ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋತಿರುವ ಭಾರತ ತಂಡ ಈ ವರ್ಷ ಗಮನಹರಿಸಲೇ ಬೇಕಾದ 7 ಅಂಶಗಳು ಯಾವುವು ಗೊತ್ತೇ??

ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋತಿರುವ ಭಾರತ ತಂಡ ಈ ವರ್ಷ ಗಮನಹರಿಸಲೇ ಬೇಕಾದ 7 ಅಂಶಗಳು ಯಾವುವು ಗೊತ್ತೇ??

ನಮಸ್ಕಾರ ಸ್ನೇಹಿತರೇ 2021 ವರ್ಷ ಮುಗಿದಿದೆ. 2022ರ ಆರಂಭದಲ್ಲಿಯೇ ಭಾರತ ದಕ್ಷಿಣ ಆಫ್ರಿಕಾ ವಿರುದ್ದ ಸರಣಿ ಸೋತಿದೆ. ಇನ್ನು 2022 ರಲ್ಲಿ ಭಾರತ ವಿಶ್ವ ಕ್ರಿಕೇಟ್ ಜಗತ್ತನ್ನು ಆಳಬೇಕೆಂದರೇ ಕೆಲವು ಬದಲಾವಣೆಗಳನ್ನ ಮಾಡಿಕೊಳ್ಳಬೇಕಾಗಿದೆ. ಟೀಮ್ ಇಂಡಿಯಾ ಬದಲಾಯಿಸಿಕೊಳ್ಳಬೇಕಾದ ಏಳು ನಿಯಮಗಳು ಈ ಕೆಳಗಿನಂತಿವೆ.

1.ಅಜಿಂಕ್ಯಾ ರಹಾನೆಯ ಬದಲಿ ಆಟಗಾರನನ್ನ ಹುಡುಕಬೇಕು : ಟೆಸ್ಟ್ ಕ್ರಿಕೇಟ್ ಮಾತ್ರ ಆಡುತ್ತಿರುವ ರಹಾನೆ, ಇತ್ತೀಚಿನ ದಿನಗಳಲ್ಲಿ ಸಂಪೂರ್ಣ ಕಳಾಹೀನರಾಗಿದ್ದಾರೆ. ಆದಷ್ಟು ಬೇಗ ಅವರ ಬದಲಿ ಆಟಗಾರನನ್ನ ಹುಡುಕಿಕೊಳ್ಳಬೇಕು.

2.ಶುಭಮಾನ್ ಗಿಲ್ ಹಾಗೂ ಪೃಥ ವಿ ಶಾಗೆ ಹೆಚ್ಚು ಅವಕಾಶ ನೀಡಬೇಕು : ಭವಿಷ್ಯದ ದೃಷ್ಠಿಯಿಂದ ಯುವ ಬ್ಯಾಟ್ಸಮನ್ ಗಳಾದ ಗಿಲ್ ಹಾಗೂ ಪೃಥ್ವಿ ಶಾ ರಿಗೆ ಹೆಚ್ಚು ಅವಕಾಶ ನೀಡುವ ಮೂಲಕ ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕು.

3.ಪ್ರಮುಖ ಕ್ರಿಕೇಟಿಗರಿಗೆ ಹೆಚ್ಚು ಟೆನ್ಶನ್ ನೀಡಬಾರದು : ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸಮನ್ ಗಳಾದ ರಾಹುಲ್ ಹಾಗೂ ರೋಹಿತ್ ಗೆ ಒತ್ತಡ ಕಡಿಮೆ ಮಾಡಬೇಕು. ಪ್ರತಿ ಪಂದ್ಯದಲ್ಲೂ ರನ್ ಗಳಿಸಬೇಕೆಂಬ ಒತ್ತಡವಿದ್ದರೇ ಅವರು ವಿಫಲರಾಗುವ ಸಾಧ್ಯತೆ ಹೆಚ್ಚು.

4.ಬುಮ್ರಾ ಬದಲು ಹರ್ಷಲ್ ಪಟೇಲ್ ಹಾಗೂ ಆವೇಶ್ ಖಾನ್ ಗೆ ಅವಕಾಶ ನೀಡಬೇಕು : ಮೂರು ಮಾದರಿಯಲ್ಲಿ ಪ್ರಮುಖ ಬೌಲರ್ ಆಗಿರುವ ಬುಮ್ರಾಗೆ ಸ್ವಲ್ಪ ವಿಶ್ರಾಂತಿ ನೀಡಬೇಕು. ಬುಮ್ರಾ ಬದಲು ಟಿ 20 ಕ್ರಿಕೇಟ್ ನಲ್ಲಿ ಹೆಚ್ಚು ಎಕಾನಮಿಯೊಂದಿಗೆ ಉತ್ತಮ ವಿಕೇಟ್ ಗಳಿಸಿದ್ದಾರೆ. ಬುಮ್ರಾಗೆ ಒತ್ತಡ ಕಡಿಮೆ ಮಾಡುವ ಸಲುವಾಗಿ ಹರ್ಷಲ್ ಪಟೇಲ್ ಹಾಗೂ ಆವೇಶ್ ಖಾನ್ ರನ್ನ ಹೆಚ್ಚು ಬಳಸಿಕೊಳ್ಳಬೇಕು.

5.ಹೊಸ ನಾಯಕನನ್ನ ಬೆಳೆಸಬೇಕು : ರೋಹಿತ್ ಹಾಗೂ ವಿರಾಟ್ ಕೊಹ್ಲಿ ನಂತರ ಭಾರತ ತಂಡವನ್ನ ಮುನ್ನಡೆಸಬಲ್ಲ ಸಮರ್ಥ ನಾಯಕನನ್ನ ಈಗಿನಿಂದಲೇ ಬೆಳೆಸಬೇಕು.

6.ಲೆಗ್ ಸ್ಪಿನ್ನರ್ ಒಬ್ಬನ್ನ ಬೆಳೆಸಬೇಕು : ಭಾರತ ಸ್ಪಿನ್ನರ್ ಗಳ ಫ್ಯಾಕ್ಟರಿ. ಆದರೇ ಸದ್ಯ ಭಾರತ ತಂಡದಲ್ಲಿ ಲೆಗ್ ಸ್ಪಿನ್ನರ್ ಗಳ ಕೊರತೆ ಕಾಡುತ್ತಿದ್ದೆ. ತಜ್ಞ ಲೆಗ್ ಸ್ಪಿನ್ನರ್ ಗಳನ್ನ ಈಗಲೇ ಬೆಳೆಸಬೇಕಿದೆ.

7.ಪ್ರಮುಖ ಐಸಿಸಿ ಇವೆಂಟ್ ಸಮಯದಲ್ಲಿ ತಂಡದ ಸಂಯೋಜನೆಯನ್ನ ಬದಲಾಯಿಸಬಾರದು : ಟಿ 20 ವಿಶ್ವಕಪ್ ಸಂದರ್ಭದಲ್ಲಿ ಯುಜವೇಂದ್ರ ಚಾಹಲ್ ರನ್ನ ಕೈ ಬಿಟ್ಟಿದ್ದೇ ಭಾರತ ತಂಡಕ್ಕೆ ಹಿನ್ನಡೆಯಾಯಿತು. ಹಾಗಾಗಿ ಪ್ರಮುಖ ಐಸಿಸಿ ಇವೆಂಟ್ ಸಮಯದಲ್ಲಿ ತಂಡದಲ್ಲಿ ಯಾವುದೇ ಪ್ರಯೋಗ ನಡೆಸಬಾರದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.