ನೀವು ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ಮಾಡಿದ್ದೀರಾ?? ಹಾಗಿದ್ದರೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇದೆ ಉದ್ಯೋಗ. ಸಂಪೂರ್ಣ ಡೀಟೇಲ್ಸ್.

ನೀವು ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ಮಾಡಿದ್ದೀರಾ?? ಹಾಗಿದ್ದರೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇದೆ ಉದ್ಯೋಗ. ಸಂಪೂರ್ಣ ಡೀಟೇಲ್ಸ್.

ನಮಸ್ಕಾರ ಸ್ನೇಹಿತರೇ ಇದೀಗ ಎಸೆ ಎಸ್ ಎಲ್ ಸಿ, ಪಿಯುಸಿ ಮುಗಿಸಿ ಮನೆಯಲ್ಲೇ ಕೂರಬೇಕಾಗಿಲ್ಲ, ನೀವು ಉದ್ಯೋಗ ಅರಸುತ್ತಿದ್ದರೆ ದಕ್ಷಿಣ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಕರೆ ನೀಡಿದೆ. ಇದರಲ್ಲಿ ಒಟ್ಟು 21 ಸ್ಪೋರ್ಟ್ಸ್ ಕೋಟಾ ಹುದ್ದೆಗಳು ಖಾಲಿ ಇವೆ. ಇದಕ್ಕೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಡಿಸೆಂಬರ್ 18ರಿಂದಲೇ ಆರಂಭವಾಗಿದ್ದು, ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಇನ್ನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 17. ನೀವು ಈ ಹುದ್ದೆಗೆ ಆಸಕ್ತರಾಗಿದ್ದರೆ,ಅರ್ಜಿ ಸಲ್ಲಿಸುವುದಕ್ಕೂ ಮೂನ್ನ ಇಲ್ಲಿರುವ ಸಂಪೂರ್ಣ ಮಾಹಿತಿಯನ್ನು ಒಮ್ಮೆ ಗಮನಿಸಿ. ದಕ್ಷಿಣ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆ ಸ್ಪೋರ್ಟ್ಸ್ ಕೋಟಾ, ಅದರಲ್ಲಿ ಖಾಲಿ ಇರುವ ಹುದ್ದೆಗಳು 21. ಇದಕ್ಕೆ ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಎಂದರೆ 10ನೇ ತರಗತಿ, 12 ನೇ ತರಗತಿ ಹಾಗೂ ಐಟಿಐ (ಇವುಗಳಲ್ಲಿ ಯಾವುದಾದರೂ), ಉದ್ಯೋಗ ಖಾಲಿ ಇರುವ ಸ್ಥಳ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಕರ್ನಾಟಕ. ಇನ್ನು ಈ ಹುದ್ದೆಗೆ ನೇಮಕವಾದ ಅಭ್ಯರ್ಥಿಗೆ ಮಾಸಿಕ ವೇತನ ರೂ. 5,200-20,200ವರೆಗೆ.

ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 18, 2021ರಂದು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು ಕೊನೆಯ ದಿನಾಂಕ ಇದೇ ತಿಂಗಳು ಅಂದರೆ ಜನವರಿ 17, 2022. ಇನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 1, 2022ಕ್ಕೆ 18-25 ವರ್ಷದೊಳಗಿರಬೇಕು. SC/ST/ಮಹಿಳೆ/ಅಲ್ಪಸಂಖ್ಯಾತ/EBC ಅಭ್ಯರ್ಥಿಗಳ ಕುಟುಂಬದ ಆದಾಯವು ವಾರ್ಷಿಕ 50000/- ಕ್ಕಿಂತ ಕಡಿಮೆ ಇದ್ದರೆ ಅರ್ಜಿ ಶುಲ್ಕ ಕೇವಲ 250 ರೂಪಾಯಿಗಳು ಮಾತ್ರ. ಇತರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 500 ರೂಪಾಯಿಗಳಾಗಿರುತ್ತವೆ. ಇನ್ನು ಇಸು ಸ್ಪೋಟ್ಸ್ ಕೋಟಾ ಆಗುರುವುದರಿಂದ ಅಭ್ಯರ್ಥಿಗಳ ಕ್ರೀಡಾ ಪ್ರಯೋಗಗಳು, ಕ್ರೀಡಾ ಸಾಧನೆ, ಶೈಕ್ಷಣಿಕ ಅರ್ಹತೆಗಳನ್ನು ಪರಿಗಣಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸೌತ್ ರೈಲ್ವೇಸ್ ವೆಬ್ಸೈಟ್ ಗೆ ಭೇಟಿ ನೀಡಬಹುದು.