ನಿಮ್ಮ ಪತ್ನಿಗೆ ತಿಂಗಳಿಗೆ 45 ಸಾವಿರ ರೂಪಾಯಿ ಸಿಗಬೇಕು ಎಂದರೆ ಈ ಕೂಡಲೇ ಈ ಸ್ಕೀಮಿನಲ್ಲಿ ಖಾತೆ ತೆರೆಯಿರಿ. ಪ್ರತಿಯೊಬ್ಬರೂ ಮಾಡಿಸಲೇಬೇಕಾದ ಸ್ಕೀಮ್ ಯಾವುದು ಗೊತ್ತೇ?

ನಿಮ್ಮ ಪತ್ನಿಗೆ ತಿಂಗಳಿಗೆ 45 ಸಾವಿರ ರೂಪಾಯಿ ಸಿಗಬೇಕು ಎಂದರೆ ಈ ಕೂಡಲೇ ಈ ಸ್ಕೀಮಿನಲ್ಲಿ ಖಾತೆ ತೆರೆಯಿರಿ. ಪ್ರತಿಯೊಬ್ಬರೂ ಮಾಡಿಸಲೇಬೇಕಾದ ಸ್ಕೀಮ್ ಯಾವುದು ಗೊತ್ತೇ?

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ಪುರುಷನಿಗೂ ಕೂಡ ಆತನ ಬಳಿ ಅಥವಾ ಆತನ ಪತ್ನಿಯ ಬಳಿ ಹೇರಳವಾಗಿ ಧನರಾಶಿ ಇರಬೇಕೆಂಬ ಆಸೆ ಇರುತ್ತದೆ. ಹೀಗಾಗಿ ಇಂದಿನ ವಿಚಾರದಲ್ಲಿ ಇದಕ್ಕೆ ಪೂರಕವಾಗುವಂತೆ ಒಂದು ಸ್ಕೀಮ್ ಇದೆ ಅದರ ಬಗ್ಗೆ ಹೇಳಲು ಹೊರಟಿದ್ದೇವೆ. ಇದರಲ್ಲಿ ಹೆಚ್ಚಿನ ಅಪಾಯವು ಕೂಡ ಇಲ್ಲ. ಇಷ್ಟು ಮಾತ್ರವಲ್ಲದೆ ಇದು ನಿಮ್ಮ ಹೆಂಡತಿಯ ಖಾತೆಗೆ ಪ್ರತಿ ತಿಂಗಳು 45 ಸಾವಿರ ರೂಪಾಯಿ ಆಸುಪಾಸು ನೀಡುತ್ತದೆ. ಹಾಗಿದ್ದರೆ ಈ ಸ್ಕೀಮ್ ಯಾವುದು ಏನು ಎತ್ತ ಎಂಬುದರ ಕುರಿತಂತೆ ನಿಮಗೆ ಸವಿವರವಾಗಿ ಮಾಹಿತಿಯನ್ನು ನೀಡುತ್ತೇವೆ ಲೇಖನಿಯನ್ನು ತಪ್ಪದೆ ಕೊನೆಯವರೆಗೂ ಓದಿ.

ರಾಷ್ಟ್ರೀಯ ಪೆನ್ಷನ್ ಪ್ರಣಾಳಿ ಎನ್ನುವುದು ಸ್ವೆಚ್ಚ್ಛಿಕ ಸೇವಾ ನಿವೃತ್ತಿ ಉಳಿತಾಯ ಯೋಜನೆ ಆಗಿದೆ. ಯೋಜನೆಯನ್ನು ವುದು ಜನರಿಗೆ ಭವಿಷ್ಯದಲ್ಲಿ ಸಾಕಷ್ಟು ಉತ್ತಮ ಲಾಭಗಳನ್ನು ತಂದುಕೊಡುತ್ತದೆ. ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಒಂದು ವೇಳೆ ಈ ಖಾತೆಯನ್ನು ನೀವು ನಿಮ್ಮ ಹೆಂಡತಿಯ ಹೆಸರಿನಲ್ಲಿ ತೆರೆಯಬೇಕೆಂದು ಅಂದುಕೊಂಡಿದ್ದರೆ ನಿಮ್ಮ ಸಮೀಪದಲ್ಲಿರುವ ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನಲ್ಲಿ ತೆರೆಯಬಹುದಾಗಿದೆ.

