ಸೌತ್ ಆಫ್ರಿಕಾದ ಮ್ಯಾಚ್ ವಿನ್ನರ್ ಆಟಗಾರನನ್ನ ಕನ್ನಡಿಗನಿಗೆ ಹೋಲಿಸಿದ ರವಿಶಾಸ್ತ್ರಿ, ಯಾಕೆ ಗೊತ್ತೇ??

ಸೌತ್ ಆಫ್ರಿಕಾದ ಮ್ಯಾಚ್ ವಿನ್ನರ್ ಆಟಗಾರನನ್ನ ಕನ್ನಡಿಗನಿಗೆ ಹೋಲಿಸಿದ ರವಿಶಾಸ್ತ್ರಿ, ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿರ್ಣಾಯಕ ಹಾಗೂ ಅಂತಿಮ ಮೂರನೇ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತವನ್ನ ಮಣಿಸಲು ಯಶಸ್ವಿಯಾಯಿತು. 213 ರನ್ ಗಳ ಸವಾಲು ಹೊಂದಿದ್ದ ದಕ್ಷಿಣ ಆಫ್ರಿಕಾ ಕೇವಲ ಮೂರು ವಿಕೇಟ್ ಕಳೆದುಕೊಂಡು ಈ ಗುರಿಯನ್ನು ಮುಟ್ಟಿತು. ದಕ್ಷಿಣ ಆಫ್ರಿಕಾದ ಈ ಗೆಲುವಿಗೆ ಪ್ರಮುಖ ಕಾರಣ ಎಂದರೇ ಅದು ಒನ್ ಡೌನ್ ಬ್ಯಾಟ್ಸಮನ್ ಕೀಗನ್ ಪೀಟರ್ಸನ್. ಮೊದಲ ಇನ್ನಿಂಗ್ಸ್ ನಲ್ಲಿ 72 ರನ್ ಗಳಿಸಿದ್ದ ಪೀಟರ್ಸನ್ ಬಳಿಕ ಎರಡನೇ ಇನ್ನಿಂಗ್ಸ್ ನಲ್ಲಿ 82 ರನ್ ಗಳಿಸಿದ್ದರು. ಸಹಜವಾಗಿಯೇ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇವರ ಈ ಸಾಹಸಮಯ ಇನ್ನಿಂಗ್ಸ್ ಗೆ ಮಾಜಿ ಕ್ರಿಕೇಟಿಗರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಭಾರತದ ಮಾಜಿ ಕೋಚ್ ರವಿಶಾಸ್ತ್ರಿ, ಸೌತ್ ಆಫ್ರಿಕಾದ ಕೀಗನ್ ಪೀಟರ್ಸನ್ ರವರನ್ನ ಒಬ್ಬ ಕನ್ನಡಿಗನಿಗೆ ಹೋಲಿಸಿದ್ದಾರೆ. ಏಕೆ ಎಂದು ತಿಳಿಯೋಣ ಬನ್ನಿ. ಹೌದು ರವಿಶಾಸ್ತ್ರಿ ಕೀಗನ್ ಪೀಟರ್ಸನ್ ರನ್ನು ಹೋಲಿಸಿದ್ದು ಕನ್ನಡಿಗ, ಭಾರತ ಕ್ರಿಕೇಟ್ ತಂಡದ ಮಾಜಿ ಆಟಗಾರ ಗುಂಡಪ್ಪ ವಿಶ್ವನಾಥ್ ರವರಿಗೆ. ಹೌದು ಆರಂಭಿಕ ಜಿ.ವಿಶ್ವನಾಥ್ ಸಹ ನಿರ್ಣಾಯಕ ಪಂದ್ಯಗಳಲ್ಲಿ ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು ಗೆಲ್ಲಿಸುತ್ತಿದ್ದರಂತೆ.

ಅದೇ ರೀತಿ ಪೀಟರ್ಸನ್ ಸಹ ನಿರ್ಣಾಯಕ ಪಂದ್ಯದ ಎರಡು ಇನ್ನಿಂಗ್ಸ್ ಗಳಲ್ಲಿ ಅದ್ಭುತ ಆಟ ಆಡಿ ಸೌತ್ ಆಫ್ರಿಕಾವನ್ನ ಗೆಲ್ಲಿಸಿದರು.ಹಾಗಾಗಿ ಗುಂಡಪ್ಪ ವಿಶ್ವನಾಥ್ ರನ್ನೇ ಹೋಲುತ್ತಾರೆ ಎಂದು ಮಾಜಿ ಕ್ರಿಕೇಟಿಗ ರವಿಶಾಸ್ತ್ರಿ ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ. ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಟೆಸ್ಟ್ ತಂಡದ ನಾಯಕತ್ವಕ್ಕೂ ವಿರಾಟ್ ಕೊಹ್ಲಿ ವಿದಾಯ ಘೋಷಿಸಿದ್ದಾರೆ. ಜನೇವರಿ 19ರಿಂದ ದಕ್ಷಿಣ ಆಫ್ರಿಕಾದ ವಿರುದ್ದ ಏಕದಿನ ಸರಣಿ ಆರಂಭವಾಗಲಿದ್ದು, ಕನ್ನಡಿಗ ಕೆ.ಎಲ್.ರಾಹುಲ್ ಮೊದಲ ಭಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ತಂಡವನ್ನ ಮುನ್ನಡೆಸಲಿದ್ದಾರೆ. ಟೆಸ್ಟ್ ಸರಣಿಯಲ್ಲಾದ ಸೋಲನ್ನ , ಏಕದಿನ ಸರಣಿ ಗೆದ್ದು ಮರೆಯುವ ತವಕದಲ್ಲಿದೆ ರಾಹುಲ್ ಪಡೆ. ಇದೇ ಮೊದಲ ಭಾರಿ ನಾಯಕತ್ವದ ಒತ್ತಡವಿಲ್ಲದೇ ವಿರಾಟ್ ಬ್ಯಾಟ್ ಬೀಸಲಿದ್ದು, ಅಭಿಮಾನಿಗಳು ಅವರೆಡೆ ಅಪಾರ ನೀರಿಕ್ಷೆ ಇಟ್ಟುಕೊಂಡಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.