ಕೊನೆಗೂ ತನ್ನ ನಾಯಕನನ್ನು ಅಧಿಕೃತವಾಗಿ ಘೋಷಣೆ ಮಾಡಿದ ಅಹಮದಾಬಾದ್ ತಂಡ, ಅದೃಷ್ಟದಿಂದ ಆಯ್ಕೆಯಾದ ಆ ಆಟಗಾರ ಯಾರು ಗೊತ್ತೇ??

ಕೊನೆಗೂ ತನ್ನ ನಾಯಕನನ್ನು ಅಧಿಕೃತವಾಗಿ ಘೋಷಣೆ ಮಾಡಿದ ಅಹಮದಾಬಾದ್ ತಂಡ, ಅದೃಷ್ಟದಿಂದ ಆಯ್ಕೆಯಾದ ಆ ಆಟಗಾರ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ಹೆಚ್ಚು ಅತ್ಯಾಕರ್ಷಕವಾಗಿರುತ್ತೆಂಬುದು ನಿಮಗೆಲ್ಲಾ ತಿಳಿದಿರುವ ವಿಷಯವಾಗಿದೆ. ಈ ಭಾರಿ ಎಂಟು ತಂಡಗಳು ಬದಲು ಹತ್ತು ತಂಡಗಳು ಪರಸ್ಪರ ಪ್ರಶಸ್ತಿಗಾಗಿ ಸೆಣೆಸಾಡಲಿವೆ. ಹೊಸದಾಗಿ ಸೇರಿರುವ ಫ್ರಾಂಚೈಸಿಗಳಾದ ಲಕ್ನೋ ಹಾಗೂ ಅಹಮದಾಬಾದ್ ತಂಡಗಳು ಇದುವರೆಗೂ ತಮ್ಮ ತಂಡದ ಅಧಿಕೃತ ಲೋಗೋ ಅಥವಾ ಹೆಸರನ್ನ ಬಿಡುಗಡೆ ಮಾಡಿಲ್ಲ‌.

ಈ ವರ್ಷ ಐಪಿಎಲ್ ಆಟಗಾರರ ಸಾರ್ವತ್ರಿಕ ಹರಾಜು ಇರುವ ಕಾರಣ, ಹರಾಜಿಗಿಂತ ಮುಂಚಿತವಾಗಿ ಮೂರು ಆಟಗಾರರನ್ನು ಹೊಸ ಫ್ರಾಂಚೈಸಿಗಳು ಖರೀದಿಸಬಹುದು ಎಂದು ಹೇಳಿತ್ತು. ಎರಡು ಫ್ರಾಂಚೈಸಿಗಳು ಸಹ ತಮ್ಮ ತಂಡದ ಆಟಗಾರರನ್ನ ಘೋಷಿಸಿದ್ದವು. ಈಗ ಅಹಮದಾಬಾದ್ ಫ್ರಾಂಚೈಸಿ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ತಂಡದ ನಾಯಕ ಯಾರು ಎಂಬುದನ್ನ ಬಹಿರಂಗಪಡಿಸಿದೆ. ಈ ನಿರ್ಧಾರವನ್ನು ಕೋಚ್ ನೆಹ್ರಾ ರವರು ಕೂಡ ಒಪ್ಪಿಕೊಂಡಿದ್ದು, ಅವರೇ ಈ ಹೆಸರನ್ನು ಪ್ರಸ್ತಾಪ ಮಾಡಿದ್ದು ಎಂಬ ಮಾತು ಕೇಳಿ ಬರುತ್ತಿದೆ.

ಹೌದು ಎಲ್ಲರ ನೀರಿಕ್ಷೆಯಂತೆ ಅಹಮದಾಬಾದ್ ತಂಡದ ನಾಯಕತ್ವವನ್ನು ಶ್ರೇಯಸ್ ಅಯ್ಯರ್ ಗೆ ಫ್ರಾಂಚೈಸಿ ವಹಿಸಿದೆ. ಮುಂಬೈನ ಪ್ರತಿಭಾನ್ವಿತ ಬ್ಯಾಟ್ಸಮನ್ ಆಗಿರುವ ಶ್ರೇಯಸ್ ಅಯ್ಯರ್ ಈ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದರು. ಗಾಯದ ಸಮಸ್ಯೆಯಿಂದ ಇವರು ಹೊರಗುಳಿದ ಬಳಿಕ ರಿಷಭ್ ಪಂತ್ ಆ ಜಾಗಕ್ಕೆ ಬಂದರು. ಸದ್ಯ ಉತ್ತಮ ಫಾರ್ಮ್ ನಲ್ಲಿರುವ ಶ್ರೇಯಸ್ ಅಯ್ಯರ್ ಕಾನ್ಪುರ ಟೆಸ್ಟ್ ನಲ್ಲಿ ಪದಾರ್ಪಣೆಯ ಪಂದ್ಯದಲ್ಲಿಯೇ ಶತಕಗಳಿಸಿ ಮಿಂಚಿದ್ಧರು. ಸದ್ಯ ದಕ್ಷಿಣ ಆಫ್ರಿಕಾದ ಏಕದಿನ ಸರಣಿಯಲ್ಲಿಯೂ ಸಹ ಮಿಂಚುವ ವಿಶ್ವಾಸ ಇದೆ. ಶ್ರೇಯಸ್ ಅಯ್ಯರ್ ಮುಂದಾಳತ್ವದಲ್ಲಿ ಬಲಿಷ್ಠ ತಂಡ ಕಟ್ಟಲು ಅಹಮದಾಬಾದ್ ಫ್ರಾಂಚೈಸಿ ಎಲ್ಲಾ ಸಿದ್ದತೆಗಳನ್ನು ನಡೆಸಿದೆ. ಶೀಘ್ರದಲ್ಲಿಯೇ ಐಪಿಎಲ್ ಆಟಗಾರರ ಹರಾಜು ನಡೆಯಲಿದ್ದು, ಯಾವ ಆಟಗಾರರು ಶ್ರೇಯಸ್ ಪಡೆ ಸೇರಿಕೊಳ್ಳುತ್ತಾರೆಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.