ಹೊಸ ಐಪಿಎಲ್ ತಂಡಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಬಿಸಿಸಿಐ, ಎಲ್ಲವನ್ನು ಪಕ್ಕಕ್ಕೆ ಇಟ್ಟು ಕಾರ್ಯ ಆರಂಭಿಸಿದ ಹೊಸ ತಂಡಗಳು. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ 15ನೇ ಆವೃತ್ತಿಯ ತಯಾರಿಗಳು ತೆರೆಮರೆಯಲ್ಲಿ ಅದ್ದೂರಿಯಾಗಿ ಸಾಗುತ್ತಿದ್ದು ಬಿಸಿಸಿಐ ಕೂಡ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವುದಕ್ಕೆ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ. ಈಗಾಗಲೇ ಹಳೆಯ 8 ತಂಡಗಳು ತಮ್ಮ ರಿಟೈನ್ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಈಗಾಗಲೇ ನೀಡಿದ್ದು ಹೊಸ ತಂಡದ ಆಟಗಾರರ ಆಯ್ಕೆ ಪ್ರಕ್ರಿಯೆ ಇನ್ನೇನುನಡೆಯಬೇಕಷ್ಟೇ. ನಿಮಗೆಲ್ಲರಿಗೂ ತಿಳಿದಿರುವಂತೆ ನಿನ್ನೆಯಷ್ಟೇ ಐಪಿಎಲ್ ನ ಟೈಟಲ್ ಸ್ಪಾನ್ಸರ್ ಸ್ಥಾನಕ್ಕೆ ವಿವೋ ಕಂಪನಿಯನ್ನು ಟಾಟಾ ಸಂಸ್ಥೆ ರಿಪ್ಲೇಸ್ ಮಾಡಿದೆ.

2022 ಹಾಗೂ 2023 ರ ಐಪಿಎಲ್ ಅನ್ನು ಟಾಟಾ ಐಪಿಎಲ್ ಎಂದು ಇನ್ನುಮುಂದೆ ಕರೆಯಲಾಗುತ್ತದೆ. ಖಂಡಿತವಾಗಿಯೂ ಭಾರತೀಯ ಸಂಸ್ಥೆಗಳ ಜಯ ಎಂದು ಮುಲಾಜಿಲ್ಲದೆ ಹೇಳಬಹುದಾಗಿದೆ. ಕೆಲವು ಮೂಲಗಳ ಪ್ರಕಾರ ಮಹಾಮಾರಿಯನ್ನುವುದು ಸರಿಹೋಗದಿದ್ದರೆ ಈ ಬಾರಿಯ ಐಪಿಎಲ್ ಕೂಡ ದುಬೈನಲ್ಲಿ ನಡೆಯುವ ಎಲ್ಲಾ ಸಾಧ್ಯತೆಗಳು ಹೆಚ್ಚಳವಾಗಿದೆ. ಈಗಾಗಲೇ ಮೆಗಾ ಆಕ್ಷನ್ ದಿನಾಂಕ ಹಾಗೂ ಸ್ಥಳ ಕೂಡ ನಿಗದಿಯಾಗಿದ್ದು ಇದೇ ಫೆಬ್ರವರಿ 12 ಹಾಗೂ 13ರಂದು ಉದ್ಯಾನನಗರಿ ಬೆಂಗಳೂರಿನಲ್ಲಿ ನಡೆಯಲಿದೆ.

ಈ ಬೆನ್ನಲ್ಲೇ ಈಗ ಹೊಸ ಫ್ರಾಂಚೈಸಿಗಳಿಗೆ ಬಿಸಿಸಿಐ ಹೊಸ ಗುಡ್ ನ್ಯೂಸ್ ಅನ್ನು ನೀಡಿದೆ. ಹಾಗಿದ್ದರೆ ಆ ಸಂತೋಷದ ಸುದ್ದಿ ಏನೆಂಬುದನ್ನು ನಾವು ತಿಳಿಯೋಣ ಬನ್ನಿ. ಹೊಸ ಫ್ರಾಂಚೈಸಿ ತಂಡಗಳಾಗಿರುವ ಅಹಮದಾಬಾದ್ ಹಾಗೂ ಲಕ್ನೋ ತಂಡಕ್ಕೆ ಬಿಸಿಸಿಐ ತಮ್ಮ ಆಟಗಾರರ ಆಯ್ಕೆ ಪ್ರಕ್ರಿಯೆಯನ್ನು ಮಾಡಲು ಡಿಸೆಂಬರ್ 25ನ್ನು ಕೊನೆಯ ದಿನಾಂಕವನ್ನಾಗಿ ನೀಡಿತ್ತು. ಆದರೆ ಅಹಮದಾಬಾದ್ ತಂಡದ ಮೇಲೆ ಬೆಟ್ಟಿಂಗ್ ಕಂಪನಿಯ ಜೊತೆಗಿನ ಸಹಭಾಗಿತ್ವದ ಪ್ರಕರಣ ನಡೆಯುತ್ತಿದ್ದು ಈಗ ಅದು ಖುಲಾಸೆಯಾಗಿದೆ ಮತ್ತೊಮ್ಮೆ ಬಿಸಿಸಿಐ ಜನವರಿ 31 ಕೊನೆಯ ದಿನಾಂಕ ವನ್ನಾಗಿ ಹೊಸ ತಂಡಗಳಿಗೆ ನೀಡಿದೆ. ಲಕ್ನೋ ತಂಡ ಈಗಾಗಲೇ ಕೋಚ್ ಹಾಗೂ ಮೆಂಟರ್ ಗಳನ್ನು ಕೂಡ ಘೋಷಣೆ ಮಾಡಿದ್ದು ಎರಡು ತಂಡಗಳು ಕೂಡ ಜನವರಿ 31ರವರೆಗೆ ತಮ್ಮ ಆಟಗಾರರ ಆಯ್ಕೆಪಟ್ಟಿಯನ್ನು ನೀಡಲಿವೆ.

Post Author: Ravi Yadav