ಮೊದಲ ಟೆಸ್ಟ್ ಗೆದ್ದರೂ ಕೂಡ ಭಾರತ ತಂಡದ ಮೇಲೆ ಕೋಚ್ ರಾಹುಲ್ ದ್ರಾವಿಡ್ ಬೇಸರಗೊಂಡದ್ದು ಯಾಕೆ ಗೊತ್ತೇ??

ಮೊದಲ ಟೆಸ್ಟ್ ಗೆದ್ದರೂ ಕೂಡ ಭಾರತ ತಂಡದ ಮೇಲೆ ಕೋಚ್ ರಾಹುಲ್ ದ್ರಾವಿಡ್ ಬೇಸರಗೊಂಡದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ದಕ್ಷಿಣ ಆಫ್ರಿಕಾ ವಿರುದ್ದ ಮೊದಲ ಟೆಸ್ಟ್ ಪಂದ್ಯದಲ್ಲೇ ಗೆದ್ದು ಐತಿಹಾಸಿಕ ಜಯ ದಾಖಲಿಸಿದೆ. ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ಭಾರತ ಅರ್ಹವಾಗಿ ಜಯ ಸಾಧಿಸಿತು. ಮೊದಲ ಇನ್ನಿಂಗ್ಸ್ ನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಶತಕ ಹಾಗೂ ವೇಗಿ ಮಹಮದ್ ಶಮಿ ಯವರ ಉತ್ತಮ ಬೌಲಿಂಗ್ ಗೆಲುವಿಗೆ ಕಳೆಕಟ್ಟಿತು. ಬರೋಬ್ಬರಿ 111 ರನ್ ಗಳ ಜಯ ಸಾಧಿಸಿದ ಭಾರತ ಸಹಜವಾಗಿಯೇ ಸರಣಿಯಲ್ಲಿ 1 – 0 ಅಂತರದ ಜಯ ದಾಖಲಿಸಿತು.

ಆದರೇ ಬೇಸರದ ಸಂಗತಿಯೆಂದರೇ ಭಾರತ ತಂಡದ ನಿಧಾನಗತಿಯ ಬೌಲಿಂಗ್ ಕಾರಣಕ್ಕೆ ಭಾರತ ತಂಡದ ಆಟಗಾರರಿಗೆ ಮ್ಯಾಚ್ ರೆಫರಿ ಐಸಿಸಿ ನಿಯಮದಂತೆ ಶೇಕಡಾ 20 ರಷ್ಟು ದಂಡ ವಿಧಿಸಿದೆ. ಅದಲ್ಲದೇ ಮಹತ್ವದ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡಕ್ಕೆ ಒಂದು ಅಂಕವನ್ನು ಸಹ ಕಡಿತಗೊಳಿಸಲಾಗಿದೆ. ಸದ್ಯ ಭಾರತ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ನ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇದೆ.

ಇನ್ನು ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಕೋಚ್ , ಕನ್ನಡಿಗ ರಾಹುಲ್ ದ್ರಾವಿಡ್ ತಂಡದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಐಸಿಸಿ ಆಟದ ವೇಗವನ್ನ ಹೆಚ್ಚಲು ಪ್ರಯತ್ನಿಸಿದೆ. ಹಾಗಾಗಿ ಈ ನಿಯಮಗಳನ್ನ ಜಾರಿಗೆ ತಂದಿದೆ. ಇದನ್ನ ನಾನು ಸ್ವಾಗತಿಸುತ್ತೇನೆ. ಆದರೇ ಹೊರದೇಶಗಳಲ್ಲಿ ನಾವು ಬಹಳಷ್ಟು ಕಷ್ಟಪಟ್ಟು ಪಾಯಿಂಟ್ ಗಳನ್ನು ಸಂಪಾದಿಸುತ್ತಿರುತ್ತೇವೆ. ಆದರೇ ನಮ್ಮದೇ ತಪ್ಪಿನಿಂದ ನಾವು ಅದನ್ನು ಕಳೆದುಕೊಂಡಾಗ ಬಹಳಷ್ಟು ದುಖಃವಾಗುತ್ತದೆ. ಅದಲ್ಲದೇ ಭಾರತ ತಂಡ ಈ ವಿಭಾಗದಲ್ಲಿ ಸುಧಾರಿಸಬೇಕೆಂಬ ಎಚ್ಚರಿಕೆಯ ಪಾಠವನ್ನು ಸಹ ನಾವು ಕಲಿತಿದ್ದೇವೆ. ಹಾಗಾಗಿ ಇನ್ನು ಮುಂದೆ ನಾವು ಓವರ್ ರೇಟ್ ನಲ್ಲಿ ಯಾವುದೇ ತಪ್ಪು ಮಾಡದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಹೇಳಿದರು. ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಸಹ ಗೆದ್ದು ಈಗಲೇ ಭಾರತ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.