ಇಂದು ಮಂಗಳ ಗ್ರಹ ಧನುರಾಶಿಗೆ ಸ್ಥಾನಪಲ್ಲಟ, ನಾಲ್ಕು ರಾಶಿಯವರಿಗೆ ಧನ ಹಾಗೂ ಆರ್ಥಿಕ ಲಾಭ. ಅದೃಷ್ಟದ ಬಾಗಿಲು ತೆಗೆಯುವುದು ಯಾರ್ಯಾರಿಗೆ ಗೊತ್ತೇ??

ಇಂದು ಮಂಗಳ ಗ್ರಹ ಧನುರಾಶಿಗೆ ಸ್ಥಾನಪಲ್ಲಟ, ನಾಲ್ಕು ರಾಶಿಯವರಿಗೆ ಧನ ಹಾಗೂ ಆರ್ಥಿಕ ಲಾಭ. ಅದೃಷ್ಟದ ಬಾಗಿಲು ತೆಗೆಯುವುದು ಯಾರ್ಯಾರಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ನಂಬುವವರು ಸಾಕಷ್ಟು ಮಂದಿ ಇದ್ದಾರೆ. ಶುಭ ಕಾರ್ಯದಿಂದ ಹಿಡಿದು ಅಶುಭಕಾರ್ಯದ ವರೆಗೆ ಎಲ್ಲ ಸನ್ನಿವೇಶಗಳಲ್ಲೂ ಕೂಡ ಜ್ಯೋತಿಷ್ಯಶಾಸ್ತ್ರದ ಉಲ್ಲೇಖ ಖಂಡಿತವಾಗಿಯೂ ಕಂಡುಬರುತ್ತದೆ. ಇನ್ನು ಇಂದಿನ ವಿಚಾರದಲ್ಲಿ ಕೂಡ ನಾವು ಈ ವರ್ಷ ಶುಭ ಲಾಭ ವನ್ನು ಪಡೆಯುವಂತಹ ನಾಲ್ಕು ರಾಶಿಗಳ ಕುರಿತಂತೆ ಹೇಳಲು ಹೊರಟಿದ್ದೇವೆ.

