ಇದಪ್ಪ ಅದೃಷ್ಟ ಅಂದ್ರೆ, ಪುಷ್ಪ ಸಿನಿಮಾ ಯಶಸ್ಸು ಪಡೆದ ಕೂಡಲೇ ವರಸೆ ಬದಲಾಯಿಸಿದ ರಶ್ಮಿಕಾ, ಆದರೂ ಸರಿ ಎಂದ ಚಿತ್ರತಂಡ. ವಿಷಯ ಏನ್ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ನಾಯಕಿಯರ ಸಾಲಿನಲ್ಲಿ ಚಿನ್ನದ ಕೋಳಿ ಎಂದರೆ ಖಂಡಿತವಾಗಿ ರಶ್ಮಿಕಾ ಮಂದಣ್ಣ ಅವರ ಹೆಸರನ್ನು ಹೇಳಬಹುದಾಗಿದೆ. ಹೌದು ರಶ್ಮಿಕಾ ಮಂದಣ್ಣ ಅವರು ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತೆ ಭಾಸವಾಗುತ್ತಿದೆ. ಇತ್ತೀಚಿಗಂತೂ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಬ್ಯಾಕ್ ಟು ಬ್ಯಾಕ್ ಒಂದಾದ ಮೇಲೊಂದರಂತೆ ರಶ್ಮಿಕ ಮಂದಣ್ಣ ನಟಿಸಿರುವ ಎಲ್ಲ ಚಿತ್ರಗಳು ಕೂಡ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಾಣುತ್ತಿದೆ.

ಅದಕ್ಕಾಗಿ ನಿರ್ಮಾಪಕ ಹಾಗೂ ನಿರ್ದೇಶಕರ ಮೊದಲ ಆಯ್ಕೆಯಾಗಿ ರಶ್ಮಿಕ ಮಂದಣ್ಣ ನವರು ಕಾಣಿಸುತ್ತಾರೆ. ಕೇವಲ ಕನ್ನಡ ಹಾಗೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ರಶ್ಮಿಕ ಮಂದಣ್ಣ ಅವರ ಅಭಿಮಾನಿಗಳ ಸಂಖ್ಯೆ ಜಾಸ್ತಿಯಾಗಿದೆ. ಇಂದಿನ ದಿನಗಳಲ್ಲಿ ಹೀರೋಯಿನ್ ಕೂಡ ಬಾಕ್ಸಾಫೀಸ್ ಕಲೆಕ್ಷನ್ ಮಾಡಲು ಕಾರಣರಾಗುತ್ತಾರೆ ಎಂದರೆ ಅದು ರಶ್ಮಿಕ ಮಂದಣ್ಣ ಅವರನ್ನು ನೋಡಿ ಹೇಳಿರಬಹುದು ಎಂದುಕೊಳ್ಳಬಹುದಾಗಿದೆ. ಇತ್ತಿಚಿಗಷ್ಟೇ ರಶ್ಮಿಕ ಮಂದಣ್ಣ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಪುಷ್ಪ ಚಿತ್ರ ಭಾರತ ಚಿತ್ರರಂಗದಾದ್ಯಂತ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದು 300 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ. ಪುಷ್ಪ ಚಿತ್ರದ ಎರಡನೇ ಭಾಗದ ಚಿತ್ರೀಕರಣ ಕೂಡ ಅತಿಶೀಘ್ರದಲ್ಲಿ ಪ್ರಾರಂಭವಾಗುವುದಾಗಿ ಅಲ್ಲು ಅರ್ಜುನ್ ರವರು ಹೇಳಿಕೊಂಡಿದ್ದಾರೆ. ಪುಷ್ಪ ಚಿತ್ರದ ಯಶಸ್ಸಿನ ಬೆನ್ನಲ್ಲೇ ರಶ್ಮಿಕ ಮಂದಣ್ಣ ನವರು ತಮ್ಮ ವರಸೆಯನ್ನು ಬದಲಾಯಿಸಿದ್ದಾರೆ.

ನಿಮಗೆಲ್ಲ ಗೊತ್ತಿರೋ ಹಾಗೆ ಚಿತ್ರ ಯಶಸ್ಸು ಪಡೆದ ನಂತರ ಆ ಚಿತ್ರದ ಕಲಾವಿದರು ತಮ್ಮ ಸಂಭಾವನೆಯನ್ನು ಹೆಚ್ಚು ಮಾಡಿಕೊಳ್ಳುವುದು ಸರ್ವೇಸಾಮಾನ್ಯ. ಇದೇ ಮಾದರಿಯಲ್ಲಿ ರಶ್ಮಿಕ ಮಂದಣ್ಣ ನವರು ಪುಷ್ಪ ಚಿತ್ರದ ಮೊದಲ ಭಾಗಕ್ಕಾಗಿ 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಅದರ ಅದ್ಭುತವಾದ ಯಶಸ್ಸಿನ ಜೊತೆಗೆ ಈಗ ಎರಡನೇ ಭಾಗಕ್ಕಾಗಿ ರಶ್ಮಿಕ ಮಂದಣ್ಣ ನವರು ಮೂರು ಕೋಟಿ ರೂಪಾಯಿ ಸಂಭಾವನೆಯಾಗಿ ಬೇಡಿಕೆಯಿಟ್ಟಿದ್ದಾರೆ. ಚಿತ್ರದ ಯಶಸ್ಸಿನಲ್ಲಿ ಅವರ ಪಾತ್ರವು ಕೂಡ ಮಹತ್ವವಾಗಿ ಇರುವುದರಿಂದಾಗಿ ಅವರು ಕೇಳಿರುವ ಸಂಭಾವನೆ ನ್ಯಾಯಸಮ್ಮತವಾದದ್ದು ಎಂದು ಹೇಳಬಹುದಾಗಿದೆ.

Post Author: Ravi Yadav