ತನ್ನ ಎಲ್ಲಾ ಅನುಭವದಿಂದ ವಿಶ್ವ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಹನ್ನೊಂದರ ಬಳಗ ರಚಿಸಿದ ಸಚಿನ್, ಆಯ್ಕೆಯಾದ ಹನ್ನೊಂದು ಆಟಗಾರರು ಯಾರ್ಯರು ಗೊತ್ತೇ??

ತನ್ನ ಎಲ್ಲಾ ಅನುಭವದಿಂದ ವಿಶ್ವ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಹನ್ನೊಂದರ ಬಳಗ ರಚಿಸಿದ ಸಚಿನ್, ಆಯ್ಕೆಯಾದ ಹನ್ನೊಂದು ಆಟಗಾರರು ಯಾರ್ಯರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕ್ರಿಕೇಟ್ ನಮ್ಮ ಧರ್ಮ, ಸಚಿನ್ ನಮ್ಮ ದೇವರು ಎಂದು ಕ್ರಿಕೇಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ರವರನ್ನ ಅವರ ಅಭಿಮಾನಿಗಳು ಹಾಡಿ ಹೊಗಳುತ್ತಾರೆ. ಇಂತಹ ದೇವರು, ಲೆಜೆಂಡ್ ಕ್ರಿಕೇಟಿಗ ಸಚಿನ್ ತೆಂಡೂಲ್ಕರ್ ವಿಶ್ವದ ಅತ್ಯುತ್ತಮ ಟಾಪ್ 11 ಕ್ರಿಕೇಟಿಗರ ಹೆಸರನ್ನು ಹೇಳಿದ್ದಾರೆ. ಆದರೇ ಆ ಲಿಸ್ಟ್ ನಲ್ಲಿ ತಮ್ಮ ಹೆಸರನ್ನು ಸೇರಿಸಿಕೊಂಡಿಲ್ಲ. ಅದಲ್ಲದೇ ಸದ್ಯ ಭಾರತದ ಕ್ರಿಕೇಟ್ ದಿಗ್ಗಜರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿಗೂ ಸ್ಥಾನ ನೀಡಿಲ್ಲ.

ಸಚಿನ್ ರಚಿಸಿದ ವಿಶ್ವ ಶ್ರೇಷ್ಠ ಇಲೆವೆನ್ ತಂಡದಲ್ಲಿ 7 ಜನ ಬ್ಯಾಟ್ಸಮನ್ ಗಳು ಹಾಗೂ ನಾಲ್ವರು ಬೌಲರ್ ಗಳು ಸ್ಥಾನ ಪಡೆದಿದ್ದಾರೆ. ಬ್ಯಾಟ್ಸಮನ್ ವಿಭಾಗದಲ್ಲಿ ಮೂವರು ಭಾರತೀಯ ಬ್ಯಾಟ್ಸಮನ್, ಇಬ್ಬರೂ ವೆಸ್ಟ್ ಇಂಡೀಸ್ ಬ್ಯಾಟ್ಸಮನ್ ಗಳು, ಸೌತ್ ಆಫ್ರಿಕಾದ ಒಬ್ಬ ಆಲ್ ರೌಂಡರ್ ಹಾಗೂ ‌ಆಸ್ಟ್ರೇಲಿಯಾದ ಒಬ್ಬ ವಿಕೇಟ್ ಕೀಪರ್ ಬ್ಯಾಟ್ಸಮನ್ ಸ್ಥಾನ ಪಡೆದಿದ್ದಾರೆ.

ಬೌಲರ್ ಗಳಲ್ಲಿ ಒಬ್ಬ ಭಾರತೀಯ ಸ್ಪಿನ್ನರ್ ಹಾಗೂ ಮತ್ತೊಬ್ಬ ಆಸ್ಟ್ರೇಲಿಯಾದ ಸ್ಪಿನ್ನರ್ ಸ್ಥಾನ ಪಡೆದಿದ್ದರೇ, ವೇಗದ ಬೌಲರ್ ಗಳಲ್ಲಿ ಒಬ್ಬ ಆಸ್ಟ್ರೇಲಿಯಾ ಮತ್ತೊಬ್ಬ ಪಾಕಿಸ್ತಾನದ ವೇಗಿ ಸ್ಥಾನ ಪಡೆದಿದ್ದಾರೆ. ಸಚಿನ್ ತಮ್ಮನ್ನ ತಾವು ವಿಶ್ವ ಶ್ರೇಷ್ಠರೆಂದು ಪರಿಗಣಿಸಿಕೊಳ್ಳದಿರುವುದನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ರಚಿಸಿದ ವಿಶ್ವಶ್ರೇಷ್ಠ ತಂಡ ಹೀಗಿದೆ – ವಿರೇಂದ್ರ ಸೆಹ್ವಾಗ್, ಸುನೀಲ್ ಗವಾಸ್ಕರ್, ಬ್ರಿಯಾನ್ ಲಾರಾ, ವಿವಿಯನ್ ರಿಚರ್ಡ್ಸ್, ಜಾಕ್ ಕಾಲೀಸ್, ಸೌರವ್ ಗಂಗೂಲಿ, ಆಡಂ ಗಿಲ್ ಕ್ರಿಸ್ಟ್, ಶೇನ್ ವಾರ್ನ್, ಹರ್ಭಜನ್ ಸಿಂಗ್, ವಾಸಿಂ ಅಕ್ರಂ, ಗ್ಲೆನ್ ಮೆಕ್ ಗ್ರಾಥ್. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.