ಚಿನ್ನ ಖರೀದಿ ಮಾಡುವ ಮುನ್ನ ಪ್ರತಿಯೊಬ್ಬರೂ ಅನುಸರಿಸಬೇಕಾದ ನಾಲ್ಕು ಅಂಶಗಳೇನು ಗೊತ್ತೇ?? ಯಾಮಾರಿದರೆ ಟಾಪ್ ಹಾಕ್ತಾರೆ.

ನಮಸ್ಕಾರ ಸ್ನೇಹಿತರೇ ನಮ್ಮ ಭಾರತದೇಶ ಎನ್ನುವುದು ಚಿನ್ನದ ಖರೀದಿಯಲ್ಲಿ ಇಡೀ ವಿಶ್ವದಲ್ಲೇ ಮೊದಲನೇ ಸ್ಥಾನದಲ್ಲಿದೆ. ಯಾವುದಾದರೂ ವಿಶೇಷ ಕಾರ್ಯಕ್ರಮದಲ್ಲಿ ನಾವು ಚಿನ್ನವನ್ನು ಖರೀದಿಸುವುದು. ಆದರೆ ಚಿನ್ನವನ್ನು ಖರೀದಿಸುವಾಗ ಕೆಲವೊಂದು ವಿಚಾರಗಳನ್ನು ಪರಿಶೀಲಿಸಬೇಕು ಹಾಗೂ ಅದರ ಅನ್ವಯ ಖರೀದಿಸಬೇಕು. ಹಾಗಿದ್ದರೆ ಆ ಅಂಶಗಳು ಯಾವುವು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ ಚಿನ್ನ ಖರೀದಿಸುವಾಗ ಖಂಡಿತವಾಗಿ ಇದನ್ನು ತಪ್ಪದೇ ಪರಿಶೀಲಿಸಿ.

ಶುದ್ಧತೆ: ರಿಜಿಸ್ಟರ್ಡ್ ಸರ್ಟಿಫಿಕೇಶನ್ ಎನ್ನುವುದು ನಿಮಗೆ ಶುದ್ಧ ಚಿನ್ನವನ್ನು ಖರೀದಿಸುವಲ್ಲಿ ಸಹಾಯಮಾಡುತ್ತದೆ. ಚಿನ್ನದ ವ್ಯಾಪಾರಿಗಳ ಬಳಿ ಇರುವ ಮ್ಯಾಗ್ನಿಫಾಯಿಂಗ್ ಗ್ಲಾಸ್ ಮೂಲಕ ಚಿನ್ನದ ಶುದ್ಧತೆಯನ್ನು ಕಂಡುಹಿಡಿಯಬಹುದಾಗಿದೆ. ಪ್ರತಿಯೊಂದು ಚಿನ್ನದ ಶುದ್ಧತೆ ಕೂಡ 99.99% ಇರುತ್ತದೆ. ಚಿನ್ನದ ಪ್ಯಾಕೇಜಿಂಗ್ ನಲ್ಲಿ ಇರುವ ಚಿಹ್ನಯಿಂದಾಗಿ ಕೂಡ ಇದನ್ನು ಕಂಡು ಹಿಡಿಯಬಹುದಾಗಿದೆ. ಬೆಲೆ: ಒಂದು ವೇಳೆ ನೀವು ಸ್ಥಳೀಯ ಚಿನ್ನದ ಅಂಗಡಿಗಳಲ್ಲಿ ಚಿನ್ನವನ್ನು ಕೊಂಡುಕೊಳ್ಳಲು ಹೋಗುವುದಾದರೆ ಅವುಗಳ ಬೆಲೆಯನ್ನು ನೀವು ಶುದ್ಧತೆಯ ಅನುಗುಣವಾಗಿ ನೋಡಬೇಕಾಗುತ್ತದೆ. ಹೀಗಾಗಿ ಬಜೆಟ್ ನಲ್ಲಿ ಕೂಡ ನಿಮಗೆ ಚಿನ್ನಕ್ಕೆ ಎಷ್ಟು ಹಣವನ್ನು ಖರ್ಚು ಮಾಡಬಹುದು ಎಂಬುದಾಗಿ ತಿಳಿಯುತ್ತದೆ. ಚಿನ್ನದ ಮೌಲ್ಯ ಕ್ಕಿರುವ ಬೆಲೆಯನ್ನು ನೀವು ಪೇಪರ್ಗಳಲ್ಲಿ ಟಿವಿ ಮಾಧ್ಯಮಗಳಲ್ಲಿ ಅಥವಾ ಗೂಗಲ್ ನಲ್ಲಿ ಕೂಡ ನೋಡಬಹುದಾಗಿದೆ.

ತೂಕ: ಯಾವುದೇ ಬಾರಿ ಚಿನ್ನವನ್ನು ಖರೀದಿಸಲು ಹೋದಾಗಲೂ ಕೂಡ ನೀವು ಇನ್ನೊಂದು ತೂಕವನ್ನು ಖಂಡಿತವಾಗಿ ಪರೀಕ್ಷಿಸಬೇಕು. ಇದರಿಂದಾಗಿ ನೀವು ಕೊಟ್ಟ ಹಣಕ್ಕೆ ಸರಿಯಾದ ತೂಕದ ಚಿನ್ನ ಸಿಕ್ಕಿದೆಯೋ ಇಲ್ಲವೋ ಎಂಬುದನ್ನು ತಿಳಿದು ಬರುತ್ತದೆ ಇಲ್ಲವಾದರೆ ನೀವು ಇದರಲ್ಲಿ ಮೋಸ ಕೂಡ ಹೋಗಬಹುದಾಗಿದೆ. ರಸೀದಿ: ರಸೀದಿಯನ್ನು ಪ್ರತಿಸಾರಿ ಏನಾದರೂ ಖರೀದಿಸಿದಾಗ ನೀವು ತೆಗೆದುಕೊಳ್ಳುತ್ತೀರಿ ಎಂಬುದು ನಮಗೆ ತಿಳಿದಿದೆ ಆದರೆ ಇದು ಜಿಎಸ್ಟಿ ವಿಚಾರದಲ್ಲಿ ಪ್ರಮುಖವಾಗಿ ರಸೀದಿ ಬೇಕಾಗುತ್ತದೆ. ಇಲ್ಲವಾದಲ್ಲಿ ನೀವು ಪ್ರತ್ಯೇಕವಾಗಿ ಜಿಎಸ್ಟಿ ಹಣವನ್ನು ಕಟ್ಟಬೇಕಾದ ಅಗತ್ಯವಿರುವುದಿಲ್ಲ. ಈ ವಿಚಾರಗಳನ್ನು ನೀವು ಚಿನ್ನ ಖರೀದಿಸುವಾಗ ಅವಲೋಕಿಸಬೇಕಾಗುತ್ತದೆ.