ನಿಮ್ಮ ಮೊಬೈಲ್ ನಲ್ಲಿ ಬ್ಯಾಟರಿ ಹೆಚ್ಚು ಸಮಯ ಬರುತ್ತಿಲ್ಲವೇ?? ಹಾಗಿದ್ದರೆ ಬೇರೆ ಏನು ಬೇಡ ಈ ಸಿಂಪಲ್ ಟ್ರಿಪ್ಸ್ ಫಾಲೋ ಮಾಡಿ ಸಾಕು.

ನಮಸ್ಕಾರ ಸ್ನೇಹಿತರೇ ಎಲ್ಲರಿಗೂ ತಮ್ಮ ಕೈಯಲ್ಲಿರುವ ಸ್ಮಾರ್ಟ್ ಫೋನ್ ಗಳು ಸ್ಮಾರ್ಟ್ ಆಗಿಯೇ ಕಾರ್ಯನಿರ್ವಹಿಸಬೇಕು ಎಂದಿರುತ್ತೆ. ಸರಿಯಾಗಿ ಎಲ್ಲಾ ಸೇವೆಗಳೂ ಲಭ್ಯವಾಗುವುದರ ಜೊತೆಗೆ ಅದರ ಬ್ಯಾಟರಿ ಬ್ಯಾಕ್ ಅಪ್ ಕೂಡ ಉತ್ತಮವಾಗಿರಬೇಕು ಎಂದು ಬಯಸುತ್ತೇವೆ. ಆದರೆ ಎಷ್ಟೋ ಸಲ ಮೊಬೈಲ್ ಆಗಾಗ ಚಾರ್ಜ್ ಮಾಡಿಯೇ ಸಾಕಾಗುತ್ತದೆ. ಹಾಗಾಗಿ ದೂರದ ಪ್ರಯಾಣ ಕೂಡ ಕಠಿಣವಾಗುತ್ತದೆ. ಹಾಗಾಗಿ ಬ್ಯಾಟರಿ ಸೇವ್ ಮಾಡುವುದಕ್ಕೆ ಕೆಲವು ಟ್ರಿಕ್ಸ್ ಗಳನ್ನು ನಾವಿಲ್ಲಿ ಹೇಳಿಕೊಡ್ತೀವಿ ನೋಡಿ.

ಲೊಕೇಶನ್ ಆಫ್ ಮಾಡಿ: ಸ್ಮಾರ್ಟ್ಫೊನ್ನಲ್ಲಿ ಗೂಗಲ್ ಮ್ಯಾಪ್ ಇರುತ್ತೆ. ಈ ಮೂಲಕ ಣೀವು ಇರುವ ಸ್ಥಳದ ಪರಿಚಯ ತಿಳಿಯಬಹುದು. ಲೊಕೇಶನ್ ಸರ್ವಿಸ್ ಆನ್ ಇದದರೆ ಅದು ಯಾವಾಗಲೂ ಕಾರ್ಯನಿರ್ವಹಿಸುತ್ತಿರುವುದರಿಂದ ಮೊಬೈಲ್ ಚಾರ್ಚ್ ಬೇಗ ಮುಗಿಯುತ್ತೆ. ಇದಕ್ಕೆ ನೀವು ಕೊಕೇಶನ್ ಆಫ್ ಮಾಡಿ ಇಡುವುದು ಒಳ್ಳೆಯದು. ಅಗತ್ಯ ಬಂದಾಗ ಅಂದರೆ ಕ್ಯಾಬ್ ಬುಕ್ ಮಾಡುವ ಸಂದರ್ಭಗಳಲ್ಲಿ ಆಲ್ ಮಾಡಿಕೊಳ್ಳಬಹುದು. ನಿಮ್ಮ ಮೊಬೈಲ್ ಸೆಟ್ಟಿಂಗ್ಸ್ ನಲ್ಲಿ ಮೊಬೈಲ್ ಲೊಕೋಶನ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಆಯ್ಕೆ ಇರುತ್ತವೆ.

ಪವರ್ ಮೋಡ್: ಪವರ್ ಮೋಡ್ ಆನ್ ಇಲ್ಲದಾಗಲೂ ಬ್ಯಾಟರಿ ಬೇಗನೆ ಖಾಲಿಯಾಗುತ್ತೆ. ಕಡಿಮೆ ಪವರ್ ಮೂಡ್ ನ್ನು ಆಯ್ಕೆ ಮಾಡಿಕೊಂಡರೆ ಮೊಬೈಲ್ ನಲ್ಲಿ ಅಗತ್ಯ ಸೇವೆಗಳನು ಹೊರತುಪಡಿಸಿ ಬೇರೆಯಾವ ಸೇವೆಯೂ ಲಭ್ಯವಿರುವುದಿಲ್ಲ. ಉದಾಹರಣೆಗೆ ಫೋನ್ ಕಾಲ್ ಮಾಡಬಹುದು, ಆದರೆ ಡೌನ್ ಲೋಡ್ ಗಳು ಆಗುವುದಿಲ್ಲ. ಇನ್ನು ಡೆ ಟೈಮ್ ನಲ್ಲಿ ಅಂದರೆ ಹಗಲಿನಲ್ಲಿ ಫೋನ್ ಡಿಸ್ ಪ್ಲೇಗಳು ಹೆಚ್ಚು ಪ್ರಕಾಶಮಾನವಾಗಿರುತ್ತವೆ. ಅದನ್ನು ಆಟೋ ಬ್ರೈಟ್ ನೆಲ್ ಗೆ ಹಾಕಿ ಪ್ರಕಾಶವನ್ನು ಕಡಿಮೆ ಮಾಡಿದರೆ ಬ್ಯಾಟರಿ ಹೆಚ್ಚು ಸಮಯ ಬರುವಂತೆ ಮಾಡಬಹುದು. ಫೋನ್ ಸೆಟ್ಟಿಂಗ್‌ ನಲ್ಲಿ Accessibility > Display & text size > Auto-brightness ಗೆ ಹಾಕಿ. ಇನ್ನು ಬಳಸಿರುವ ಆಫ್ ಅಥವಾ ಆಪರೇಟಿಂಗ್ ಸಿಸ್ಟಂ ನ್ನು ಆಗಾಗ ಕ್ಲೀಯರ್ ಮಾಡಬೇಕು. ಇಲ್ಲದಿದ್ದರೆ ಹಿನ್ನೆಯಲ್ಲಿ ಅವು ಕಾರ್ಯನಿರ್ವಹಿಸುವುದರಿಂದ ಬ್ಯಾಟರಿ ಬೇಗ ಮುಗಿಯುತ್ತದೆ. ಇನು ಅಗತ್ಯವಿದ್ದರೆ ಮೊಬೈಲ್ ಡಾಟಾ ಅಥವಾ ವೈಫೈ ಆನ್ ಇಡಬಹುದು ಇಲ್ಲವಾದರೆ ಏರೋಪ್ಲೇನ್ ಮೋಡ್ ನಲ್ಲಿ ಇಟ್ಟರೂ (ಡು ನಾಟ್ ಡಿಸ್ಟರ್ಬ್ ಸಮಯದಲ್ಲಿ) ಬ್ಯಾಟರಿ ಸೇವ್ ಆಗುತ್ತದೆ.

Post Author: Ravi Yadav