ಸಂಭಾವನೆ ಕೇಳಿದಾಗ ವಿಜಯ್ ರವರಿಗೆ ಅವಮಾನ ಮಾಡಿ ಕೈ ಮಾಡಿದ್ದ ನಿರ್ಮಾಪಕ ಯಾರು?? ಬಾರಿ ಚರ್ಚೆ ಸೃಷ್ಟಿಸಿದ ವಿಜಯ್ ಹೇಳಿಕೆ, ಇಂದು ನಿರ್ಮಾಪಕನ ಪರಿಸ್ಥಿತಿ ಏನಾಗಿದೆ ನೋಡಿ

ಸಂಭಾವನೆ ಕೇಳಿದಾಗ ವಿಜಯ್ ರವರಿಗೆ ಅವಮಾನ ಮಾಡಿ ಕೈ ಮಾಡಿದ್ದ ನಿರ್ಮಾಪಕ ಯಾರು?? ಬಾರಿ ಚರ್ಚೆ ಸೃಷ್ಟಿಸಿದ ವಿಜಯ್ ಹೇಳಿಕೆ, ಇಂದು ನಿರ್ಮಾಪಕನ ಪರಿಸ್ಥಿತಿ ಏನಾಗಿದೆ ನೋಡಿ

ನಮಸ್ಕಾರ ಸ್ನೇಹಿತರೇ ದುನಿಯಾ ವಿಜಯ್ ಅವರು ಕನ್ನಡ ಚಿತ್ರರಂಗದಲ್ಲಿ ಇಂದು ನಾಯಕನಟನಾಗಿ ಹಾಗೂ ನಿರ್ದೇಶಕನಾಗಿ ಉನ್ನತ ಸ್ಥಾನದಲ್ಲಿ ನಿಂತಿದ್ದಾರೆ ಎಂದರೆ ಖಂಡಿತವಾಗಿ ಒಂದು ಅವರು ಪಟ್ಟಂತಹ ಪರಿಶ್ರಮ ಹಾಗೂ ಎದುರಿಸಿ ದಂತಹ ಅವಮಾನಗಳ ದುಃಖವೇ ಕಾರಣ ಎಂದರೆ ತಪ್ಪಾಗಲಾರದು.

ಕಲರ್ ಕಪ್ಪಗಿದ್ದರೂ ಕೂಡ ಖದರ್ ಎನ್ನುವುದು ಟಾಪ್ ಆಗಿದೆ ಎಂಬುದನ್ನು ಕನ್ನಡ ಚಿತ್ರರಂಗಕ್ಕೆ ದುನಿಯಾ ವಿಜಯ್ ಅವರು ತಮ್ಮ ನಟನೆ ಹಾಗೂ ದೇಹ ದಾರ್ಡ್ಯತೆಯ ಮೂಲಕ ಸಾಬೀತುಪಡಿಸಿದ್ದಾರೆ. ತಮ್ಮ ಸಿನಿಮಾ ಜರ್ನಿಯ ಉದ್ದಕ್ಕೂ ಕೂಡ ಹಲವಾರು ಅವಮಾನಗಳನ್ನು ದುಃಖಗಳನ್ನು ಸಹಿಸಿಕೊಂಡು ಬಂದವರು ದುನಿಯಾ ವಿಜಯ್ ರವರು. ಇದನ್ನು ಇತ್ತೀಚಿಗಷ್ಟೆ ನಡೆದಿರುವ ಕಿರುತೆರೆ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಹೌದು ನಾವು ಮಾತನಾಡುತ್ತಿರುವುದು ಇತ್ತೀಚೆಗಷ್ಟೆ ಹೊಸವರ್ಷದ ಪ್ರಯುಕ್ತವಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಡೆದಿರುವ ರಂಗು ರಂಗೋಲಿ ಕಾರ್ಯಕ್ರಮದ ಕುರಿತಂತೆ. ರಂಗು ರಂಗೋಲಿ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ನಿರ್ಮಾಪಕರೊಬ್ಬರು ದುನಿಯಾ ವಿಜಯ್ ರವರೊಂದಿಗೆ ನಡೆದುಕೊಂಡ ರೀತಿಯ ಕುರಿತಂತೆ ಹೇಳಿದ್ದಾರೆ.

