ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಆರ್ಸಿಬಿ ತಂಡದಲ್ಲಿದ್ದರೂ, ಒಂದು ಪಂದ್ಯ ಆಡದೇ ಹೊರನಡೆದ ಟಾಪ್ – 5 ಆಟಗಾರರು ಯಾರು ಗೊತ್ತೇ?? ಇವರೆಲ ಆರ್ಸಿಬಿಯಲ್ಲಿ ಇದ್ದರು ಎಂದರೆ ನಂಬಲು ಅಸಾಧ್ಯ.

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಆರ್ಸಿಬಿ ತಂಡ ಐಪಿಎಲ್ ನಲ್ಲಿ ಹೆಚ್ಚು ಅಭಿಮಾನಿಗಳಿರುವ ತಂಡ. ಈ ತಂಡದಲ್ಲಿ ಹಲವಾರು ಜನ ಆಟಗಾರರು ಬಂದರೂ ಅವರು ಅಂತಹ ಅದ್ಭುತ ಪ್ರದರ್ಶನ ನೀಡಲಿಲ್ಲ. ಇದೆಲ್ಲವಕ್ಕೂ ವಿಪರ್ಯಾಸವೆಂಬಂತೆ ಆರ್ಸಿಬಿಗೆ ಹರಾಜಿನಲ್ಲಿ ಕೆಲವು ಆಟಗಾರರು ಬಂದರೂ, ಅವರು ಸರಣಿ ಆರಂಭಕ್ಕೂ ಮುನ್ನ ಟೂರ್ನಿಯಿಂದಲೇ ಹೊರ ನಡೆದ ಪ್ರಸಂಗ ಎದುರಾಯಿತು. ಅಂತಹ ಟಾಪ್ – 5 ಆಟಗಾರರು ಯಾರು ಎಂಬುದನ್ನ ತಿಳಿಯೋಣ ಬನ್ನಿ.

ಟಾಪ್ 1 – ಭುವನೇಶ್ವರ್ ಕುಮಾರ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅವರ ಉಪಸ್ಥಿತಿಯ ಹೊರತಾಗಿಯೂ ಬಳಸದ ಆಟಗಾರ ಭುವನೇಶ್ವರ್ ಕುಮಾರ್. ಮೀರತ್ ಮೂಲದ ಭುವನೇಶ್ವರ್ ಕುಮಾರ್ ಐಪಿಎಲ್ 2009 ಮತ್ತು 2010 ರಲ್ಲಿ RCB ತಂಡದ ಭಾಗವಾಗಿದ್ದರು. ನಂತರ ಪುಣೆ ವಾರಿಯರ್ಸ್ ಇಂಡಿಯಾ ಸೇರಿದ ನಂತರ ಭುವನೇಶ್ವರ್ ಕುಮಾರ್ ಸ್ಟಾರ್ ಆದರು. ಅವರು 2009 ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಚಾಂಪಿಯನ್ಸ್ ಲೀಗ್ T20 ನಲ್ಲಿ RCB ಗಾಗಿ ಕೇವಲ ಒಂದು ಪಂದ್ಯವನ್ನು ಆಡಿದರು. ನಂತರ, ಅವರು ಪುಣೆ ವಾರಿಯರ್ಸ್ ಇಂಡಿಯಾಗಾಗಿ 2011 ರಲ್ಲಿ IPL ಗೆ ಪಾದಾರ್ಪಣೆ ಮಾಡಿದರು.

2.ನುವಾನ್ ಪ್ರದೀಪ್ – ಶ್ರೀಲಂಕಾದ ವೇಗದ ಬೌಲರ್ ನುವಾನ್ ಪ್ರದೀಪ್ ರವರನ್ನ ಆರ್ಸಿಬಿ 2011 ರಲ್ಲಿ ಖರೀದಿಸಿತ್ತು. ಆದರೇ ಆ ಸೀಸನ್ ನಲ್ಲಿ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ಸಂಪೂರ್ಣ ಸೀಸನ್ ಆಡದೇ ಬೆಂಚು ಕಾಯಿಸಿದರು. ನಂತರ ಬೇರೆ ಸೀಸನ್ ನಲ್ಲಿ ಅವರನ್ನ ರಿಟೇನ್ ಮಾಡಲಿಲ್ಲ. ಹೀಗೆ ಅವರ ಐಪಿಎಲ್ ಕರಿಯರ್ ಅಂತ್ಯವಾಯಿತು.

