂದು ದೊಡ್ಡ ಶಾಕಿಂಗ್ ಸುದ್ದಿ ಎಲ್ಲರಿಗೂ ಕೂಡ ಕೇಳಿಬಂದಿತ್ತು. ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ಕೇಫೆ ಕಾಫೀ ಡೇ ಮಾಲೀಕರಾಗಿರುವ ಸಿದ್ಧಾರ್ಥ್ ಹೆಗ್ಡೆ ರವರ ಮರಣದ ವಿಚಾರದ ಕುರಿತಂತೆ. ಕೆಫೆ ಕಾಫಿ ಡೇ ಮೂಲಕ ಪ್ರತಿಯೊಬ್ಬ ಕರ್ನಾಟಕದ ನಾಗರಿಕನು ಕೂಡ ಹೆಮ್ಮೆಪಡುವಂತಹ ಕೆಲಸ ಮಾಡಿದ್ದರು ಸಿದ್ದಾರ್ಥ್ ಹೆಗ್ಡೆ ರವರು. ಆದರೆ ಇಷ್ಟೊಂದು ಯಶಸ್ವಿಯಾದ ಮೇಲೂ ಕೂಡ ಅವರು ಮಾಡಿರುವ ಸಾಲದ ಹೊರೆಯನ್ನುವುದು ಅವರನ್ನು ಈ ಲೋಕ ಬಿಟ್ಟು ಹೋಗುವಂತೆ ಮಾಡಿತು.

ಹೌದು ಸಿದ್ಧಾರ್ಥ್ ಹೆಗ್ಡೆಯವರು ಬರೋಬ್ಬರಿ 7000 ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಕೆಫೆ ಕಾಫಿ ಡೇ ಭಾರತದ ಅತಿದೊಡ್ಡ ಕಾಫಿಶಾಪ್ ಆಗಿದ್ದರೂ ಕೂಡ ಅದರಿಂದ ಈ ಸಾಲವನ್ನು ತೀರಿಸುವ ಧೈರ್ಯವನ್ನು ಕೊನೆಯ ಕ್ಷಣದಲ್ಲೂ ಕೂಡ ಸಿದ್ದಾರ್ಥ ಹೆಗಡೆಯವರು ಮಾಡಿಕೊಳ್ಳಲಿಲ್ಲ. 2019 ರಂದು ನೇತ್ರಾವತಿ ನದಿಗೆ ಹಾರಿ ತಮ್ಮ ಜೀವನವನ್ನು ಮುಗಿಸಿಕೊಂಡಿದ್ದರು. ಸಿದ್ದಾರ್ಥ ರವರ ನಂತರ ಕಂಪನಿಯ ಸಿಇಒ ಆಗಿ ಜವಾಬ್ದಾರಿ ವಹಿಸಿಕೊಂಡವರು ಅವರ ಪತ್ನಿ ಮಾಳವಿಕಾ ಹೆಗಡೆ. ಮಾಳವಿಕ ಹೆಗ್ಡೆಯವರ ಬಳಿ ಗಂಡನ ಮರಣದ ನಂತರ ಉಳಿದುಕೊಂಡಿದ್ದು 7000 ಕೋಟಿ ಸಾಲದ ಹೊರೆ. ಆದರೂ ಕೂಡ ಮಾಳವಿಕಾ ಹೆಗ್ಡೆಯವರು ಎದೆಗುಂದಲಿಲ್ಲ. ಎರಡು ವರ್ಷಗಳ ನಂತರ ಮಾಳವಿಕಾ ರವರು ಮಾಡಿರುವ ಸಾಧನೆಯನ್ನು ನೋಡಿ ಎಲ್ಲರೂ ಕೂಡ ಈಗ ಕಣ್ಣು ಬಾಯಿ ಬಿಡುತ್ತಿದ್ದರು. ಹಾಗಿದ್ದರೆ ಅವರು ಮಾಡಿರುವ ಸಾಧನೆ ಏನು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ ಬನ್ನಿ.

ಹೌದು ಸ್ನೇಹಿತರೆ ಸಿದ್ದಾರ್ಥ್ ರವರು ಬಿಟ್ಟುಹೋಗಿದ್ದ 7000 ಕೋಟಿ ಸಾಲದ ಹೊರೆಯಲ್ಲಿ ಕೇವಲ ಎರಡೇ ವರ್ಷದಲ್ಲಿ 5500 ಕೋಟಿ ರೂಪಾಯಿ ಸಾಲವನ್ನು ಕಂಪನಿ ಅಧಿಕಾರವನ್ನು ಸ್ವೀಕರಿಸಿದ ನಂತರ ಮಾಳವಿಕಾ ರವರು ತಿಳಿಸಿದ್ದಾರೆ. ಕೇವಲ ಎರಡು ವರ್ಷದ ಅವಧಿಯಲ್ಲಿ ಇಷ್ಟೊಂದು ಸಾಲವನ್ನು ತೀರಿಸಿದ ಎದೆಗಾರಿಕೆ ಮಾಳವಿಕಾ ರವರಿಗೆ ಸಲ್ಲುತ್ತದೆ. ಈ ವಿಚಾರವನ್ನು ನೋಡಿದಾಗ ಸಿದ್ಧಾರ್ಥ ರವರು ಸ್ವಲ್ಪಮಟ್ಟಿಗೆ ತಾಳ್ಮೆ ತೆಗೆದುಕೊಂಡಿದ್ದರೆ ಇಂದು ಅವರು ತಮ್ಮ ಹೆಂಡತಿ ಯಶಸ್ಸನ್ನು ತಮ್ಮಲ್ಲಿಯೇ ಕಾಣುತ್ತಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಅದೇನೇ ಇರಲಿ ಮಾಳವಿಕಾ ರವರಂತಹ ಸ್ವಾವಲಂಬಿ ಹಾಗೂ ದಿಟ್ಟ ನಡೆಯ ಹೆಣ್ಣುಮಕ್ಕಳು ನಮ್ಮ ಸಮಾಜದಲ್ಲಿ ಹೆಚ್ಚಾಗಬೇಕಾಗಿರುವುದು ಅನಿವಾರ್ಯವಾಗಿದೆ. ಹಾಗೂ ಇವರ ಜೀವನ ಮತ್ತಷ್ಟು ಯಶಸ್ಸು ಕಾಣಲಿ ಎಂದು ನಮ್ಮ ತಂಡದ ಪರವಾಗಿ ಹಾರೈಸುತ್ತೇವೆ.