22 ದಿನಗಳ ಕಾಲ ದುನಿಯಾ ವಿಜಯ್ ರವರು ಒಂದು ಚಿತ್ರಕ್ಕಾಗಿ ಕೆಲಸ ಮಾಡಿದ್ದರಂತೆ. ಮೊದಲಿಗೆ ದಿನಕ್ಕೆ 500 ರೂಪಾಯಿ ಸಂಭಾವನೆ ನೀಡುವ ಮಾತುಕತೆಯಾಗಿತ್ತು. ಸಿನಿಮಾ ಕೆಲಸ ಪೂರ್ಣಗೊಂಡ ನಂತರ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದ ಮುಂದೆ ನಿರ್ಮಾಪಕರ ಬಳಿ ದುನಿಯಾ ವಿಜಯ್ ರವರು ಸಂಭಾವನೆ ಕೇಳಿದಾಗ ನಿರ್ಮಾಪಕ ಎಷ್ಟು ದಿನ ಕೆಲಸ ಮಾಡಿದ್ದೀಯ ಎಂದು ಹೇಳಿ ದಿನಕ್ಕೆ ನೂರು ರೂಪಾಯಿ ಸಂಭಾವನೆ ನೀಡುತ್ತಾರೆ.

ಆಗ ನೀವು ಹೇಳಿದ್ದು ಐದು ನೂರು ರೂಪಾಯಿ ಅಷ್ಟಾದರೂ ಕೊಡಿ ಎಂಬುದಾಗಿ ಕೇಳಿದಾಗ ನಿನ್ನ ಮುಖಕ್ಕೆ ಇದೆ ಹೆಚ್ಚು ಇದರ ಮೇಲೆ ಕೊಡುವುದಕ್ಕಾಗುವುದಿಲ್ಲ ಎಂದು ಹೇಳಿ ಹೀನಾಮಾನವಾಗಿ ಬೈದು ಕಪಾಳ ಮೋಕ್ಷ ಮಾಡುತ್ತಾರೆ. ಆಗ ಅಲ್ಲಿದ್ದವರು ದುನಿಯಾ ವಿಜಯ್ ಅವರನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಸಿನಿಮಾ ನಿರ್ಮಾಪಕರ ಬಳಿ ಜಗಳ ಮಾಡಿಕೊಳ್ಳಬಾರದು ಚಿತ್ರರಂಗದಲ್ಲಿ ಉಳಿಯಲು ಸಾಧ್ಯವಿಲ್ಲ ಎಂಬುದಾಗಿ ಹೇಳಿದ್ದರು. ಅವರು ಮೊದಲು ಚಿತ್ರರಂಗದಲ್ಲಿ, ಉದಯೋನ್ಮುಖ ನಿರ್ಮಾಪಕರಾಗಿದ್ದರು, ಅವರ ಹೆಸರು ನಮಗೆ ತಿಳಿದಿದ್ದರು, ಅವರ ಗೌರವಕ್ಕೆ ಧಕ್ಕೆ ತರಬಾರದೆಂದು ಗೌಪ್ಯವಾಗಿ ಇರಿಸಿದ್ದೇವೆ, ಈಗ ಆ ನಿರ್ಮಾಪಕರನ್ನು ತನ್ನ ಕಾಲಬುಡದಲ್ಲಿ ಇಟ್ಟುಕೊಂಡಿದ್ದೇನೆ ಎಂಬುದಾಗಿ ರಂಗು ರಂಗೋಲಿ ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ಅವರು ಹೇಳಿದ್ದಾರೆ. ಆದರೆ ನಿರ್ಮಾಪಕರ ಹೆಸರನ್ನು ಎಲ್ಲು ಕೂಡ ಬಿಟ್ಟುಕೊಟ್ಟಿಲ್ಲ. ಆ ನಿರ್ಮಾಪಕ ಯಾರಿರಬಹುದು ಎಂಬುದನ್ನು ನೀವೇ ಊಹಿಸಿ, ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು ಎಂದು ಕಾಮೆಂಟ್ ಮುಖಾಂತರ ತಿಳಿಸುವುದನ್ನು ಮರೆಯಬೇಡಿ