ಒಮ್ಮೆ 25 ಸಾವಿರ ಹೂಡಿಕೆ ಮಾಡಿ ತಿಂಗಳಿಗೆ 50 ಸಾವಿರಕ್ಕೂ ಅಧಿಕ ಆದಾಯ ಗಳಿಸಬಹುದಾದ ಉದ್ಯಮ ಯಾವುದೇ ಗೊತ್ತೇ?? ಸಂಪೂರ್ಣ ಮಾಹಿತಿ.

ಒಮ್ಮೆ 25 ಸಾವಿರ ಹೂಡಿಕೆ ಮಾಡಿ ತಿಂಗಳಿಗೆ 50 ಸಾವಿರಕ್ಕೂ ಅಧಿಕ ಆದಾಯ ಗಳಿಸಬಹುದಾದ ಉದ್ಯಮ ಯಾವುದೇ ಗೊತ್ತೇ?? ಸಂಪೂರ್ಣ ಮಾಹಿತಿ.

ನಮಸ್ಕಾರ ಸ್ನೇಹಿತರೇ, ಸಾಕಷ್ಟು ಜನರಿಗೆ ತಮ್ಮದೇ ಆದ ಒಂದು ಬ್ಯುಸನೆಸ್ ಶುರು ಮಾಡಬೇಕು, ದೊಡ್ಡದೋ, ಚಿಕ್ಕದ್ದೋ ಆದರೆ, ಬೇರೆಯವರ ಹತ್ತಿರ ಕೈ ಚಾಚುವುದಕ್ಕಿಂತ ನಾವೇ ನಮ್ಮ ಉದ್ಯಮ ಶುರು ಮಾಡಬೇಕು ಎಂದು ಆಸೆ ಪಡುತ್ತಾರೆ. ಆದರೆ ಇದು ಸರಿಯಾಗಿ ಸಾಕಾರವಾಗಬೇಕಾದರೆ, ಮೊದಲು ಸರಿಯಾಗಿ ಪ್ಲಾನಿಂಗ್ ಬೇಕು. ಯಾವ ವ್ಯವಹಾರಕ್ಕೆ ಎಷ್ಟು ಹೂಡಿಕೆ ಮಾಡಲು ಸಿದ್ಧರಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಅಂಥ ಅತ್ಯಂತ ಕಡಿಮೆ ಹೂಡಿಕೆಯಲ್ಲಿ ಮಾಡಬಹುದಾದಂಥ ಒಂದು ಸ್ವಉದ್ಯೋಗ ಕಾರ್ ತೊಳೆಯುವ ವಾಣಿಜ್ಯ ಯಂತ್ರಗಳು.

ಕಾರು ತೊಳೆಯುವ ವೃತ್ತಿಯಲ್ಲಿ ನಿಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಹಣ ಗಳಿಸಬಹುದು. ಇದರಲ್ಲಿ ಕಾರು ತೊಳೆಯುವ ವೃತ್ತಿಪರ ವಾಣಿಜ್ಯ ಯಂತ್ರಗಳಿಗೆ ಹೂಡಿಕೆ ಮಾಡಬಹುದು. ಸುಮಾರು ಒಂದು ಲಕ್ಷದವರೆಗೂ ಯಂತ್ರಗಳು ಲಭ್ಯ ಆದರೆ ನಿಮ್ಮ ಸುತ್ತ ಮುತ್ತ ನಿಮಗೆ ಲಭ್ಯವಿರುವ ಕಾರ್ ಗಳನ್ನು ನೋಡಿ ಎಷ್ಟು ಹೂಡಿಕೆ ಮಾಡಬೇಕು ಎನ್ನುವುದನ್ನು ನಿರ್ಧರಿಸಿ. ಆರಂಭದಲ್ಲಿಯೇ ದೊಡ್ಡ ಮೊತ್ತದ ಹೂಡಿಕೆ ಮಾಡಬೇಡಿ. ಮಾರುಕಟ್ಟೆಯಲ್ಲಿ ವಾಣಿಜ್ಯ ಯಂತ್ರಗಳ ಆರಂಭಿಕ ಬೆಲೆ ರೂಪಾಯಿ 12,000. ಎರಡು ಹಾರ್ಸ್ ಪವರ್ ಮೋಟರ್ ಸಿಕ್ಕರೆ, ಪೈಪ್ ನಿಂದ ಹಿಡಿದು ನಳಿಕೆಗಳು ಸುಮಾರು 14 ಸಾವಿರ ರೂ. ಗೆ ಸಿಗುತ್ತವೆ. ಇನ್ನು ಮುಖ್ಯವಾಗಿ ಕನಿಷ್ಠ 30 ಲೀಟರ್ ವ್ಯಾಕ್ಯೂಮ್ ಕ್ಲೀನರ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ ಅದಕ್ಕೆ ೯-೧೦ ಸಾವಿರ ರೂಪಾಯಿಗಳಿರುತ್ತವೆ. ಇನ್ನು ಪ್ರತಿ ಐದು ಲೀಟರ್‌ಗೆ ಶಾಂಪೂ, ಗ್ಲೌಸ್, ಟೈರ್ ಪಾಲಿಶ್ ಮತ್ತು ಡ್ಯಾಶ್‌ಬೋರ್ಡ್ ಪಾಲಿಶ್, ತೊಳೆಯುವ ವಸ್ತುಗಳು ಎಲ್ಲ ಸೇರಿ ಸುಮಾರು 1,700 ರೂ. ಆಗಬಹುದು. ಒಟ್ಟಿನಲ್ಲಿ ಸುಮಾರು ೨೫ ಸಾವಿರ ಹೂಡಿಕೆ ಮಾಡಿ ಕಾರು ತೊಳೆಯುವ ವೃತ್ತಿ ಆರಂಭಿಸಬಹುದು.

ಇನ್ನು ಕಾರ್ ವಾಷಿಂಗ್ ಸೆಂಟರ್ ತೆರೆಯಲು, ಸ್ಥಳದ ಆಯ್ಕೆ ಕೂಡ ಅಷ್ಟೇ ಮುಖ್ಯ. ಇಲ್ಲಿ ಕಾರ್ ಪಾರ್ಕಿಂಗ್ ಗೆ ವ್ಯವಸ್ಥೆ ಇರಬೇಕು. ಜೊತೆಗೆ ಹೆಚ್ಚು ವಾಹನಗಳು ಓಡಾಡುವ ಜನರಿಗೆ ಸುಲಭವಾಗುವಂಥ ಜಾಗವಾಗಿರಬೇಕು. ಇನ್ನು ನಿಮ್ಮ ಅಂಗಡಿಯ ಜೊತೆ ಮೆಕ್ಯಾನಿಕ್ ಅಂಗಡಿಯನ್ನೂ ತೆರೆಯಬಹುದು. ಇಲ್ಲವೇ ಈ ವೃತ್ತಿಯಲ್ಲಿರುವ ಬೇರೆಯವರಿಗೆ ನಿಮ್ಮದೇ ಸ್ಥಳದಲ್ಲಿ ರೆಂಟೆಡ್ ಬ್ಯುಸನೆಸ್ ಮಾಡಬಹುದು.

ಇನ್ನುಕಾರು ಗಳ ವಾಶ್ ಗೆ ನಗರಗಳಲ್ಲಿ ಹೆಚ್ಚು ದರವಿರುತ್ತದೆ. ಪೇಟೆಗಳಲ್ಲಿ ಆಲ್ಟೊ, ವ್ಯಾಗನ್ಆರ್, ಕ್ವಿಡ್ ನಂಥ ಕಾರುಗಳ ವಾಶ್ ಗೆ 150 ರೂ. ತೆಗೆದುಕೊಂಡರೆ ನಗರಗಳಲ್ಲಿ ಈ ರೀತಿಯ ಕಾರುಗಳಿಗೆ 250 ರೂ. ಇರುತ್ತದೆ. ಇನ್ನು ದೊಡ್ಡ ಕಾರುಗಳಾದ ಸ್ವಿಫ್ಟ್ ಡಿಜೈರ್, ಹ್ಯುಂಡೈ ವೆರ್ನಾ ಮೊದಲಾದವುಗಳ ವಾಶ್ ಗೆ 350 ರೂಪಾಯಿ ಚಾರ್ಜ್ ಮಾಡುತ್ತಾರೆ. ಇನ್ನು ೬ ಸೀಟರ್ ಕರ್ ಆದ SUV ಗಳಿಗೆ 450 ರೂ.ವರೆಗೂ ಶುಲ್ಕ ವಿಧಿಸಲಾಗುತ್ತದೆ. ನಿಮ್ಮಲ್ಲಿ ಆತ್ಮವಿಶ್ವಾಸವಿದ್ದರೆ, ನಿಮಗೆ ನಿಮ್ಮ ಬೆಂಬಲವಿದದ್ರೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಮೊದಲು ಸಣ್ಣ ಅಂಗಡಿಯ ಮೂಲಕ ಆರಂಭಿಸಿ ಮುಂದೆ ಹೆಚ್ಚೆಚ್ಚು ಬೆಳೆಯಬಹುದು. ಇದಕ್ಕೆ ಮುಖ್ಯವಾಗಿ ಬೇಕಿರುವುದು ನಿಮ್ಮ ದೃಢ ಸಂಕಲ್ಪ ಅಷ್ಟೇ!