ಕರುನಾಡ ವಾಣಿ
ಇದು ನಿಮ್ಮ ಧ್ವನಿ

ರೋಹಿತ್ ಗೆ ಬಿಗ್ ಶಾಕ್ ನೀಡಿದ ಬಿಸಿಸಿಐ, ನಾಯಕತ್ವ ಅಲ್ಲ, ಸ್ಥಾನದ ಮೇಲೆಯೇ ತೂಗುಗತ್ತಿ. ಸ್ಥಾನ ಕಳೆದುಕೊಳ್ಳುತ್ತಾರಾ ರೋಹಿತ್, ನಡೆದ್ದದೇನು ಗೊತ್ತೇ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ರೋಹಿತ್ ಶರ್ಮಾ ಭಾರತ ತಂಡದ ಉಪನಾಯಕರಾಗಿದ್ದವರು ಈಗ ಸದ್ಯ ಭಾರತ ತಂಡದ ಏಕದಿನ ಹಾಗೂ ಟಿ 20 ತಂಡದ ನಾಯಕರಾಗಿದ್ದವರು. ಆದರೇ ಗಾಯದ ಸಮಸ್ಯೆಗಳ ಕಾರಣ ದಕ್ಷಿಣ ಆಫ್ರಿಕಾದ ಸರಣಿಯಿಂದ ಹೊರಗುಳಿಯಬೇಕಾಯಿತು. ಭಾರತೀಯ ತಂಡದ ಅಭ್ಯಾಸ ಶಿಬಿರದಲ್ಲಿ ಮಂಡಿರಜ್ಜುವಿನ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಸರಣಿಯಿಂದ ಹೊರಬಿದ್ದ ನಂತರ ಕೆ.ಎಲ್.ರಾಹುಲ್ ಭಾರತ ತಂಡದ ನಾಯಕರಾಗಿದ್ದಾರೆ.

ಸದ್ಯ ಬೆಂಗಳೂರಿನ ಎನ್.ಸಿ.ಎ ಯಲ್ಲಿರುವ ಪುನಶ್ಚೇತನ ಶಿಬಿರದಲ್ಲಿ ರೋಹಿತ್ ಗಾಯದಿಂದ ಗುಣಮುಖರಾಗುತ್ತಿದ್ದಾರೆ. ಆದರೇ ಸದ್ಯ ಭಾರತ ತಂಡಕ್ಕೆ ಮರಳಲು ಬಿಸಿಸಿಐ ರೋಹಿತ್ ಶರ್ಮಾರವರಿಗೆ ಕಠಿಣ ಶರತ್ತೊಂದನ್ನು ವಿಧಿಸಿದೆ. ಹೌದು ಹೇಳಿ ಕೇಳಿ ರೋಹಿತ್ ಶರ್ಮಾ ಸ್ಥೂಲಕಾಯದವರು ಹಾಗೂ ತಿಂಡಿಪೋತ ಎಂದು ತಿಳಿದಿದೆ. ಆದರೇ ಫಿಟ್ ನೆಸ್ ಸಮಸ್ಯೆಯಿಂದ ಆಗಾಗ ಬಳಲುತ್ತಿರುತ್ತಾರೆ. ಆದರೇ ಈಗ ತಂಡಕ್ಕೆ ಮರಳಲು ಬಿಸಿಸಿಐ ರೋಹಿತ್ ಶರ್ಮಾಗೆ ಕಠಿಣ ಷರತ್ತೊಂದನ್ನು ವಿಧಿಸಿದೆ ಎಂದು ಹೇಳಿದೆ.

ಮುಂದಿನ ಫಿಟ್ ನೆಸ್ ಪರೀಕ್ಷೆಯೊಳಗೆ ಆರು ಕೆಜಿ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಹೇಳಲಾಗಿದೆಯಂತೆ. ಇಷ್ಟರ ಮಟ್ಟಿಗಿನ ತೂಕವನ್ನ ಕಡಿಮೆ ಮಾಡಿಕೊಂಡರೇ ಮಾತ್ರ ಮುಂದಿನ ಶ್ರೀಲಂಕಾ ಪ್ರವಾಸಕ್ಕೆ ಪರಿಗಣಿಸಬಹುದು ಎಂದು ಹೇಳಲಾಗಿದೆ. ಹಾಗಾಗಿ ತಂಡಕ್ಕೆ ಮರಳಲು ರೋಹಿತ್ ಶರ್ಮಾಗೆ ಈಗ ಹೊಸ ಸಂಕಷ್ಟ ಎದುರಾಗಿದೆ. ರೋಹಿತ್ ಈ ಕೆಲಸದಲ್ಲಿ ಹೇಗೆ ಯಶಸ್ವಿಯಾಗುತ್ತಾರೆಂಬುದನ್ನ ಕಾದು ನೋಡಬೇಕು. ಇನ್ನು ತೂಕ ಕಳೆದುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ರೋಹಿತ್ ಶರ್ಮಾ ಇತ್ತಿಚೆಗೆ ಪೋಸ್ಟ್ ಮಾಡಿರುವ ಫೋಟೋಗಳಲ್ಲಿ ಸ್ವಲ್ಪ ಸಣ್ಣಗೆ ಕಾಣುತ್ತಿದ್ದಾರಂತೆ. ಹೀಗಾಗಿ ರೋಹಿತ್ ಶೀಘ್ರದಲ್ಲಿಯೇ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.