ಈ ಸ್ಕೀಮ್ ನಲ್ಲಿ ನೀವು ಪ್ರತಿ ತಿಂಗಳು ಅಥವಾ ವಾರ್ಷಿಕವಾಗಿ ಹಣವನ್ನು ಜಮೆ ಮಾಡುತ್ತ ಬಂದರೆ ನಿಮಗೆ ಇದರ ರಿಟರ್ನ್ ಸಿಗುತ್ತದೆ. ಕಡಿಮೆ ಜಮೆ ಮಾಡಿದರೆ ಕಡಿಮೆ ಹಣ ನಿಮಗೆ ಸಿಗುತ್ತದೆ. ಒಂದು ವೇಳೆ ಪ್ರತಿ ತಿಂಗಳು 5000 ರೂಪಾಯಿ ಇದರಲ್ಲಿ ನೀವು ಜಮೆ ಮಾಡುತ್ತಾ ಬಂದರೆ ನಿಮ್ಮ ಪತ್ನಿ 60 ವರ್ಷವಾದ ಮೇಲೆ ಸಾಕಷ್ಟು ದೊಡ್ಡಮಟ್ಟದ ರಿಟರ್ನ್ಸ್ ಅನ್ನು ಪಡೆಯುವುದು ಮಾತ್ರವಲ್ಲದೆ ತಿಂಗಳಿಗೆ ಪೆನ್ಷನ್ ಕೂಡ ಸಿಗಲಿದೆ.

ಒಂದು ವೇಳೆ ನಿಮ್ಮ ಪತ್ನಿ ಈಗ 30 ವರ್ಷದವರಾಗಿದ್ದರೆ ನೀವು ಪ್ರತಿ ತಿಂಗಳು 5 ಸಾವಿರ ರೂಪಾಯಿ ಜಮೆ ಮಾಡುತ್ತಾ ಬಂದರೆ, ಪ್ರತಿವರ್ಷ 10% ರಿಟರ್ನ್ಸ್ ನಿಮಗೆ ಸಿಗುತ್ತದೆ. ಹೀಗೆ ನೀವು ನಿಮ್ಮ ಪತ್ನಿಯ 60 ವರ್ಷದವರೆಗೆ ಇನ್ವೆಸ್ಟ್ ಮಾಡುತ್ತ ಬಂದರೆ ಅದು ಟೋಟಲ್ 1 ಕೋಟಿಯ 12 ಲಕ್ಷ ರೂಪಾಯಿ ಆಗುತ್ತದೆ. ಇದಲ್ಲದೆ ಅವರಿಗೆ ಬರೋಬ್ಬರಿ 45 ಲಕ್ಷ ರೂಪಾಯಿವರೆಗೆ ಸಿಗುತ್ತದೆ. ಇಷ್ಟು ಮಾತ್ರವಲ್ಲದೆ ಪ್ರತಿ ತಿಂಗಳು 44793 ರೂಪಾಯಿ ಸಿಗುತ್ತದೆ. ಇದರ ಇನ್ನೊಂದು ವಿಶೇಷತೆ ಏನೆಂದರೆ ಈ ಪೆನ್ಷನ್ ಹಣ ಎನ್ನುವುದು ಅವರ ಜೀವನದ ಕೊನೆಯವರೆಗೂ ಕೂಡ ಪ್ರತಿ ತಿಂಗಳು ಸಿಗುತ್ತದೆ.

ಈ ಸ್ಕೀಮ್ ನಲ್ಲಿ ನಿಮ್ಮ ಅವಶ್ಯಕತೆಗೆ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಸಾವಿರ ರೂಪಾಯಿ ಇಂದಲೂ ಕೂಡ ಖಾತೆಯನ್ನು ತೆರೆಯಬಹುದಾಗಿದೆ. ಇದು ಅರವತ್ತು ವರ್ಷದ ನಂತರ ಮೆಚೂರು ಆಗಲಿದೆ. ಒಂದು ವೇಳೆ ಇಷ್ಟವಿದ್ದರೂ ಐದು ವರ್ಷದ ಕಾಲ ಕೂಡ ಈ ಸ್ಕೀಮನ್ನು ನೀವು ನಡೆಸಬಹುದಾಗಿದೆ.

ಈ ಸ್ಕೀಮ್ ಎನ್ನುವುದು ಕೇಂದ್ರ ಸರ್ಕಾರವು ಜನರ ಸುರಕ್ಷತೆಗೆ ಮಾಡಿರುವಂತಹ ಯೋಜನೆ ಆಗಿದೆ. ಹೀಗಾಗಿ ಈ ಯೋಜನೆಯಲ್ಲಿ ಇನ್ವೆಸ್ ಮಾಡಿರುವ ಹಣ ಖಂಡಿತವಾಗಿಯೂ ಸೇಫ್ ಆಗಿರುತ್ತದೆ. ಮತ್ತು ಪ್ರತಿವರ್ಷ ಹತ್ತರಿಂದ 11% ದವರೆಗೆ ನಿಮಗೆ ರಿಟರ್ನ್ ಸಿಗಲಿದೆ. ಹೀಗಾಗಿ ನಿಮ್ಮ ರಿಟೈರ್ಮೆಂಟ್ ಲೈಫ್ ಗಾಗಿ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದರೆ ಖಂಡಿತವಾಗಿಯೂ ಸ್ವಾವಲಂಬಿ ಜೀವನವನ್ನು ಅರವತ್ತು ವರ್ಷದ ನಂತರವೂ ನಡೆಸಬಹುದಾಗಿದೆ.