ರಹಾನೆ-ಪೂಜಾರ ಸ್ಥಾನ ತುಂಬಲು ಸಿದ್ದರಾದ ಟೀಮ್ ಇಂಡಿಯಾದ ಆಟಗಾರರು, ಲಿಸ್ಟ್ ನಲ್ಲಿ ಯಾರ್ಯಾರಿದ್ದಾರೆ ಗೊತ್ತೇ? ಇವರಲ್ಲಿ ನಿಮ್ಮ ಆಯ್ಕೆ ಯಾರು?

ರಹಾನೆ-ಪೂಜಾರ ಸ್ಥಾನ ತುಂಬಲು ಸಿದ್ದರಾದ ಟೀಮ್ ಇಂಡಿಯಾದ ಆಟಗಾರರು, ಲಿಸ್ಟ್ ನಲ್ಲಿ ಯಾರ್ಯಾರಿದ್ದಾರೆ ಗೊತ್ತೇ? ಇವರಲ್ಲಿ ನಿಮ್ಮ ಆಯ್ಕೆ ಯಾರು?

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೇಟ್ ತಂಡ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಸೋತ ನಂತರ ಈಗ ಭರ್ಜರಿ ಸರ್ಜರಿಗೆ ಮುಂದಾಗಿದೆ. ಪ್ರಮುಖ ಎರಡು ಟೆಸ್ಟ್ ಸೋಲಲು ಕಾರಣವೆಂದರೇ ಅದು ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಗಳ ವೈಫಲ್ಯ. ಸದ್ಯ ಭಾರತ ಟೆಸ್ಟ್ ತಂಡದಲ್ಲಿ ಮಾತ್ರ ಸ್ಥಾನ ಪಡೆಯುತ್ತಿರುವ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ಮೇಲೆ ಬಹಳ ಗುರುತರ ಜವಾಬ್ದಾರಿ ಇದೆ. ಆದರೇ ಕಳೆದೆರೆಡು ವರ್ಷಗಳಿಂದ ಪೂಜಾರ ಹಾಗೂ ರಹಾನೆ ಬ್ಯಾಟ್ ನಿಂದ ರನ್ನುಗಳು ಬರುತ್ತಿಲ್ಲ.

ಕೇವಲ ರನ್ ಅಲ್ಲದೇ ಅವರಿಬ್ಬರು ಕ್ರೀಸ್ ನಲ್ಲಿ ಸಾಕಷ್ಟು ಹೊತ್ತು ಸಹ ನಿಲ್ಲುತ್ತಿಲ್ಲ. ಕನಿಷ್ಠ ನೂರು ಎಸೆತಗಳನ್ನು ಅವರು ಎದುರಿಸದೇ ಬಂದಷ್ಟೇ ಬೇಗ ಔಟಾಗುತ್ತಿದ್ದಾರೆ. ಇದೇ ಇತ್ತಿಚಿನ ದಿನಗಳಲ್ಲಿ ಟೀಮ್ ಇಂಡಿಯಾಕ್ಕೆ ದೊಡ್ಡ ತಲೆನೋವಾಗುತ್ತಿತ್ತು. ದಕ್ಷಿಣ ಆಫ್ರಿಕಾ ಸರಣಿಯೇ ಈ ಇಬ್ಬರೂ ಆಟಗಾರರಿಗೆ ಕೊನೆ ಎಂದು ಹೇಳಲಾಗುತ್ತಿತ್ತು. ಈಗ ಮಹತ್ವದ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ನಿರ್ಣಾಯಕ ಸಮಯದಲ್ಲಿ ರನ್ ಗಳಿಸದೇ ಔಟಾಗಿ ಭಾರತದ ಸೋಲಿಗೆ ಕಾರಣರಾಗಿದ್ದಾರೆ. ಹಾಗಾಗಿ ಈ ಇಬ್ಬರಿಗೂ ಮುಂದಿನ ತಿಂಗಳು ಶ್ರೀಲಂಕಾ ವಿರುದ್ದ ನಡೆಯಲಿರುವ ಸರಣಿಯಿಂದ ಗೇಟ್ ಪಾಸ್ ಪಡೆಯುವುದು ಬಹುತೇಖ ಖಚಿತ. ಹಾಗಾಗಿ ರಹಾನೆ ಹಾಗೂ ಪೂಜಾರರನ್ನ ರಿಪ್ಲೇಸ್ ಮಾಡಬಲ್ಲ ಆಟಗಾರರನ್ನ ಬಿಸಿಸಿಐ ಈಗಾಗಲೇ ಗುರುತಿಸಿದೆ. ಬನ್ನಿ ಆ ಆಟಗಾರರು ಯಾರು ಎಂದು ತಿಳಿಯೋಣ.

