10ನೇ ತರಗತಿ ಪಾಸಾದವರಿಗೆ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಸಿಗಲಿದೆ, ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕೆಲಸ ಹೊಂದುವುದು ಎಷ್ಟರಮಟ್ಟಿಗೆ ಮಹತ್ವವನ್ನು ವಹಿಸಿದೆ ಎಂಬುದು ನಿಮಗೆಲ್ಲರಿಗೂ ಕೂಡ ತಿಳಿದಿದೆ. ಇನ್ನು ಕೆಲವರು ನಾವು ಓದಿರುವುದೇ ಕಡಿಮೆ ಪದವಿ ಓದಿದವರಿಗೆ ಕೆಲಸ ಸಿಗುವುದಿಲ್ಲ ಇನ್ನು ನಮಗೆ ಎಲ್ಲಿ ಕೆಲಸ ಸಿಗುತ್ತದೆ ಎಂಬುದಾಗಿ ಯೋಚಿಸಿರುತ್ತಾರೆ. ಆದರೆ ಇಲ್ಲಿನ ಲೇಖನಿಯಲ್ಲಿ ನಾವು ನಿಮ್ಮ ಸ್ಥಳೀಯ ಗ್ರಾಮ ಪಂಚಾಯತ್ ನಲ್ಲಿ ನಿಮಗೆ ದೊರೆಯಬಹುದಾದ ದಂತಹ ಕೆಲಸದ ಕುರಿತಂತೆ ಹೇಳಲು ಹೊರಟಿದ್ದೇವೆ.

ಒಂದು ವೇಳೆ ನೀವು ಕೆಲಸದ ಹುಡುಕಾಟದಲ್ಲಿದ್ದರೆ ಖಂಡಿತವಾಗಿಯೂ ನಾವು ಇಂದು ಹೇಳಹೊರಟಿರುವ ವಿಚಾರವನ್ನು ತಪ್ಪದೆ ಪ್ರಯತ್ನಪಡಿ ನಿಮಗೂ ಕೂಡ ಕೆಲಸ ಸಿಗಬಹುದಾದ ಅಂತಹ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಒಂದು ವೇಳೆ ನೀವು ಹತ್ತನೆ ತರಗತಿ ಪಾಸ್ ಆಗಿದ್ದರೆ ನಿಮಗೆ ಕೆಲಸ ಸಿಗಬಹುದಾದಂತಹ ಅವಕಾಶಗಳಿವೆ. ಹತ್ತನೇ ತರಗತಿ ಪಾಸ್ ಆದಂತಹ ಅಭ್ಯರ್ಥಿಗಳಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಸಹಾಯಕ ಹುದ್ದೆಗಳಿಗಾಗಿ ಆಹ್ವಾನಿಸಲಾಗಿದೆ. ಇನ್ನು ಈ ಕೆಲಸ ಸಿಗುವುದು ನಿಮ್ಮ ವಿದ್ಯಾರ್ಹತೆಯ ಅಂದರೆ ಅತಿ ಹೆಚ್ಚು ಅಂಕಗಳನ್ನು ಪಡೆದವರ ಕ್ರಮಾನುಸಾರ ದಲ್ಲಿ. ಇದಕ್ಕಾಗಿ ನೀವು ಯಾವುದೇ ಹಣವನ್ನು ನೀಡುವ ಅಗತ್ಯವಿಲ್ಲ. ಇನ್ನು ಈ ಕೆಲಸವನ್ನು ಪಡೆಯಲು ಬೇಕಾಗಿರುವ ಅರ್ಹತೆಗಳು ಹಾಗೂ ದಾಖಲೆಗಳು ಯಾವುವು ಎಂಬುದನ್ನು ತಿಳಿಸುತ್ತೇವೆ ಬನ್ನಿ.

ನೀವು 18ರಿಂದ 33 ವರ್ಷದ ಒಳಗಿನವರು ಆಗಿರಬೇಕು. ಆದಷ್ಟು ನಿಮಗೆ ಕೆಲಸವು ಸಿಗೋದಕ್ಕೆ ಸಾಧ್ಯ. ಹುದ್ದೆ ಖಾಲಿ ಇರುವ ಗ್ರಾಮ ಪಂಚಾಯಿತಿಗಳಿಗೆ ಹೋಗಿ ಅರ್ಜಿಯನ್ನು ತೆಗೆದುಕೊಂಡು ಬೇಕಾಗಿರುವ ವಿವರಗಳನ್ನು ಭರ್ತಿ ಮಾಡಿ ನೀಡಬೇಕಾಗಿದೆ. ಇದರ ಜೊತೆಗೆ ಇತ್ತೀಚಿನ ಭಾವಚಿತ್ರ ಎಸೆಸೆಲ್ಸಿ ಮಾರ್ಕ್ಸ್ ಕಾರ್ಡ್ ಟಿಸಿ ಮೀಸಲಾತಿ ಪ್ರಮಾಣ ಪತ್ರ ಸ್ಥಳೀಯ ದೃಢೀಕರಣ ಪತ್ರ ಈ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನೀವು ನೀಡಿರುವ ದಾಖಲೆಗಳನ್ನು ಪರಿಶೀಲಿಸಿ ವಿದ್ಯಾರ್ಹತೆ ಚೆನ್ನಾಗಿ ಇರುವವರಿಗೆ ಕೆಲಸ ನೀಡಲಾಗುತ್ತದೆ. ತಪ್ಪದೇ ನೀವು ಕೂಡ ಕೆಲಸದ ಅಗತ್ಯವಿದ್ದರೆ ಈ ಕ್ರಮವನ್ನು ಅನುಸರಿಸಿ ಕೆಲಸಕ್ಕಾಗಿ ಪ್ರಯತ್ನ ಪಡಬಹುದಾಗಿದೆ.

Post Author: Ravi Yadav