ವಿರಾಟ್ ರಾಜೀನಾಮೆ ಬೆನ್ನಲ್ಲೇ, ಟೆಸ್ಟ್ ತಂಡಕ್ಕೆ ನೂತನ ನಾಯಕನ ಅಂತಿಮಗೊಳಿಸಲು ಮುಂದಾದ ಬಿಸಿಸಿಐ, ಯಾರಾಗಬಹುದು ಗೊತ್ತೇ??

ವಿರಾಟ್ ರಾಜೀನಾಮೆ ಬೆನ್ನಲ್ಲೇ, ಟೆಸ್ಟ್ ತಂಡಕ್ಕೆ ನೂತನ ನಾಯಕನ ಅಂತಿಮಗೊಳಿಸಲು ಮುಂದಾದ ಬಿಸಿಸಿಐ, ಯಾರಾಗಬಹುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ದಕ್ಷಿಣ ಆಫ್ರಿಕಾದ ವಿರುದ್ದ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಭಾರತೀಯ ಕ್ರಿಕೇಟ್ ಅಭಿಮಾನಿಗಳಿಗೆ ಶಾಕ್ ಎಂಬಂತೆ ನಾಯಕ ವಿರಾಟ್ ಕೊಹ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಒಟ್ಟಿನಲ್ಲಿ ಎಲ್ಲಾ ಮಾದರಿಯ ಕ್ರಿಕೇಟ್ ತಂಡಗಳ ನಾಯಕತ್ವಕ್ಕೆ ರಾಜೀನಾಮೆ ನೀಡಿರುವ ವಿರಾಟ್ ಸದ್ಯ ಭಾರತ ತಂಡದಲ್ಲಿ ಕೇವಲ ಕ್ರಿಕೇಟರ್ ಆಗಿ ಮಾತ್ರ ಸ್ಥಾನ ಪಡೆಯಲಿದ್ದಾರೆ. ಈ ಬೆನ್ನಲ್ಲೇ ವಿರಾಟ್ ರಾಜೀನಾಮೆಯನ್ನು ಅಂಗೀಕರಿಸಿರುವ ಬಿಸಿಸಿಐ ನೂತನ ನಾಯಕನ ಹುಡುಕಾಟದಲ್ಲಿದೆ. ಮೂಲಗಳ ಪ್ರಕಾರ ಸದ್ಯ ಏಕದಿನ ಹಾಗೂ ಟಿ 20 ಕ್ರಿಕೇಟ್ ತಂಡದ ಉಪನಾಯಕರಾಗಿರುವ ಕನ್ನಡಿಗ ಕೆ.ಎಲ್.ರಾಹುಲ್ ಗೆ ಮಣೆ ಹಾಕುವ ಸಂಭವವಿದೆ ಎಂದು ಹೇಳಲಾಗುತ್ತಿದೆ.

ಏಕೆಂದರೇ ಹಿರಿಯ ಕ್ರಿಕೇಟರ್ ಆಗಿರುವ ರೋಹಿತ್ ಶರ್ಮಾಗೆ ಸದ್ಯ 35 ವರ್ಷ. ಹೆಚ್ಚು ಟೆಸ್ಟ್ ಕ್ರಿಕೇಟ್ ಆಡುವ ಫಿಟ್ನೆಸ್ ಸದ್ಯ ಅವರ ಬಳಿ ಇಲ್ಲ. ಅದಲ್ಲದೇ 35 ವರ್ಷವಾದ ಕಾರಣ ಅವರು ಸಹ ಹೆಚ್ಚೆಂದರೇ ಎರಡು ವರ್ಷದ ಬಳಿಕ ಕ್ರಿಕೇಟ್ ಗೆ ನಿವೃತ್ತಿ ಹೇಳಬಹುದು. ಹಾಗಾಗಿ ಭವಿಷ್ಯದ ದೃಷ್ಠಿಯಿಂದ ಯುವಕರಿಗೆ ನಾಯಕತ್ವ ವಹಿಸುವ ಚಿಂತನೆಯಲ್ಲಿ ಬಿಸಿಸಿಐ ಮುಳುಗಿದೆ. ಸದ್ಯ 29 ವರ್ಷದ ಕೆ.ಎಲ್.ರಾಹುಲ್ ಹಾಗೂ 26 ವರ್ಷದ ಜಸಪ್ರಿತ್ ಬುಮ್ರಾ ಮತ್ತು 24 ವರ್ಷದ ರಿಷಭ್ ಪಂತ್ ಬಿಸಿಸಿಐ ಆಯ್ಕೆ ಸಮಿತಿ ಮುಂದಿದ್ದಾರೆ.

ಆದರೇ ಬುಮ್ರಾ ಹಾಗೂ ಪಂತ್ ಗೆ ಹೋಲಿಸಿದರೇ ರಾಹುಲ್ ಹೆಚ್ಚು ಸೂಕ್ತವಾಗುತ್ತಾರೆ ಮತ್ತು ನಾಯಕತ್ವ ನಿಭಾಯಿಸಿದ ಅನುಭವ ಹಾಗೂ ನಾಯಕತ್ವ ನಿಭಾಯಿಸುವ ಕೌಶಲ್ಯವಿದೆ. ಹಾಗಾಗಿ ಟೆಸ್ಟ್ ಕ್ರಿಕೇಟ್ ತಂಡಕ್ಕೆ ಕೆ.ಎಲ್.ರಾಹುಲ್ ರನ್ನೇ ನಾಯಕರನ್ನಾಗಿ ನೇಮಕ ಮಾಡುವ ಸಂಭವ ಹೆಚ್ಚಿದೆ. ಅದಲ್ಲದೇ ರಾಹುಲ್ ಪ್ರದರ್ಶನ ಕೂಡಾ ಸ್ಥಿರವಾಗಿದ್ದು, ಅವರ ಬ್ಯಾಟಿನಿಂದ ನಾಯಕತ್ವದ ಒತ್ತಡದಲ್ಲಿಯೂ ಸಹ ರನ್ನುಗಳು ಬರುತ್ತಿವೆ. ಇನ್ನು 29ರ ಹರೆಯದ ರಾಹುಲ್ ಗೆ ನಾಯಕತ್ವ ವಹಿಸಿದರೇ, ಇನ್ನು ಐದಾರು ವರ್ಷಗಳ ಕಾಲ ರಾಹುಲ್ ಆ ಜವಾಬ್ದಾರಿಯನ್ನ ಯಶಸ್ವಿಯಾಗಿ ನಿಭಾಯಿಸುವ ಸಾಧ್ಯತೆ ಇದೆ. ಹಾಗಾಗಿ ಒಂದೆರೆಡು ದಿನಗಳ ಒಳಗೆ ಕೆ.ಎಲ್.ರಾಹುಲ್ ಭಾರತ ಟೆಸ್ಟ್ ಕ್ರಿಕೇಟ್ ತಂಡದ ಅಧೀಕೃತ ನಾಯಕನಾಗುವ ಸಾಧ್ಯತೆ ನಿಚ್ಚಳವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.