ಒಮ್ಮೆ ರೀಚಾರ್ಜ್ ಮಾಡಿದ್ರೆ ಸಾಕು, 2023 ರ ವರೆಗೂ ರೀಚಾರ್ಚ್ ಮಾಡಿಸೋ ಟೆನ್ಶನ್ನೇ ಇಲ್ಲ: ಇದು ಜಿಯೋ ಹೊಸ ಯೋಜನೆ. ಎಷ್ಟು ಗೊತ್ತೇ??

ಒಮ್ಮೆ ರೀಚಾರ್ಜ್ ಮಾಡಿದ್ರೆ ಸಾಕು, 2023 ರ ವರೆಗೂ ರೀಚಾರ್ಚ್ ಮಾಡಿಸೋ ಟೆನ್ಶನ್ನೇ ಇಲ್ಲ: ಇದು ಜಿಯೋ ಹೊಸ ಯೋಜನೆ. ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಮೊದಲು ಮೊಬೈಲ್ ರೀಚಾರ್ಚ್ ಗಳ ಬೆಲೆ ಏರಿಕೆಯ ಬಿಸಿ ಗ್ರಾಹಕರನ್ನು ತಟ್ಟಿತ್ತು. ಆದರೆ ಈಗ ಕೆಲವು ಪ್ರಮುಖ ಟೆಲಿಕಾಂ ಕಂಪನಿಗಳು ಹಲವು ವಿನೂತನ ಪ್ಲಾನ್ ಗಳನ್ನು ತನ್ನ ಬಳಕೆದಾರರಿಗೆ ಬದಗಿಸುತ್ತಿವೆ. ಒಟಿಟಿ ಸೇವೆಯ ಜೊತೆಗೆ ಹಲವು ಇತರ ರಯೋಜನಗಳನ್ನೂ ಹೊತ್ತ ಹೊಸ ಹೊಸ ಪ್ಲಾನ್ ಗಳನ್ನು ಬಿಡುಗಡೆ ಮಾಡಿದ್ದಾರೆ.

ಹೌದು, ಜಿಯೋ, ಎರ್ಟೆಲ್, ವಡಾಪೋನ್-ಐಡಿಯಾ ಗಳು ಸೇರಿದಂತೆ ಟೆಲಿಕಾಂ ಕಂಪನಿಗಳು ವಾರ್ಷಿಕ ಪ್ಲಾನ್ ಗಳನ್ನು ಬಿಡುಗಡೆ ಮಾಡಿವೆ. ಈ ಪ್ಲಾನ್ ಒಮ್ಮೆಲೆ ರೀಚಾರ್ಚ್ ಮಾಡಲು ಸ್ವಲ್ಪ ದುಬಾರಿ ಎನ್ನಿಸಿದರೂ, ಒಮ್ಮೆ ರೀಚಾರ್ಚ್ ಮಾಡಿದರೆ ವರ್ಷವಿಡಿ ಯಾವುದೇ ಟೆನ್ಶನ್ ಇಲ್ಲದೇ ಉತ್ತಮ ಸೇವೆಯನ್ನು ಅನುಭವಿಸಬಹುದು. ಯಾವ ಯಾವ ಟೆಲಿಕಾಂ ಕಂಪನಿಯ ಪ್ಲಾನ್ ಹೇಗಿದೆ ನೋಡೋಣ.

ಏರ್ಟೆಲ್: ವಾರ್ಷಿಕ ರೂ. 2999 ರ ಪ್ರಿಪೇಯ್ಡ್‌ ಪ್ಲಾನ್ ಬಿಡುಗಡೆ ಮಾಡಿದ್ದು ವರ್ಷದ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಪ್ಲಾನ್ ಅಡಿಯಲ್ಲಿ ನಿಮಗೆ ಪ್ರತಿದಿನ 2 GB ಡೇಟಾ, ಏರ್‌ಟೆಲ್‌ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳು, ಪ್ರತಿದಿನ 100 ಎಸ್ಎಮ್ಎಸ್ ಗಳ ಸೌಲಭ್ಯವಿದೆ. ಇದರ ಜೊತೆಯಲ್ಲಿ ರೂ. 1799 ರ ಇನ್ನೊಂದು ಪ್ಲಾನ್ ಇದ್ದು ಇದೂ ಕೂಡ 365 ದಿನಗಳ ವ್ಯಾಲಿಡಿಟಿ ಹೊಂದಿದೆ. ಪ್ರತಿದಿನ 24 GB ಡೇಟಾ. ಏರ್ಟೆಲ್ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ವಾಯಿಸ್ ಕರೆಗಳು ಹಾಗೂ ಪ್ರತಿದಿನ 100 ಎಸ್ಎಮ್ಎಸ್ ಉಚಿತವಾಗಿ ಈ ಪ್ಲಾನ್ ಒದಗಿಸುತ್ತದೆ.

ಜಿಯೋ: 2879 ರೂ. ಪ್ಲಾನ್ ನ್ನು ಬಿಡುಗಡೆ ಮಾಡಿದ್ದು ಇದು ವಾರ್ಷಿಕ ಅವಧಿಯ ಯೋಜನೆಯಾಗಿದೆ. ಒಂದು ವರ್ಷದ ವ್ಯಾಲಿಡಿಟಿ ಜೊತೆಗೆ ಪ್ರತಿದಿನ 2 GB ಡೇಟಾ, ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳು, ಹಾಗೂ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನವನ್ನು ಈ ಪ್ಲಾನ್ ಮೂಲಕ ಪಡೆಯಬಹುದು. ಜಿಯೋದ ಇನ್ನೊಂದು ಪ್ಲಾನ್ ರೂ. 2545ರದ್ದಾಗಿದ್ದು, ಇದು 336 ದಿನಗಳ ವ್ಯಾಲಿಡಿಟಿ, ಪ್ರತಿದಿನ 1.5 GB ಡೇಟಾ, ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳು ಜೊತೆಗೆ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯವನ್ನು ಕೊಡುತ್ತಿದೆ.

ವೊಡಾಫೋನ್- ಐಡಿಯಾ: ವಿಐ ಟೆಲಿಕಾಂನ ವಾರ್ಷಿಕ ರೀಚಾರ್ಜ್ ಪ್ಲಾನ್ 3099 ರೂ. ಗಳಿಗೆ ಲಭ್ಯ. ಈ ಪ್ಲಾನ್ ಪ್ರಕಾರ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ, ಯಾವುದೇ ನೆಟ್ವರ್ಕ್ಗೆ ಅನಿಯಮಿತ ಉಚಿತ ಕರೆಗಳು ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ನೀಡುತ್ತಿದೆ. ಇದು ಕೂಡ ಭರ್ತಿ ಒಂದು ವರ್ಷದ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ವಿಐ ಕೊಡುತ್ತಿರುವ ಇನ್ನೊಂದು ಪ್ಲಾನ್ ರೂ. 2899ಗಳದ್ದು. 365 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್ ನಲ್ಲಿ ಪ್ರತಿದಿನ 1.5 GB ಡೇಟಾ, ವಿಐ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳು ಹಾಗೂ 100 ಎಸ್ಎಮ್ಎಸ್ ಗಳು ಪ್ರತಿದಿನ ದೊರೆಯುತ್ತವೆ. ಇನ್ನು ವಾಲ್ಯೂ ಎಡಿಶನ್ ಆಗಿ ವಿಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಲಭ್ಯವಿದೆ.