Follow us on Google News

ಗ್ರಹಗಳ ಸೇನಾಧಿಪತಿ ಆಗಿರುವ ಮಂಗಳ ಪರಿವರ್ತನೆ ಆಗಲಿದ್ದಾನೆ. ಈ ಸಂದರ್ಭದಲ್ಲಿ 4 ರಾಶಿಯವರಿಗೆ ಮಂಗಳನಿಂದಾಗಿ ಸಾಕಷ್ಟು ಶುಭ ಲಾಭ ಗಳು ಒದಗಿಬರುತ್ತದೆ. ಶೌರ್ಯ ಹಾಗೂ ಸಾಹಸಗಳ ಕಾರಕನಾಗಿರುವ ಮಂಗಳಗ್ರಹ ಗೋಚರವಾಗಲಿದ್ದಾನೆ. ಈ ಸಂದರ್ಭದಲ್ಲಿ ಮಂಗಳ ಗ್ರಹ ಧನು ರಾಶಿಗೆ ಪ್ರವೇಶಿಸಲಿದ್ದಾನೆ. ಈ ಸಂದರ್ಭದಲ್ಲಿ 4 ರಾಶಿಯವರಿಗೆ ಸಾಕಷ್ಟು ವಿಧದಲ್ಲಿ ಅಂದರೆ ಆಯುಷ್ಯದಲ್ಲಿ ಹಾಗೂ ಧನಲಾಭ ದಲ್ಲಿ ಪ್ರಗತಿ ಕಾಣಲಿದೆ. ಹಾಗಿದ್ದರೆ ಆ 4 ರಾಶಿಯವರು ಯಾರೆಂಬುದನ್ನು ಈ ಲೇಖನದಲ್ಲಿ ತಪ್ಪದೆ ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ; ಮಂಗಳ ಗ್ರಹದ ರಾಶಿ ಪರಿವರ್ತನೆ ಯಿಂದಾಗಿ ಮೇಷ ರಾಶಿಯವರಿಗೆ ಸಾಕಷ್ಟು ಲಾಭಗಳು ಒದಗಿಬರಲಿದೆ. ಆರ್ಥಿಕವಾಗಿ ಪ್ರಗತಿಯನ್ನು ಸಾಧಿಸಲಿದ್ದಾರೆ ಹಾಗೂ ಸಮಾಜದಲ್ಲಿ ಪ್ರತಿಷ್ಠೆ ಗೌರವಗಳು ಕೂಡ ಸಿಗಲಿದೆ. ಇನ್ನು ಮೇಷರಾಶಿಗೆ ಮಂಗಳಗ್ರಹವೇ ಅಧಿಪತಿ ಆಗಿರುವುದು ಕೂಡ ಇಲ್ಲಿ ಮತ್ತೊಂದು ಪ್ರಮುಖ ಅಂಶವಾಗಿ ಕಾಣಿಸುತ್ತದೆ. ಹೀಗಾಗಿಯೇ ಮೇಷ ರಾಶಿಯವರಿಗೆ ಮಂಗಳಗ್ರಹದ ಪೂರ್ಣ ಆಶೀರ್ವಾದ ಸಿಗಲಿದೆ. ಮಾತ್ರವಲ್ಲದೆ ಈ ಸಂದರ್ಭದಲ್ಲಿ ನಿಮ್ಮ ಉದ್ಯೋಗ ದೃಷ್ಟಿಯಲ್ಲಿ ಕೂಡ ಸಾಕಷ್ಟು ಉತ್ತಮವಾದ ಬೆಳವಣಿಗೆಗಳು ಕಂಡು ಬರಲಿದ್ದು ವ್ಯಾಪಾರದಲ್ಲಿ ಕೂಡ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮಿಥುನ ರಾಶಿ: ಜನವರಿ 16ರಂದು ಮಂಗಳಗ್ರಹ ಧನುರಾಶಿಗೆ ಪರಿವರ್ತನೆಯಾಗುತ್ತಲೇ ಮಿಥುನ ರಾಶಿಯವರಿಗೆ ದೊಡ್ಡಮಟ್ಟದಲ್ಲಿ ಧನ ಲಾಭದ ಸಾಧ್ಯತೆ ಕಂಡು ಬಂದಿರುತ್ತದೆ. ಇದರ ಜೊತೆಗೆ ಕೆಲಸ ಹಾಗೂ ವ್ಯಾಪಾರ ಎರಡರಲ್ಲೂ ಕೂಡ ಗೆಲುವು ಸಾಧಿಸಲಿದ್ದಾರೆ. ದಾಂಪತ್ಯ ಜೀವನ ಎನ್ನುವುದು ಸುಖಕರವಾಗಿರಲಿದೆ. ಈ ವರ್ಷದ ಆರಂಭದಲ್ಲಿ ಹೊಸ ವ್ಯಾಪಾರವನ್ನು ಕೂಡ ಆರಂಭಿಸಲು ಸೂಕ್ತವಾಗಿದೆ. ಈ ವರ್ಷ ನಿಮಗೆ ಶುಭಕರವಾಗಲಿದ್ದು ಆರಂಭದಲ್ಲಿ ಶುಭ ಸಮಾಚಾರಗಳು ನಿಮ್ಮನ್ನು ಹುಡುಕಿ ಬರಲಿವೆ. ಮಂಗಳನ ಕೃಪೆಯಿಂದಾಗಿ ಮಿಥುನ ರಾಶಿಯವರು ಈ ವರ್ಷ ಗಮನಾರ್ಹ ಸಾಧನೆಗಳನ್ನು ಮಾಡಲಿದ್ದೀರಿ.

