ಮತ್ತೆ ಕುಸಿದ ಚಿನ್ನ, ಚಿನ್ನ ಬೆಲೆಯಲ್ಲಿ ಮತ್ತೊಮ್ಮೆ ಉತ್ತಮ ಇಳಿಕೆ. ಚಿನ್ನ ಖರೀದಿಗೆ ಸೂಕ್ತ ಸಮಯ ಎಂದ ತಜ್ಞರು. ಚಿನ್ನದ ಬೆಲೆ ಎಷ್ಟಿದೆ ಗೊತ್ತೇ?

ಮತ್ತೆ ಕುಸಿದ ಚಿನ್ನ, ಚಿನ್ನ ಬೆಲೆಯಲ್ಲಿ ಮತ್ತೊಮ್ಮೆ ಉತ್ತಮ ಇಳಿಕೆ. ಚಿನ್ನ ಖರೀದಿಗೆ ಸೂಕ್ತ ಸಮಯ ಎಂದ ತಜ್ಞರು. ಚಿನ್ನದ ಬೆಲೆ ಎಷ್ಟಿದೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶ ಚಿನ್ನ ಖರೀದಿಯಲ್ಲಿ ಇಡೀ ವಿಶ್ವದಲ್ಲಿ ಮುಂದಿರುವ ದೇಶ ಎಂಬುದು ಸರ್ವೆಯಿಂದ ನಿಮಗೆಲ್ಲ ತಿಳಿದಿದೆ. ಅದರಲ್ಲು ನಮ್ಮ ದೇಶದ ಹೆಣ್ಣುಮಕ್ಕಳು ಚಿನ್ನ ಖರೀದಿಯಲ್ಲಿ ಸಾಕಷ್ಟು ಮುಂದಿದ್ದಾರೆ. ಚಿನ್ನ ಖರೀದಿಯಲ್ಲಿ ಮಾತ್ರವಾಗದೆ ಹೂಡಿಕೆಯಲ್ಲಿ ಕೂಡ ಬಳಕೆಯಾಗುತ್ತದೆ. ಕೆಲವರು ತಮ್ಮ ಶೃಂಗಾರಕ್ಕಾಗಿ ಚಿನ್ನಾಭರಣಗಳನ್ನು ಖರೀದಿಸಿದರೆ, ಇನ್ನು ಕೆಲವರು ತಮ್ಮ ಆಪತ್ಕಾಲದಲ್ಲಿ ಅಡವಿಟ್ಟು ಅದರಿಂದ ಹಣವನ್ನು ಪಡೆಯಲು ಚಿನ್ನವನ್ನು ಇಟ್ಟುಕೊಂಡಿರುತ್ತಾರೆ.

ಇನ್ನು ಕೆಲವರು ಚಿನ್ನದಲ್ಲಿ ಹೂಡಿಕೆಯನ್ನು ಮಾಡಿ ಅದರಿಂದ ಒಳ್ಳೆಯ ಲಾಭವನ್ನು ಪಡೆಯುತ್ತಾರೆ. ಚಿನ್ನಾಭರಣಗಳನ್ನು ವಿಶೇಷವಾದ ಸಂದರ್ಭದಲ್ಲಿ ನಾವು ಖರೀದಿಸುತ್ತೇವೆ. ಆದರೆ ವರ್ಷದಲ್ಲಿ ಒಂದು ವಿಶೇಷ ದಿನಕ್ಕೆ ನಾವು ಕಾಯುತ್ತಿರುವುದು ಸಾಧ್ಯವಿಲ್ಲ. ಹೀಗಾಗಿ ಯಾವಾಗೆಲ್ಲಾ ಚಿನ್ನದ ದರ ಕಡಿಮೆಯಾಗುತ್ತದೆಯೋ ಅವಾಗ ಚಿನ್ನವನ್ನು ಖರೀದಿಸಲು ಎಲ್ಲರೂ ಇಷ್ಟಪಡುತ್ತಾರೆ. ಕಳೆದ ಒಂದು ವಾರಗಳಿಂದ ಚಿನ್ನದ ದರದಲ್ಲಿ ಸಾಕಷ್ಟು ಏರಿಳಿತಗಳು ಕಂಡುಬರುತ್ತಿದ್ದವು. ಹೀಗಾಗಿ ಚಿನ್ನವನ್ನು ಖರೀದಿಸಲು ಯೋಜನೆ ಹಾಕಿಕೊಂಡಿದ್ದರು ಚಿನ್ನದ ಖರೀದಿಗಾಗಿ ಒಂದೊಳ್ಳೆ ದಿನದ ಕಾಯುವಿಕೆಯಲ್ಲಿ ಇದ್ದರು. ಈಗ ಒಂದು ಲೆಕ್ಕದಲ್ಲಿ ಹೇಳುವುದಾದರೆ ಚಿನ್ನ ಖರೀದಿ ಮಾಡುವವರಿಗೆ ಒಳ್ಳೆಯ ದಿನ ಅವರಿಗೆ ಒದಗಿ ಬಂದಿದೆ.

ಹೌದು ಗೆಳೆಯರೇ ಇಂದಿನ ಚಿನ್ನದ ದರದಲ್ಲಿ ಒಳ್ಳೆಯ ಮಟ್ಟದ ಇಳಿಕೆ ಕಂಡು ಬಂದಿದ್ದು ಚಿನ್ನ ಖರೀದಿ ಮಾಡುವವರಿಗೆ ಪ್ರಶಸ್ತವಾದ ದಿನ ಹಾಗೂ ದರ ಎಂದು ಹೇಳಬಹುದಾಗಿದೆ. ಭಾರತ ದೇಶದಾದ್ಯಂತ ಪ್ರಮುಖ ನಗರಗಳಲ್ಲಿ ಚಿನ್ನದ ದರ ಇಳಿಕೆಯಾಗಿದ್ದು ನಾವು ಬೆಂಗಳೂರಿನ ದರದ ಕುರಿತಂತೆ ಹೇಳಲು ಹೊರಟಿದ್ದೇವೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 49040 ರೂಪಾಯಿ ಆಗಿದೆ. ಇನ್ನು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 44950 ರೂಪಾಯಿ ಆಗಿದೆ. ಈ ಬೆಲೆ ಕರ್ನಾಟಕದ ಇನ್ನೆರಡು ಪ್ರಮುಖ ಸ್ಥಳಗಳಾದ ಮೈಸೂರು ಹಾಗೂ ಮಂಗಳೂರಿನಲ್ಲಿ ಕೂಡ ಸಮನಾಗಿದೆ. ಹೀಗಾಗಿ ಚಿನ್ನದ ಖರೀದಿ ಮಾಡುವವರಿಗೆ ಇದೊಂದು ಪ್ರಶಸ್ತವಾದ ದಿನ ಎಂದು ಹೇಳಬಹುದು.