ಬಾಲಕೃಷ್ಣ ರವರ ಜೊತೆ ನಟನೆ ಮಾಡಲು ಭರ್ಜರಿ ಸಂಭಾವನೆ ಪಡೆದ ದುನಿಯಾ ವಿಜಯ್. ಟಾಪ್ ನಟರನ್ನು ಮೀರಿಸಿ ಪಡೆದ ಸಂಭಾವನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರತಿಭೆ ಒಂದಿದ್ದರೆ ಸಾಕು ಎಂತಹ ಸಾಧನೆಯನ್ನು ಕೂಡ ಕಷ್ಟಗಳಲ್ಲಿ ಹಾಗೂ ಅವಮಾನಗಳಲ್ಲಿ ಮಾಡಬಹುದು ಎಂಬುದನ್ನು ನಮ್ಮ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟ ಈಗ ಸಲಗ ಚಿತ್ರದ ಮೂಲಕ ನಿರ್ದೇಶಕ ಕೂಡ ಆಗಿರುವ ದುನಿಯಾ ವಿಜಯ ರವರ ಸಾಬೀತುಪಡಿಸಿದ್ದಾರೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಹಸ ದೃಶ್ಯದ ಸಂಯೋಜಕರಾಗಿ ಕಾಣಿಸಿಕೊಂಡು ನಂತರದ ದಿನಗಳಲ್ಲಿ ದುನಿಯಾ ವಿಜಯ್ ರವರು ದುನಿಯಾ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಾರೆ.

ಇಂದಿಗೂ ಕೂಡ ಅವರ ಟೊಮೆಟೋ ಡೈಲಾಗ್ ಎಲ್ಲರ ಮನದಾಳದಲ್ಲಿ ಚಿರನೂತನ ವಾಗಿದೆ. ಇನ್ನೊಂದು ವಿಷಯ ನಿಮಗೆ ಗೊತ್ತಾ ದುನಿಯಾ ವಿಜಯ್ ರವರು ರಜನಿಕಾಂತ್ ಅವರ ಅಪ್ಪಟ ಅಭಿಮಾನಿ. ರಜನಿಕಾಂತ್ ಅವರಂತೆಯೇ ದುನಿಯಾ ವಿಜಯ್ ರವರು ಕೂಡ ಸಿನಿಮಾದಲ್ಲಿ ಮಿಂಚಲು ಕಲರ್ ಅಲ್ಲ ಖದರ್ ಬೇಕು ಎನ್ನುವುದನ್ನು ತೋರಿಸಿಕೊಟ್ಟವರು. ಇತ್ತೀಚಿಗಷ್ಟೇ ಸಲಗ ಚಿತ್ರದ ಮೂಲಕ ನಿರ್ದೇಶಕನಾಗಿಯೂ ಕೂಡ ಯಶಸ್ಸನ್ನು ಸಾಧಿಸಿ ಪರಭಾಷಿಗರಿಗೆ ಕೂಡ ಪರಿಚಿತರಾಗಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಸಲಗ ಚಿತ್ರದ ಯಶಸ್ಸು ಎನ್ನುವುದು ದುನಿಯಾ ವಿಜಯ್ ಅವರನ್ನು ತೆಲುಗು ಚಿತ್ರರಂಗಕ್ಕೆ ಕರೆದೊಯ್ದಿದೆ.

ಹೌದು ಸ್ನೇಹಿತರೆ ದುನಿಯಾ ವಿಜಯ್ ರವರು ನಂದಮೂರಿ ಬಾಲಕೃಷ್ಣ ರವರ 107ನೇ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಈ ಕುರಿತಂತೆ ಮಳ್ಳಿನೇನಿ ಗೋಪಿಚಂದ್ ಹಾಗೂ ಮೈತ್ರಿ ಮೂವಿ ಮೇಕರ್ಸ್ ಕೂಡ ಅಧಿಕೃತಗೊಳಿಸಿದೆ. ಇನ್ನು ಈ ಚಿತ್ರಕ್ಕೆ ಪಡೆಯುತ್ತಿರುವ ಸಂಭಾವನೆ ಅವರು ಹೀರೋ ಆಗಿ ಪಡೆಯುತ್ತಿದ್ದ ಸಂಭಾವನೆಗಿಂತ ಹೆಚ್ಚು‌. ಮಾಮೂಲಿಯಾಗಿ ಹೇಳುವುದಾದರೆ ಕನ್ನಡ ಚಿತ್ರರಂಗದಲ್ಲಿ ದುನಿಯಾ ವಿಜಯ್ ರವರು ಹೀರೋ ಆಗಿ ನಟಿಸುವುದಕ್ಕೆ ನಾಲ್ಕರಿಂದ ಆರು ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದರು. ಆದರೆ ನಂದಮೂರಿ ಬಾಲಕೃಷ್ಣ ರವರ 107ನೇ ಚಿತ್ರದಲ್ಲಿ ವಿಲನ್ ಆಗಿ ನಟಿಸುವುದಕ್ಕಾಗಿ ಬರೋಬ್ಬರಿ 7.5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಯಾರಾದರೂ ನಿಜವಾದ ಯಶಸ್ಸು ಯಾವುದು ಎಂದು ಕೇಳಿದರೆ ಈ ಲೇಖನಿಯನ್ನು ನೀವು ಅವರಿಗೆ ಶೇರ್ ಮಾಡಬಹುದು.

Post Author: Ravi Yadav