ಕನ್ಯಾ ರಾಶಿ: ಮಂಗಳ ಗ್ರಹದ ರಾಶಿ ಪರಿವರ್ತನೆ ಯಿಂದಾಗಿ ಕನ್ಯಾರಾಶಿಯವರಿಗೆ ಆರ್ಥಿಕ ಸ್ಥಿತಿಯಲ್ಲಿ ಏಳಿಗೆ ಕಂಡುಬರಲಿದೆ. ಕೆಲಸ ಹಾಗೂ ವ್ಯಾಪಾರದಲ್ಲಿ ಮೊದಲಿಗಿಂತಲೂ ಕೂಡ ಅತ್ಯುತ್ತಮವಾದ ಅವಕಾಶಗಳು ನಿಮ್ಮ ಪಾಲಾಗಲಿವೆ. ನಿಮ್ಮ ದಾಂಪತ್ಯ ಜೀವನದಲ್ಲಿ ಕೂಡ ನೆಮ್ಮದಿ ಮೂಡಿಬರಲಿದೆ. ಜೀವನದಲ್ಲಿ ನಿಮ್ಮ ಸಹೋದರ ಹಾಗೂ ಸಹೋದರಿಯರ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಅತ್ಯಂತ ದೊಡ್ಡ ಡೀಲ್ ನಿಮ್ಮ ಪಾಲಾಗಲಿದ್ದು ಅಚಾನಕ್ಕಾಗಿ ಧನ ಲಾಭವಾಗಲಿದೆ. ಮಂಗಳನ ರಾಶಿ ಪರಿವರ್ತನೆ ಸಂದರ್ಭದಲ್ಲಿ ಯಾವುದೇ ಕೆಲಸಕ್ಕೂ ಕೂಡ ನೀವು ಕೈ ಹಾಕಿದರೆ ಅದರಲ್ಲಿ ಕೇವಲ ಯಶಸ್ಸನ್ನು ಮಾತ್ರ ಕಾಣಲಿದ್ದೀರಿ.

ಮೀನ ರಾಶಿ: ಈ ವರ್ಷದಲ್ಲಿ ನೀವು ಕೇವಲ ಶುಭವಾರ್ತೆಯನ್ನು ಮಾತ್ರ ಕೇಳಲಿದ್ದೀರಿ ಹಾಗೂ ಕಾರ್ಯಕ್ಷೇತ್ರದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧಿಸಲಿದ್ದೀರಿ. ಒಂದು ವೇಳೆ ನೀವು ಕೆಲಸವನ್ನು ಬದಲಾಯಿಸುವ ಯೋಜನೆಯನ್ನು ಹೊಂದಿದ್ದರೆ ನಿಮಗಾಗಿ ಹಲವಾರು ಒಳ್ಳೆಯ ಕೆಲಸಗಳ ಆಯ್ಕೆಗಳು ಕಾದಿವೆ. ಹಲವಾರು ಸಮಯಗಳಿಂದ ನೀವು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳು ಸಂಪೂರ್ಣವಾಗಿ ಪರಿಹಾರವಾಗಲಿದೆ ಶತ್ರುಗಳು ಕೂಡ ನಿಮ್ಮಿಂದ ದೂರವಾಗಲಿದ್ದಾರೆ. ನಿಮಗೆ ಭಾಗ್ಯದ ಸಾಥ್ ಸಿಗುವುದರಿಂದ ಆಗಿ ನೀವು ಪರಿಶ್ರಮಪಟ್ಟು ಕೆಲಸ ಮಾಡಿದರೆ ಎಲ್ಲಾ ವರ್ಗದ ಕ್ಷೇತ್ರದಲ್ಲೂ ಕೂಡ ಗೆಲುವನ್ನು ಸಾಧಿಸಲಿದ್ದು ನಿಮ್ಮೊಂದಿಗೆ ನಿಮ್ಮ ಪೋಷಕರು ನಿಮ್ಮ ಬೆಂಗಾವಲಾಗಿ ನಿಲ್ಲಲಿದ್ದಾರೆ. ಇದರಿಂದಾಗಿ ನಿಮ್ಮ ಆತ್ಮವಿಶ್ವಾಸವು ಇನ್ನೊಂದು ಹಂತಕ್ಕೆ ಹೋಗಲಿದೆ. ಇವೇ ಮಂಗಳನ ರಾಶಿ ಪರಿವರ್ತನೆ ಯಿಂದಾಗಿ ಲಾಭವನ್ನು ಪಡೆಯುವ 4 ರಾಶಿಗಳು.