ಮೂರನೇ ಟೆಸ್ಟ್ ಗೂ ಮುನ್ನವೇ ಸಿಹಿ ಸುದ್ದಿ, ಸಂದರ್ಶನದಲ್ಲಿ ಮಾತನಾಡಿದ ಚೇತೇಶ್ವರ್ ಪೂಜಾರ. ಹೇಳಿದ್ದೇನು ಗೊತ್ತೇ??

ಮೂರನೇ ಟೆಸ್ಟ್ ಗೂ ಮುನ್ನವೇ ಸಿಹಿ ಸುದ್ದಿ, ಸಂದರ್ಶನದಲ್ಲಿ ಮಾತನಾಡಿದ ಚೇತೇಶ್ವರ್ ಪೂಜಾರ. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಹಾಗೂ ದಕ್ಷಿಣ ಆಫ್ರಿಕಾದ ಟೆಸ್ಟ್ ಸರಣಿ ದಿನೇ ದಿನೇ ರೋಚಕವಾಗುತ್ತಿದೆ. ಏರಡನೇ ಟೆಸ್ಟ್ ಈಗ ರೋಚಕ ಘಟ್ಟಕ್ಕೆ ಸಾಕ್ಷಿಯಾಗಿದ್ದು, ದಕ್ಷಿಣ ಆಫ್ರಿಕಾ ಗೆಲ್ಲಲು 122 ರನ್ ಗಳಿಸಬೇಕಿದೆ. ಇನ್ನು ಇರುವ ಎಂಟು ವಿಕೇಟ್ ನ ಸಹಾಯದಿಂದ ಈ ಮೊತ್ತವನ್ನ ಚೇಸ್ ಮಾಡಿದರೇ ವಾಂಡರರ್ಸ್ ಮೈದಾನದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ ಶ್ರೇಯ ತಂಡದ ಪಾಲಿಗೆ ಬರುತ್ತದೆ.

ಇದೇ ವೇಳೆ ನಾಲ್ಕನೇ ದಿನದಾಟಕ್ಕೆ ಮಳೆಯ ಅಡಚಣೆಯಾಗಿದ್ದು, ಮೊದಲೆರೆಡು ಸೆಷನ್ ಗಳಲ್ಲಿ ಆಟ ನಡೆಯುವ ಸಂಭವ ತೀರಾ ಕಡಿಮೆ. ಮಳೆ ಮತ್ತೆ ಮುಂದುವರೆದರೇ ದಿನದಾಟ ಸಹ ಒಂದು ಎಸೆತವಿಲ್ಲದೇ ಅಂತ್ಯವಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನು ದ್ವೀತಿಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ವಿರಾಟ್ ಕೊಹ್ಲಿಯನ್ನ ಬಹಳ ಮಿಸ್ ಮಾಡಿಕೊಳ್ಳುತ್ತಿದೆ. ವಿರಾಟ್ ರನ್ ಗಳಿಸುತ್ತಾರೋ ಇಲ್ಲವೋ ಆದರೇ ಮೈದಾನದಲ್ಲಿದ್ದರೇ ಮಾತ್ರ ಆಟಗಾರರ ಹೆಚ್ಚುವಂತೆ ಮಾಡುತ್ತಾರೆ.

ಆಟಗಾರರಿಗೆ ಹೆಚ್ಚಿನ ಕ್ರೀಡಾ ಸ್ಪೂರ್ತಿಯಂತೂ ಕೊಹ್ಲಿ ಹಾಜರಿದ್ದರೇ ಖಚಿತ. ಇನ್ನು ಎರಡನೇ ಟೆಸ್ಟ್ ನಲ್ಲಿ ಗಾಯದ ಸಮಸ್ಯೆಯ ಕಾರಣ ಹೊರಗುಳಿದಿದ್ದ ವಿರಾಟ್ ಬಗ್ಗೆ , ತಂಡದ ಸಹ ಆಟಗಾರ ಚೇತೇಶ್ವರ ಪೂಜಾರ ಮಾತನಾಡಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ವಿರಾಟ್ ಸಂಪೂರ್ಣ ಗುಣಮುಖರಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಮೂರನೇ ಟೆಸ್ಟ್ ವೇಳೆ ವಿರಾಟ್ ಸಂಪೂರ್ಣ ಫಿಟ್ ಆಗಲಿದ್ದು, ಮೂರನೇ ಟೆಸ್ಟ್ ವೇಳೆಗೆ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಹೇಳಿದರು. ಕೊಹ್ಲಿ ತಂಡಕ್ಕೆ ವಾಪಸ್ ಆದರೇ ಹನುಮ ವಿಹಾರಿ ಸ್ಥಾನ ಬಿಟ್ಟುಕೊಡಬೇಕಾಗಬಹುದು. ಪೂಜಾರ ಹಾಗೂ.ರಹಾನೆ ಎರಡನೇ ಟೆಸ್ಟ್ ನಲ್ಲಿ ಅದ್ಭುತ ಆಟ ಆಡಿದ ಕಾರಣ ಅವರ ಸ್ಥಾನ ಭದ್ರವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