ಮೊದಲನೆಯದಾಗಿ ಹನುಮ ವಿಹಾರಿ : ಆಂದ್ರದ ಈ ಪ್ರತಿಭಾನ್ವಿತ ಬ್ಯಾಟ್ಸಮನ್ ತಾವು ಎಂತಹ ಟೆಸ್ಟ್ ಕ್ರಿಕೇಟರ್ ಎಂಬುದನ್ನ ಈಗಾಗಲೇ ಸಾಬೀತುಪಡಿಸಿದ್ದಾರೆ. ಆರಂಭಿಕ/ಮಧ್ಯಮ ಕ್ರಮಾಂಕ/ಕೆಳ ಕ್ರಮಾಂಕ ಹೀಗೆ ಎಲ್ಲಾ ಕ್ರಮಾಂಕಗಳಲ್ಲಿಯೂ ಬ್ಯಾಟಿಂಗ್ ಮಾಡುವ ಕ್ಷಮತೆ ಹೊಂದಿದ್ದಾರೆ. ಅದಲ್ಲದೇ ಉತ್ತಮವಾದ ಆಫ್ ಸ್ಪಿನ್ನರ್ ಕೂಡ. ಹಾಗಾಗಿ ಚೇತೇಶ್ವರ ಪೂಜಾರ ಬದಲಿ ಈ ಆಟಗಾರ ಭವಿಷ್ಯದಲ್ಲಿ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಮೂರನೇ ಕ್ರಮಾಂಕದ ಆಟಗಾರನಾಗಿ ಹೊರಹೊಮ್ಮುವುದು ಖಚಿತ. ಈ ಪ್ರಯೋಗ ಮುಂಬರುವ ಶ್ರೀಲಂಕಾ ವಿರುದ್ದದ ಸರಣಿಯಲ್ಲಿ ನಡೆಯುವ ಸಾಧ್ಯತೆ ಇದೆ.

ಎರೆದಂಡೆಯದಾಗಿ ಶ್ರೇಯಸ್ ಅಯ್ಯರ್ : ಮುಂಬೈನ ಪ್ರತಿಭಾನ್ವಿತ ಬ್ಯಾಟ್ಸಮನ್ ಶ್ರೇಯಸ್ , ಈಗಾಗಲೇ ತಾವೊಬ್ಬ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಎಂಬುದನ್ನ ಸಾಬೀತು ಪಡಿಸಿದ್ದಾರೆ. ಹಾಗಾಗಿ ಐದನೇ ಕ್ರಮಾಂಕದಲ್ಲಿ ಅಯ್ಯರ್ ಮುಂಬರುವ ಸರಣಿಗಳಲ್ಲಿ ಆಡಬಹುದು.

ಮೂರನೆಯದಾಗಿ ಶುಭಮಾನ್ ಗಿಲ್ : ಪಂಜಾಬ್ ನ ಪ್ರತಿಭಾನ್ವಿತ ಬ್ಯಾಟ್ಸಮನ್ ಗಿಲ್, ಈಗಾಗಲೇ ಟೆಸ್ಟ್ ತಂಡದಲ್ಲಿ ಆರಂಭಿಕನಾಗಿ ಯಶಸ್ಸು ಗಳಿಸಿದ್ದಾರೆ. ಈಗ ಮಧ್ಯಮ ಕ್ರಮಾಂಕದಲ್ಲಿಯೂ ಸಹ ಆಡಬೇಕು ಎಂಬ ಸೂಚನೆಯನ್ನ ಬಿಸಿಸಿಐ ಇವರಿಗೆ ನೀಡಿದೆ. ಹಾಗಾಗಿ ಗಿಲ್ ಸಹ ಮೂರು ಅಥವಾ ಐದನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.