ನಾನು ಹತ್ತು ಕೆಜಿಎಫ್ ಗೆ ಸಮ ಎಂದು ಬಿಲ್ಡ್ ಅಪ್ ಕೊಟ್ಟಿದ್ದ ಪುಷ್ಪ ಚಿತ್ರವನ್ನು ಅಮೆಜಾನ್ ಪ್ರೈಮ್ ನಲ್ಲಿ ಪ್ರೇಕ್ಷಕರು ನೀಡಿದ ಷಾಕಿಂಗ್ ವಿಮರ್ಶೆ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಪಂಚಭಾಷಾ ಚಿತ್ರವಾಗಿ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರ ಈಗಾಗಲೇ ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಬಾಕ್ಸಾಫೀಸಲ್ಲಿ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನುವುದು ಮೆಚ್ಚಲೇಬೇಕಾದಂತಹ ವಿಚಾರ. ಒಂದು ಲೆಕ್ಕದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಾಹುಬಲಿ ಸರಣಿ ಚಿತ್ರಗಳ ನಂತರ ಪ್ಯಾನ್ ಇಂಡಿಯಾ ಬಿಡುಗಡೆಗೆ ಒಂದು ಒಳ್ಳೆಯ ಪ್ರತಿಕ್ರಿಯೆ ಸಿಕ್ಕಂತಹ ಚಿತ್ರವೆಂದರೆ ಅದು ಕನ್ನಡದ ಹೆಮ್ಮೆಯ ಕೆಜಿಎಫ್ ಚಿತ್ರ.

ಕೆಜಿಎಫ್ ನಂತರ ಈಗ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಮೂರನೇ ಚಿತ್ರವಾಗಿರುವ ಪುಷ್ಪ ಚಿತ್ರದ ಮೊದಲ ಭಾಗ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ನೆಗೆಟಿವ್ ಹಾಗೂ ಪಾಸಿಟಿವ್ ಗಳ ಮಿಶ್ರಪ್ರತಿಕ್ರಿಯೆ ನಂತರವೂ ಕೂಡ ಕಲೆಕ್ಷನ್ ಮಟ್ಟಿಗೆ ದೊಡ್ಡ ಮಟ್ಟದ ಸಾಧನೆಯನ್ನು ಮಾಡಿದೆ. ಚಿತ್ರಮಂದಿರಗಳ ನಂತರ ಈಗ ಅಮೆಜಾನ್ ಪ್ರೈಮ್ ನಲ್ಲಿ ಕೂಡ ಬಿಡುಗಡೆಯಾಗಿ ಪುಷ್ಪ ಚಿತ್ರ ಸದ್ದನ್ನು ಮಾಡುತ್ತಿದೆ. ಆದರೆ ಈಗ ಸಿನಿಮಾ ಥಿಯೇಟರ್ ಗಳಲ್ಲಿ ಚಿತ್ರವನ್ನು ನೋಡದೆ ಇರುವ ಸಿನಿಮಾ ಪ್ರೇಕ್ಷಕರು ಈಗ ಪುಷ್ಪ ಚಿತ್ರವನ್ನು ಅಮೆಜಾನ್ ಪ್ರೈಮ್ ನಲ್ಲಿ ನೋಡಿ ಈಗ ಕೆಲವೊಂದು ಆಶ್ಚರ್ಯಕರ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಹೌದು 10 ಕೆಜಿಎಫ್ ಚಿತ್ರಗಳಿಗೆ ಒಂದು ಪುಷ್ಪ ಚಿತ್ರ ಸಮ ಎಂಬುದಾಗಿ ಕೆಲವು ತೆಲುಗು ಮುಂದೆ ಹೇಳಿದ್ದರು. ಆದರೆ ಚಿತ್ರವನ್ನು ನೋಡಿರುವ ಕನ್ನಡ ಪ್ರೇಕ್ಷಕರು ಈಗ ಪುಷ್ಪ ಚಿತ್ರ ಕೆಜಿಎಫ್ ಚಿತ್ರದ ಕಾಪಿ ಎಂದಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ಕೂಡ ರಾಕಿ ಡಾನ್ ಆಗ ಬಯಸುತ್ತಾನೆ ನಂತರ ಡಾನ್ ಆಗುತ್ತಾನೆ. ಇಲ್ಲೂ ಕೂಡ ಪುಷ್ಪ ಡಾನ್ ಆಗ ಬಯಸಿ ನಂತರ ಕೊನೆಯಲ್ಲಿ ಡಾನ್ ಆಗುತ್ತಾನೆ. ಕೆಜಿಎಫ್ ನಲ್ಲಿ ಚಿನ್ನಕ್ಕಾಗಿ ಸಮರಗಳು ನಡೆದರೆ ಪುಷ್ಪ ಚಿತ್ರದಲ್ಲಿ ರಕ್ತಚಂದನ ಕ್ಕಾಗಿ ಸಮರಗಳು ನಡೆದಿವೆ. ಏನು ಇಲ್ಲದೆ ನಂತರ ಎಲ್ಲವನ್ನು ಹೊಂದುವಂತಹ ಮಹತ್ವಕಾಂಕ್ಷಿಯ ಕಥೆ ಕೆಜಿಎಫ್ ಚಿತ್ರದಲ್ಲಿದೆ. ಪುಷ್ಪ ಚಿತ್ರದಲ್ಲಿ ಕೂಡ ಇದನ್ನೇ ಕಾಪಿ ಮಾಡಲಾಗಿದೆ ಎಂಬುದಾಗಿ ಪ್ರೇಕ್ಷಕರು ಹೇಳುತ್ತಿದ್ದಾರೆ. ನೀವು ಕೂಡ ಪುಷ್ಪ ಚಿತ್ರವನ್ನು ನೋಡಿದ್ದರೆ ನಿಮ್ಮ ಅಭಿಪ್ರಾಯ ಏನೆಂಬುದನ್ನು ಕಾಮೆಂಟ್ ಬಾಕ್ಸಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav