ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದ ಜಿಯೋ, ನೂರು ರೂಪಾಯಿಗೂ ಕಡಿಮೆಗೆ ಇಂಟರ್ನೆಟ್ ಜೊತೆಗೆ ಅನಿಯಮಿತ ಕರೆ. ಹೇಗಿದೆ ಗೊತ್ತಾ ಯೋಜನೆ??

ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದ ಜಿಯೋ, ನೂರು ರೂಪಾಯಿಗೂ ಕಡಿಮೆಗೆ ಇಂಟರ್ನೆಟ್ ಜೊತೆಗೆ ಅನಿಯಮಿತ ಕರೆ. ಹೇಗಿದೆ ಗೊತ್ತಾ ಯೋಜನೆ??

ನಮಸ್ಕಾರ ಸ್ನೇಹಿತರೇ ರಿಲಯನ್ಸ್ ಜಿಯೋ ಇಂದು ದೇಶದ ನಂಬರ್ ಒನ್ ಖಾಸಗಿ ಟೆಲಿಕಾಂ ಕಂಪನಿಯಾಗಿದೆ ಹೊರಹೊಮ್ಮಿದೆ. ಜಿಯೋ ಮೂಲಕ ಇತರ ಎಲ್ಲಾ ಟೆಲಿಕಾಂ ಗಳಿಗಿಂತಲೂ ಅತೀ ಅಗ್ಗದಲ್ಲಿ ಪ್ರಿಪೇಯ್ಡ್ ಮತ್ತು ಪೋಸ್ಪೇಯ್ಡ್ ಯೋಜನೆಗಳನ್ನು ಪರಿಚಯಿಸಿತ್ತು. ಇದೀಗ ಮತ್ತಷ್ಟು ಹೊಸ ಯೋಜನೆಗಳೊಂದಿಗೆ ಬಳಕೆದಾರರಿಗೆ ಇನ್ನೂ ಹೆಚ್ಚಿನ ಪ್ರಯೋಜನಕಾರಿಯಾಗಲಿದೆ ಜಿಯೋ. ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದ್ದು, ಇದರಲ್ಲಿ ಬಳಕೆದಾರರು ಅನಿಯಮಿತ ಕರೆ, ದೈನಂದಿನ ಡೇಟಾ ಮತ್ತು ಎಸ್ ಎಂ ಎಸ್, ಓ ಟಿ ಟಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅದೂ 100 ರೂ ಕ್ಕಿಂತ ಕಡಿಮೆ ಪ್ಲಾನ್ ನಲ್ಲಿ!

ಹೌದು, ಈ ಪ್ರಿಪೇಯ್ಡ್ ಪ್ಲಾನ್ ಕೇವಲ 75 ರೂ. ಗಳಿಮ್ದ ಆರಂಭವಾಗಿತ್ತದೆ. 23 ದಿನಗಳವರೆಗೆ ಈ ಪ್ರಯೋಜನ ಪಡೆಯಬಹುದು. ೭೫ರೂ ರೀಚಾರ್ಜ್ ನಿಂದ ಬಳಕೆದಾರರು ಪ್ರತಿದಿನ 0.1GB ಅಥವಾ 100MB ಇಂಟರ್ನೆಟ್ ಜೊತೆಗೆ 200MB ಹೆಚ್ಚುವರಿ ಡೇಟಾವನ್ನು ನೀಡಲಾಗುತ್ತದೆ. ಅಂದರೆ 2.5GB ಇಂಟರ್ನೆಟ್ ಲಭ್ಯವಿದೆ. ನಿಮ್ಮ ದೈನಂದಿನ ಡೇಟಾ ಮಿತಿಯು ಮುಗಿದಿದ್ದರೂ, ನೀವು ಅನಿಯಮಿತ ಇಂಟರ್ನೆಟ್ ಬಳಸಬಹುದು. ಆದರೆ ವೇಗವು 64Kbps ನಷ್ಟೇ ದೊರೆಯುತ್ತದೆ. ಅನಿಯಮಿತ ಕರೆ, 50 SMS ಕೂಡ ಈ ಯೋಜನೆ ಒಳಗೊಂಡಿದೆ.

91 ರೂ. ಪ್ರಿಪೇಯ್ಡ್ ಯೋಜನೆ: ಇದರ ಅವಧಿ 28 ದಿನಗಳು. ಈ ಯೋಜನೆಯಲ್ಲಿ, 0.1GB ಮತ್ತು 200MB ಹೆಚ್ಚಿನ ಡೇಟಾವನ್ನು ನೀಡುತ್ತದೆ. ಅಂದರೆ ಈ ಯೋಜನೆಯಲ್ಲಿ ನಿಮಗೆ ಒಟ್ಟು 3GB ಡೇಟಾ ದೊರೆಯುತ್ತದೆ. ನಿಮ್ಮ ದೈನಂದಿನ ಡೇಟಾ ಖಾಲಿಯಾಗಿದ್ದರೂ ಇಂಟರ್ ನೆಟ್ ಮುಂದುವರೆಯಲಿದ್ದು ವೇಗ 64Kbps ನಷ್ಟಿರುತ್ತದೆ. ಇನ್ನು ನೀವು ಯಾವುದೇ ನೆಟ್ವರ್ಕ್ ನಲ್ಲಿ ಅನಿಯಮಿತ ಕರೆ, 50 ಎಸ್ಎಂಎಸ್ ಮತ್ತು ಜಿಯೋ ಕ್ಲೌಡ್, ಜಿಯೋ ಸಿನಿಮಾ ಮತ್ತು ಜಿಯೋ ಮ್ಯೂಸಿಕ್ ಗಳಂಥ ಜಿಯೋ ಅಪ್ಲಿಕೇಶನ್ ಗಳ ಚಂದಾದಾರಿಕೆಯನ್ನು ಪಡೆಯಬಹುದು. ಈ ಎರಡೂ ಕೈಗೆಟುಕುವ ಬೆಲೆಯ ಯೋಜನೆಗಳನ್ನು ಪಡೆದುಕೊಳ್ಳಲು ನಿಮ್ಮ ಬಳಿ ಜಿಯೋ ಸಿಮ್ ಇದ್ದರಷ್ಟೇ ಸಾಲದು ಜಿಯೋ ಫೋನ್ ಇರಬೇಕು. ಈ ಯೋಜನೆಗಳು ಜಿಯೋ ಫೋನ್ ಗಲ್ಲಿ ಹಾಕವಾಗುವ ಸಿಮ್ ರೀಚಾರ್ಜ್ ಯೋಜನೆಯಾಗಿವೆ.