ಟೀಮ್ ಇಂಡಿಯಾಕ್ಕೆ ಮತ್ತೊಂದು ಶಾಕ್, ರೋಹಿತ್ ನಂತರ ಏಕದಿನ ಸರಣಿ ತಪ್ಪಿಸಿಕೊಳ್ಳುತ್ತಿರುವ ಮತ್ತೊಬ್ಬ ಆಟಗಾರ ಯಾರು ಗೊತ್ತೇ??

ಟೀಮ್ ಇಂಡಿಯಾಕ್ಕೆ ಮತ್ತೊಂದು ಶಾಕ್, ರೋಹಿತ್ ನಂತರ ಏಕದಿನ ಸರಣಿ ತಪ್ಪಿಸಿಕೊಳ್ಳುತ್ತಿರುವ ಮತ್ತೊಬ್ಬ ಆಟಗಾರ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಟೆಸ್ಟ್ ನಲ್ಲೇ ಗೆಲುವು ಸಾಧಿಸಿದ್ದ ಭಾರತ ತಂಡಕ್ಕೆ ದ್ವೀತಿಯ ಟೆಸ್ಟ್ ಆರಂಭಕ್ಕಿಂತ ಮುಂಚಿತವಾಗಿ ಶಾಕ್ ಎದುರಾಗಿತ್ತು. ಟಾಸ್ ವೇಳೆ ನಾಯಕ ವಿರಾಟ್ ಬದಲು ಕೆ‌.ಎಲ್.ರಾಹುಲ್ ಪ್ರತ್ಯಕ್ಷವಾಗಿದ್ದರು. ವಿರಾಟ್ ಕೊಹ್ಲಿ ತೀವ್ರ ಬೆನ್ನು ನೋವಿನಿಂದ ಏರಡನೇ ಟೆಸ್ಟ್ ನಿಂದ ಹೊರಗುಳಿದಿದ್ದರು. ಈಗ ಮೂರನೇ ಹಾಗೂ ಅಂತಿಮ ಟೆಸ್ಟ್ ನಲ್ಲಿ ಆಡುವುದು ಸಹ ಅನುಮಾನ ಎಂಬಂತೆ ಆಗುತ್ತಿದೆ. ಇದೇ ವೇಳೆ ಇನ್ನೊಂದು ವಿಷಯ ಹೊರಬಿದ್ದಿದ್ದು ವಿರಾಟ್ ಕೊಹ್ಲಿ ಏಕದಿನ ಸರಣಿಯಿಂದ ಬಿಡುವು ಬಯಸಿ ಬಿಸಿಸಿಐಗೆ ಪತ್ರ ಬರೆದಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಸರಣಿಗೂ ಮುನ್ನ ನಾಯಕತ್ವ ವಿವಾದದಲ್ಲಿ ವಿರಾಟ್ ಏಕದಿನ ಸರಣಿಯಿಂದ ಹೊರಗುಳಿಯುತ್ತಾರೆ ಎಂಬ ವದಂತಿ ಕೇಳಿ ಬಂದಿತ್ತು. ಆದರೇ ಅದನ್ನ ವಿರಾಟ್ ನಯವಾಗಿ ತಿರಸ್ಕರಿಸಿ, ಏಕದಿನ ಸರಣಿಯಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ್ದರು. ಈ ನಡುವೆ ಮಂಡಿರಜ್ಜು ಗಾಯದಿಂದ ರೋಹಿತ್ ಶರ್ಮಾ ಏಕದಿನ ಸರಣಿಯಿಂದ ಹೊರಬಿದ್ದಿದ್ದರು. ಹಾಗಾಗಿ ಕನ್ನಡಿಗ ಕೆ.ಎಲ್.ರಾಹುಲ್ ರನ್ನ ನಾಯಕ ಸ್ಥಾನಕ್ಕೆ ಘೋಷಿಸಲಾಗಿತ್ತು. ಆದರೇ ಈಗ ವಿರಾಟ್ ಕೊಹ್ಲಿ ಸಹ ಏಕದಿನ ಪಂದ್ಯಗಳ ಸರಣಿಯಿಂದ ಹೊರಗುಳಿದರೇ, ಭಾರತ ತಂಡಕ್ಕೆ ಬಿಗ್ ಶಾಕ್ ಆಗಲಿದೆ. ಆಫ್ರಿಕಾ ನೆಲದಲ್ಲಿ ಅನುಭವಿಗಳ ಕೊರತೆಯಿಂದ ಭಾರತ ತಂಡ ಸೋಲಬಹುದು ಎಂದು ಹೇಳಲಾಗುತ್ತಿದೆ.

ವಿರಾಟ್ ಪುತ್ರಿ ವಮಿಕಾಗೆ ಜನೇವರಿ 11 ಕ್ಕೆ ಒಂದು ವರ್ಷ ತುಂಬಲಿದ್ದು ಹಾಗಾಗಿ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುವ ಸಲುವಾಗಿ ಏಕದಿನ ಸರಣಿಯಿಂದ ಬಿಡುವು ಪಡೆಯಲು ವಿರಾಟ್ ಕೊಹ್ಲಿ ಬಯಸುತ್ತಿದ್ದಾರೆ ಎಂದು ಹೇಳಲಾಗಿದೆ. ಬಿಸಿಸಿಐ ಇನ್ನು ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ‌. ಕೋಚ್ ರಾಹುಲ್ ದ್ರಾವಿಡ್ ಹಾಗೂ ಮ್ಯಾನೇಜ್ ಮೆಂಟ್ ಜೊತೆ ಚರ್ಚಿಸಿ, ಅಧಿಕೃತ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.