ಮಹತ್ವದ ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ ತಂಡದಲ್ಲಿ 2 ಬದಲಾವಣೆ ಮಾಡಿ ಘೋಷಣೆ ಮಾಡಿದ ಆಯ್ಕೆ ಸಮಿತಿ. ರೋಹಿತ್ ಇಲ್ಲದೆ ಆಯ್ಕೆಯಾದವರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿ ರೋಚಕ ಘಟ್ಟಕ್ಕೆ ಸಾಕ್ಷಿಯಾಗುತ್ತಿದೆ. ಕೇಪ್ ಟೌನ್ ಟೆಸ್ಟ್ ನಲ್ಲಿ ಸಮಬಲದ ಹೋರಾಟ ನಡೆಸುತ್ತಿರುವ ತಂಡಗಳು ಗೆಲುವಿಗಾಗಿ ಹೋರಾಡುತ್ತಿದೆ. ಭಾರತ ಈ ಟೆಸ್ಟ್ ಗೆದ್ದರೇ ದಕ್ಷಿಣ ಆಫ್ರಿಕಾದಲ್ಲಿ ಐತಿಹಾಸಿಕ ಸರಣಿಯನ್ನು ಜಯಿಸುತ್ತದೆ. ಈ ಸರಣಿ ಮುಗಿದ ನಂತರ ಜನೇವರಿ 19 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗುತ್ತದೆ. ಈಗಾಗಲೇ ಭಾರತ ತಂಡ ಈಗಾಗಲೇ ತಂಡವನ್ನು ಪ್ರಕಟಿಸಿತ್ತು. ಕನ್ನಡಿಗ ಕೆ.ಎಲ್ ರಾಹುಲ್ ತಂಡದ ನಾಯಕರಾದರೇ, ಉಪನಾಯಕನಾಗಿ ವೇಗಿ ಜಸಪ್ರಿತ್ ಬುಮ್ರಾ ಆಯ್ಕೆಯಾಗಿದ್ದರು. ಆದರೇ ಇಂದು ಸಭೆ ಸೇರಿದ ಆಯ್ಕೆ ಮಂಡಳಿ ತಂಡದಲ್ಲಿ ಎರಡು ಬದಲಾವಣೆ ಮಾಡಿದೆ

ಅನಾರೋಗ್ಯದಿಂದ ಬಳಲುತ್ತಿದ್ದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಇನ್ನು ಏರಡನೇ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಮಹಮದ್ ಸಿರಾಜ್ ರನ್ನ ಏಕದಿನ ತಂಡಕ್ಕೆ ಮೀಸಲು ಆಟಗಾರರ ಪಟ್ಟಿಗೆ ಸೇರಿಸಿದೆ. ಮಹಮದ್ ಸಿರಾಜ್ ಇನ್ನು ಸಹ ಫಿಟ್ ಆಗದ ಕಾರಣ ಅವರನ್ನ ಮೀಸಲು ಆಟಗಾರರ ಪಟ್ಟಿಗೆ ಸೇರಿಸಿದೆ. ಇನ್ನು ಆಲ್ ರೌಂಡರ್ ವಾಷಿಂಗ್ಟನ್ ಬದಲು , ಸದ್ಯ ಟೆಸ್ಟ್ ತಂಡದಲ್ಲಿರುವ ಆಲ್ ರೌಂಡರ್ ಜಯಂತ್ ಯಾದವ್ ರನ್ನ ಆಯ್ಕೆ ಮಾಡಿದೆ. ಸದ್ಯ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಜಯಂತ್ ಅದೇ ಬಯೋ ಬಬಲ್ ನಲ್ಲಿ ಮುಂದುವರೆದು ಏಕದಿನ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಇನ್ನು ವೇಗಿ ಮಹಮದ್ ಸಿರಾಜ್ ಬದಲು ಮತ್ತೊಬ್ಬ ಮೀಸಲು ವೇಗಿಯಾದ ನವದೀಪ್ ಸೈನಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇವರು ಭಾರತ ಎ ತಂಡದ ಪ್ರವಾಸದಿಂದಲೂ ಆಫ್ರಿಕಾದಲ್ಲಿದ್ದು ಸದ್ಯ ಭಾರತ ತಂಡದ ನೆಟ್ ಬೌಲರ್ ಆಗಿದ್ದರು. ಈ ಎರಡು ಬದಲಾವಣೆಗಳಿಂದ ಭಾರತ ತಂಡ ಸಮತೋಲನವಾಗಿದೆ ಎಂದು ಹೇಳಬಹುದು. ಭಾರತ ತಂಡ ಇಂತಿದೆ : ಕೆ.ಎಲ್.ರಾಹುಲ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಆರ್.ಅಶ್ವಿನ್, ಜಯಂತ್ ಯಾದವ್, ಬುಮ್ರಾ, ಯುಜವೇಂದ್ರ ಚಾಹಲ್, ನವದೀಪ್ ಸೈನಿ, ರುತುರಾಜ್ ಗಾಯಕ್ವಾಡ್, ವೆಂಕಟೇಶ್ ಅಯ್ಯರ್.ಶಾರ್ದುಲ್ ಠಾಕೂರ್, ದೀಪಕ್ ಚಾಹರ್.

Post Author: Ravi Yadav