3.ಎಸ್‌.ಬದರಿನಾಥ್ : ತಮಿಳುನಾಡಿನ ಪ್ರತಿಭಾನ್ವಿತ ಬ್ಯಾಟ್ಸಮನ್ ಬದರಿನಾಥ್ ರವರನ್ನ ಆರ್ಸಿಬಿ 2015ರಲ್ಲಿ ಖರೀದಿಸಿತ್ತು. ಆದರೇ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ಕೊನೆಗೆ ಅದೇ ಕೊನೆಯ ಸೀಸನ್ ಆಯಿತು ಬದರಿನಾಥ್ ರವರ ಪಾಲಿಗೆ. ಬೇರೆ ಫ್ರಾಂಚೈಸಿಗಳ ಪರ ಬದರಿನಾಥ್ ಉತ್ತಮ ಆಟವಾಡಿದ್ದರು.

4.ಸ್ಟೀವ್ ಸ್ಮಿತ್ : ಆಸ್ಟ್ರೇಲಿಯಾದ ಪ್ರತಿಭಾನ್ವಿತ ಆಲ್ ರೌಂಡರ್ 2010ರಲ್ಲಿ ಸ್ವೀವ್ ಸ್ಮಿತ್ ರನ್ನ ಖರೀದಿಸಿತ್ತು. ಆದರೇ ಸೀಸನ್ ಪೂರ್ತಿ ಒಂದೇ ಒಂದು ಪಂದ್ಯವನ್ನು ಆಡಿಸಲಿಲ್ಲ. ಹೀಗಾಗಿ ಮುಂದಿನ ಭಾರಿ ಹರಾಜಿನಲ್ಲಿ ಸ್ವೀವ್ ಸ್ಮಿತ್ ಬೇರೆ ಫ್ರಾಂಚೈಸಿಗಳ ಪಾಲಾದರು.

ಟಾಪ್ 5 – ನಾಥನ್ ಬ್ರಾಕೇನ್ : ಆಸ್ಟ್ರೇಲಿಯಾದ ವೇಗದ ಬೌಲರ್ ನಾಥನ್ ಬ್ರಾಕೇನ್ 2008ರಲ್ಲಿ ಹರಾಜಿನಲ್ಲಿ ಆರ್ಸಿಬಿ ಪಾಲಾಗಿದ್ದರು. ಆದರೇ ಗಾಯದ ಸಮಸ್ಯೆಯ ಕಾರಣ ಅವರು ಟೂರ್ನಿಯಿಂದಲೇ ಹೊರಬೀಳಬೇಕಾಯಿತು. ಮುಂದೆ ಅವರೆಂದೂ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲೇ ಇಲ್ಲ.

6.ನಾಥನ್ ಕೌಲ್ಟರ್ ಲೈನ್ – ಆಸ್ಟ್ರೇಲಿಯಾದ ವೇಗದ ಬೌಲರ್ ನ್ನ ಆರ್ಸಿಬಿ ಖರೀದಿಸಿತ್ತು. ಆದರೇ ಟೂರ್ನಿ ನಡೆಯುವ ಸಮಯದಲ್ಲಿ ಕೌಲ್ಟರ್ ಗಾಯಗೊಂಡ ಕಾರಣ ಟೂರ್ನಿಯಲ್ಲಿ ಭಾಗವಹಿಸಲೇ ಇಲ್ಲ. ಹೀಗಾಗಿ ಆರ್ಸಿಬಿ ಜರ್ಸಿ ತೋಡುವ ಅವಕಾಶ ಅವರಿಗೆ ದೊರೆಯಲೇ ಇಲ್ಲ. ಹೀಗೆ ಕೌಲ್ಟರ್ ಲೈನ್ ಅವಕಾಶ ಹಾಳಾಯಿತು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.